ಈ ದಿಕ್ಕಿನಲ್ಲಿ ರಾಧಾ ಕೃಷ್ಣನ ಫೋಟೋ ಹಾಕಿದರೆ ವೈವಾಹಿಕ ಜೀವನದಲ್ಲಿ ನೆಮ್ಮೆದಿ ಖಂಡಿತ ಇರುತ್ತದೆ

Written by Soma Shekar

Published on:

---Join Our Channel---

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಟ್ಟಿರುವ ಎಲ್ಲಾ ವಸ್ತುಗಳ ಶುಭ ಮತ್ತು ಅಶುಭ ಸ್ಥಳಗಳ ಕುರಿತಾಗಿ ಹೇಳಲಾಗುತ್ತದೆ. ಏಕೆಂದರೆ ಆ ವಸ್ತುಗಳು ನಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮವನ್ನು ಉಂಟು ಮಾಡುತ್ತವೆ. ವಾಸ್ತು ಪ್ರಕಾರ, ಮನೆಯಲ್ಲಿ ನಾವು ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಾನಸಿಕ ಶಾಂತಿಯನ್ನು ಪಡೆಯಬಹುದು ಹಾಗೂ ಮನೆಯಲ್ಲೊಂದು ಧನಾತ್ಮಕ ಶಕ್ತಿಯ ಸಂಚಾರವೂ ಆಗುತ್ತದೆ ಎನ್ನಲಾಗಿದೆ. ಅದಕ್ಕಾಗಿಯೇ ಬಹಳಷ್ಟು ಜನರು ವಾಸ್ತುವಿಗೆ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡುವರು.

ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ, ದಾಂಪತ್ಯ ಜೀವನದಲ್ಲಿ ಪ್ರೀತಿ, ಮನೆಯಲ್ಲಿ ಸುಖ-ಶಾಂತಿ ನೆಲೆಸಲು ಮನೆಯಲ್ಲಿ ದೇವಾನುದೇವತೆಗಳ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಮಾರ್ಗಗಳನ್ನು ನಮ್ಮ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಆದರೆ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಕೆಲವೊಂದು ನಿಯಮಗಳು ಇವೆ‌. ರಾಧಾ-ಕೃಷ್ಣ ಇಬ್ಭರ ನಡುವಿನ ಪ್ರೀತಿ ಅನಂತವಾದುದು. ಯಾವುದೇ ಮನೆಯಲ್ಲಿ ಅವರ ಚಿತ್ರವನ್ನು ಇಟ್ಟರೆ ಅವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎನ್ನಲಾಗಿದೆ‌.

ಮನೆಯಲ್ಲಿ ರಾಧಾ, ಕೃಷ್ಣರ ಚಿತ್ರ ಎಲ್ಲಿ ಇಡಬೇಕು ಮತ್ತು ಅದನ್ನು ಇಡುವಾಗ ಯಾವೆಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಬೇಕು ಎನ್ನುವುದನ್ನು ತಿಳಿಯೋಣ ಬನ್ನಿ.

ದಾಂಪತ್ಯ ಜೀವನದಲ್ಲಿ ಮಾಧುರ್ಯ: ಮಲಗುವ ಕೋಣೆಯಲ್ಲಿ ದೇವರ ಚಿತ್ರಗಳನ್ನು ಹಾಕುವುದು ಒಳ್ಳೆಯದೆಂದು ಪರಿಗಣಿಸಿಲ್ಲ. ಆದರೆ ಅದು ರಾಧಾ-ಕೃಷ್ಣರ ಚಿತ್ರವಾಗಿದ್ದರೆ, ಅದನ್ನು ಮಲಗುವ ಕೋಣೆಯಲ್ಲಿ ಹಾಕಬಹುದಾಗಿದೆ. ಏಕೆಂದರೆ ಅವರು ಪ್ರೀತಿಯ ಸಂಕೇತ ಎನ್ನಲಾಗಿದೆ. ಮಲಗುವ ಕೋಣೆಯಲ್ಲಿ ಅವರ ಚಿತ್ರವನ್ನು ಹಾಕುವುದು ದಾಂಪತ್ಯ ಜೀವನದಲ್ಲಿ ಮಧುರವಾದ ಭಾವವನ್ನು ಮೂಡಿಸುತ್ತದೆ. ಪತಿ-ಪತ್ನಿಯರ ನಡುವೆ ಟೆನ್ಶನ್ ಕಡಿಮೆ ಮಾಡಿ ಪ್ರೀತಿ ಹೆಚ್ಚುತ್ತದೆ. ‌

