ಇಲ್ಲಿ ಕರಡಿಯ ವೇಷ ಧರಿಸಿ ಬೆಳೆಯ ರಕ್ಷಣೆ ಮಾಡುವವನ ಮಾಸಿಕ ವೇತನ 15 ಸಾವಿರ ರೂ ಅಂದ್ರೆ ನಂಬ್ತೀರಾ??

Written by Soma Shekar

Published on:

---Join Our Channel---

ಮನುಷ್ಯ ತನ್ನ ಜೀವನವನ್ನು ನಡೆಸಲು ಆತನಿಗೆ ಪ್ರಮುಖವಾದ ಆಧಾರವೆಂದರೆ ಅದು ಉದ್ಯೋಗ. ಕೆಲಸ ಮಾಡಿ, ಬಂದ ಹಣದಿಂದ ಬದುಕೊಂದನ್ನು ಕಟ್ಟಿಕೊಳ್ಳುವ ಆಸೆ ಅನೇಕರಿಗೆ ಇರುತ್ತದೆ. ಕೆಲವರ ಈ ಕನಸು ನನಸಾದರೆ, ಇನ್ನೂ ಕೆಲವರಿಗೆ ಉದ್ಯೋಗವು ಗಗನ ಕುಸುಮವಾಗಿರುತ್ತದೆ. ಇಂದು ಜೀವನಾಧಾರಕ್ಕಾಗಿ ಅನೇಕ ಜನರು ವೈವಿದ್ಯಮಯ ಎನಿಸುವಂತಹ ನಾನಾ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಕೆಲವು ಉದ್ಯೋಗ ಗಳು ಖಂಡಿತ ನಮಗೆ ಅಚ್ಚರಿಯನ್ನು ಮೂಡಿಸಿದರೆ, ಇನ್ನು ಕೆಲವು ಉದ್ಯೋಗಗಳ ಬಗ್ಗೆ ಜನ ಬಹಳ ಸಣ್ಣತನದಿಂದ ಮಾತಾಡುವುದುಂಟು.

ಆದರೆ ಅನೇಕ ಸಂದರ್ಭಗಳಲ್ಲಿ ಯಾವ ಕೆಲಸ ವಿಚಿತ್ರವಾಗಿ ಕಾಣುತ್ತದೆಯೋ ಅಂತಹ ಕೆಲಸದಲ್ಲಿ ಸಿಗುವ ವೇತನ ನಮ್ಮ ಊಹೆಯನ್ನು ಮೀರಿಸುತ್ತದೆ. ಪ್ರಸ್ತುತ ಅಂತಹುದೇ ಒಂದು ಉದ್ಯೋಗ ಹಾಗೂ ವೇತನದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ದೊಡ್ಡ ಸುದ್ದಿಯಾಗಿದೆ. ತೆಲಂಗಾಣದ ಸಿದ್ಧಿಪೇಟೆ ಜಿಲ್ಲೆಯಲ್ಲಿ ಒಬ್ಬ ರೈತ ತಾವು ಬೆಳೆದ ಬೆಳೆಯನ್ನು ಕೋತಿಗಳು ಹಾಗೂ ಕಾಡುಹಂದಿಗಳ ಹಾವಳಿಯಿಂದ ರಕ್ಷಿಸಿಕೊಳ್ಳಲು ಮಾಡಿರುವ ಉಪಾಯ ಇದೀಗ ಇಡೀ ದೇಶದಲ್ಲಿ ಸುದ್ದಿಯಾಗಿದೆ.

ಸಿದ್ದಿಪೇಟೆ ಜಿಲ್ಲೆಯ ಕೊಹೆಡಾ ಎನ್ನುವಲ್ಲಿ ರೈತರಾಗಿರುವ ಭಾಸ್ಕರ್ ರೆಡ್ಡಿ ಅವರು ಬೆಳೆಯನ್ನು ರಕ್ಷಿಸಲು ಮಾಡಿರುವ ವಿಶಿಷ್ಟವಾದ ಉಪಾಯ ಎಲ್ಲರ ಗಮನವನ್ನು ಸೆಳೆದಿದೆ. ಹಾಗಾದರೆ ಭಾಸ್ಕರ್ ರೆಡ್ಡಿ ಅವರು ಮಾಡಿದಂತಹ ಉಪಾಯವೇನು? ತಿಳಿಯೋಣ ಬನ್ನಿ. ಭಾಸ್ಕರ್ ರೆಡ್ಡಿ ಅವರು ಕೋತಿ ಹಾಗೂ ಕಾಡುಹಂದಿಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ ಒಬ್ಬ ವ್ಯಕ್ತಿಗೆ ಕರಡಿಯ ವೇಷವನ್ನು ಹಾಕಿಸಿ ಆತನನ್ನು ಹೊಲದಲ್ಲಿ ಕಾವಲಿಗೆ ಇರಿಸಿದ್ದಾರೆ. ಕರಡಿಯ ವೇಷವನ್ನು ಧರಿಸಿದ ವ್ಯಕ್ತಿಯು ತೋಟದಲ್ಲೆಲ್ಲಾ ಓಡಾಡುತ್ತಾರೆ.

ಆತ ಕೋತ, ಕಾಡುಹಂದಿಗಳು ಅಥವಾ ಇನ್ನಿತರೆ ಪ್ರಾಣಿಗಳು ಬರುವುದನ್ನು ನಿಯಂತ್ರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ವಿಶೇಷವೆಂದರೆ ಭಾಸ್ಕರ್ ರೆಡ್ಡಿ ಅವರು ಕರಡಿಯ ವೇಷ ಧರಿಸಿರುವ ವ್ಯಕ್ತಿಗೆ ದಿನಕ್ಕೆ 500 ರೂಪಾಯಿಗಳನ್ನು ಸಂಬಳವಾಗಿ ನೀಡುತ್ತಿದ್ದಾರೆ. ಹೀಗೆ ಕರಡಿಯ ವೇಷಧರಿಸಿದ ವ್ಯಕ್ತಿ ದಿನಕ್ಕೆ 500 ರ ಲೆಕ್ಕದಲ್ಲಿ ತಿಂಗಳಿಗೆ 15 ಸಾವಿರ ರೂಪಾಯಿಗಳ ವೇತನ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆದ ಕೂಡಲೇ ಕರಡಿಯ ವೇಷ ಧರಿಸಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಪೋಟೋಗಳು ಎಲ್ಲೆಡೆ ಹರಿದಾಡುತ್ತಿದವೆ.

ಈ ಸುದ್ದಿಯನ್ನು ನೋಡಿದ ನೆಟ್ಟಿಗರು ಸಹ ವೈವಿಧ್ಯಮಯ ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಹಳಷ್ಟು ಜನ ಕರಡಿಯ ವೇಷ ಧರಿಸಿರುವ ವ್ಯಕ್ತಿಯ ಸಂಬಳವನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದವರಿಗೂ ಆರಂಭದಲ್ಲಿ ಇಷ್ಟೊಂದು ಸಂಬಳ ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಕೆಲವರು ಹೀಗೆ ಕರಡಿ ವೇಷ ಧರಿಸಿ ಕೆಲಸ ಮಾಡುವುದಕ್ಕೆ ಸುಲಭವಲ್ಲ ಎಂದಿದ್ದಾರೆ.

Leave a Comment