ಈ ಗುಣಗಳು ನಿಮ್ಮಲ್ಲಿದೆಯೇ?? ಇದ್ರೆ ಶತೃಗಳು ನಿಮ್ಮನ್ನು ಮೆಚ್ಚುವರು, ನೀವು ಆದರ್ಶ ವ್ಯಕ್ತಿಯಾಗುವಿರಿ.

Written by Soma Shekar

Published on:

---Join Our Channel---

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಹಾ ಸ್ವಲ್ಪ ಒಳ್ಳೆಯ ಹಾಗೂ ಸ್ವಲ್ಪ ಕೆಟ್ಟ ಲಕ್ಷಣಗಳು ಸಹಜವಾಗಿಯೇ ಇರುತ್ತದೆ. ಸಾಮಾನ್ಯವಾಗಿ ಜನರ ಗಮನ ನಕಾರಾತ್ಮಕ ವಿಷಯಗಳ ಕಡೆಗೆ ಗಮನ ಹರಿಯುತ್ತದೆ. ಆದರೆ ನಾವು ನಮ್ಮ‌ ಗಮನವನ್ನು ಸಕಾರಾತ್ಮಕ ವಿಷಯಗಳ ಕಡೆಗೆ ಗಮನವನ್ನು ಹರಿಸಿ ತನ್ನಲ್ಲಿನ ಉತ್ತಮ ಗುಣಗಳನ್ನು ಸುಧಾರಿಸಿಕೊಂಡರೆ ನಾವು ಜೀವನದಲ್ಲಿ ಏನನ್ನೇ ಆಗಲೀ ಸಾಧಿಸಬಹುದು ಎನ್ನುವುದು ಸತ್ಯ. ಜಗತ್ತಿನಲ್ಲಿ ಇತರರಿಗೆ ಇಂದು ಯಾರೆಲ್ಲಾ ಆದರ್ಶ ಎನಿಸಿರುವರೋ ಅವರೆಲ್ಲಾ ಇದನ್ನು ಪಾಲಿಸಿದವರೇ ಆಗಿದ್ದಾರೆ.‌

ಆಚಾರ್ಯ ಚಾಣಾಕ್ಯನು ನಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಲು ಕೆಲವು ಸಲಹೆಗಳನ್ನು ನೀಡಿದ್ದಾರೆ. ನಿಮ್ಮಲ್ಲಿ ಈ ಗುಣಗಳೇನಾದರೂ ಇದ್ದಲ್ಲಿ ನಿಮ್ಮ ಶ ತೃ ಗಳು ಸಹಾ ನಿಮ್ಮ ಹಿಂಬಾಲಕರಾಗುವುದು ಎನ್ನುತ್ತಾನೆ ಚಾಣಾಕ್ಯ. ಈ ಗುಣಗಳು ವ್ಯಕ್ತಿಯಲ್ಲಿ ಕ್ಷಿಪ್ರ ಗತಿಯಲ್ಲಿ ಪ್ರಗತಿಯ ಹಾದಿಯಲ್ಲಿ ನಡೆಯುವಂತೆ ಮಾಡುತ್ತದೆ ಎನ್ನುವುದು ವಾಸ್ತವ. ಹಾಗಾದರೆ ಚಾಣಾಕ್ಯ ತಿಳಿಸಿರುವ ಆ ಗುಣಗಳು ಏನೆಂದರೆ ತಿಳಿಯೋಣ ಬನ್ನಿ.

ಜ್ಞಾನವನ್ನು ಗಳಿಸುವುದು : ಜ್ಞಾನವನ್ನು ಯಾರಿಂದಲೂ ಸಹಾ ಕದಿಯುವುದು ಸಾಧ್ಯವಿಲ್ಲ. ಹೆಚ್ಚು ಜ್ಞಾನ ಗಳಿಸದಷ್ಟು ನಿಮ್ಮ ಪಾಂಡಿತ್ಯ ಹೆಚ್ಚುವುದರ ಜೊತೆಗೆ ನಿಮ್ಮ ವರ್ಚಸ್ಸು ಸಹಾ ಹೆಚ್ಚುತ್ತದೆ. ಜ್ಞಾನಕ್ಕಾಗಿ ಎಷ್ಟು ಖರ್ಚು ಮಾಡಿದರೂ ನಷ್ಟವಾಗದು, ಏಕೆಂದರೆ ಅದರಿಂದ ಜ್ಞಾನ ಇನ್ನಷ್ಟು ವೃದ್ಧಿಯಾಗುತ್ತದೆ. ಆದ್ದರಿಂದ ಹೆಚ್ಚು ಜ್ಞಾನವನ್ನು ಪಡೆಯಲು ಪ್ರಯತ್ನಿಸಿ, ಜ್ಞಾನವು ಅಜ್ಞಾನದ ಗಾಡಾಂಧಕಾರವನ್ನು ತೊಡೆಯಲು ನೆರವಾಗುತ್ತದೆ.

ಕೌಶಲ್ಯ ಅಥವಾ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವುದು : ಜ್ಞಾನದ ಜೊತೆಗೆ ನಿಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು. ನಿಮ್ಮ ವೃತ್ತಿಯಲ್ಲಿ ಎಷ್ಟೇ ಅನುಭವ ಇದ್ದರೂ ಸಹಾ, ಕಾಲ ಮುಂದೆ ಹೋದಂತೆ ಇನ್ನಷ್ಟು, ಮತ್ತಷ್ಟು ಕೌಶಲ್ಯವನ್ನು ವೃದ್ಧಿ ಪಡಿಸಿಕೊಳ್ಳಿ. ಇದರಿಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ನೀವು ಉನ್ನತ ಸ್ಥಾನವನ್ನು ತಲುಪಲು ಸಾಧ್ಯವಾಗುತ್ತದೆ. ಹೀಗೆ ಕೌಶಲ್ಯವನ್ನು ವೃದ್ಧಿಸಿಕೊಂಡವರಿಗೆ ಇನ್ನೂ ಕೆಲವರು ಜೊತೆಯಾಗುತ್ತಾರೆ.

ತತ್ವಗಳು ಹಾಗೂ ಮೌಲ್ಯಗಳನ್ನು ಮರೆಯಬಾರದು: ನೀವು ಜೀವನದಲ್ಲಿ ಎಂತಹ ಸ್ಥಾನವನ್ನು ಬೇಕಾದರೂ ತಲುಪಬಹುದು. ಆದರೆ ಆಗ ನೀವು ಜೀವನದ ತತ್ವಗಳು ಹಾಗೂ ಮೌಲ್ಯಗಳನ್ನು ಮರೆಯಬಾರದು. ನಿಮ್ಮ ತತ್ವಗಳು ಹಾಗೂ ಮೌಲ್ಯಗಳು ನಿಮ್ಮ‌ ವ್ಯಕ್ತಿತ್ವವನ್ನು ಇನ್ನಷ್ಟು ಬೆಳಗುವಂತೆ ಮಾಡುತ್ತದೆ. ಯಾವುದೇ ಕಾರಣಕ್ಕೂ ಅಹಂಕಾರವನ್ನು ಪ್ರದರ್ಶನ ಮಾಡಬೇಡಿ.. ಚಾಣಾಕ್ಯನ ಪ್ರಕಾರ ಇಂತಹ ಗುಣಗಳು ನಿಮ್ಮದಾದರೆ ಜೀವನದಲ್ಲಿ ನೀವು ಏನು ಬೇಕಾದರೂ ಸಾಧಿಸಬಹುದು.

Leave a Comment