ಗರ್ಭಿಣಿ ಕೊಠಡಿ: ಗರ್ಭಿಣಿ ಕೋಣೆಯಲ್ಲಿ ಶ್ರೀ ಕೃಷ್ಣನ ಮಗುವಿನ ರೂಪದ ಭಾವಚಿತ್ರವನ್ನು ಇಡಬೇಕು. ಶ್ರೀ ಕೃಷ್ಣನ ಮಗುವಿನ ರೂಪವು ಗರ್ಭಿಣಿ ಮಹಿಳೆಯ ಮನಸ್ಸನ್ನು ಉಲ್ಲಾಸಭರಿತವಾಗಿ ಮತ್ತು ಸಂತೋಷದಾಯಕವಾಗಿ ಇರುತ್ತದೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಮೂಡುವುದಿಲ್ಲ. ಗರ್ಭಾವಸ್ಥೆಯಲ್ಲಿರುವ ಸ್ತ್ರೀಯರು ಶ್ರೀ ಕೃಷ್ಣನ ಮಗುವಿನ ರೂಪವನ್ನು ನೋಡುವುದರಿಂದ, ಮಗುವಿನ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ.

ಈ ದಿಕ್ಕಿನಲ್ಲಿ ಚಿತ್ರವು ಪ್ರಯೋಜನಕಾರಿಯಾಗಿದೆ:
ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ಚಿತ್ರವನ್ನು ಈಶಾನ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದೆಂದು ಹೇಳಲಾಗಿದೆ. ಮತ್ತೊಂದೆಡೆ, ಮಲಗುವ ಕೋಣೆಯಲ್ಲಿ ಅಟ್ಯಾಚ್ಡ್ ಬಾತ್ರೂಮ್ ಇದ್ದರೆ, ರಾಧಾ ಕೃಷ್ಣರ ಫೋಟೋ ಆ ಗೋಡೆಯ ಮೇಲೆ ಖಂಡಿತ ಇರಬಾರದು.

ನೀವು ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ಚಿತ್ರವನ್ನು ಹಾಕುತ್ತಿದ್ದರೆ, ಅದರಲ್ಲಿ ಬೇರೆ ಯಾವುದೇ ದೇವತೆಗಳು ಅಥವಾ ಗೋಪಿಕೆಯರು ಇರಬಾರದು ಎಂಬುದನ್ನು ನೆನಪಿನಲ್ಲಿ ಇಟ್ಟು ಕೊಳ್ಳಿ.‌ ನೀವು ಕೃಷ್ಣನ ಮಗುವಿನ ರೂಪದ ಚಿತ್ರವನ್ನು ಹಾಕುತ್ತಿದ್ದರೆ, ಅದನ್ನು ಪೂರ್ವ ದಿಕ್ಕಿನಲ್ಲಿ ಮಾತ್ರ ಇರಿಸಿ. ಆದರೆ ಚಿತ್ರದ ಕಡೆಗೆ ಕಾಲು ಹಾಕಿ ಮಲಗದಂತೆ ಎಚ್ಚರವಹಿಸಿ.

ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಉಪದೇಶಿಸುತ್ತಿರುವ ಚಿತ್ರವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇರಿಸಿ. ಇದು ಕೆಲಸದ ಸಮಯದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಣೆಗೆ ನೆರವನ್ನು ನೀಡುತ್ತದೆ. ಒಟ್ಟಾರೆ ವಾಸ್ತು ಎನ್ನುವುದು ನಂಬಿಕೆಯ ವಿಚಾರವಾಗಿದ್ದು, ಇದನ್ನು ಆಚರಣೆಗೆ ತರುವುದು, ಬಿಡುವುದು ಅವರವರ ವೈಯಕ್ತಿಕ ನಿರ್ಧಾರವಾಗಿರುತ್ತದೆ.

Leave a Comment