ಇರುವೆ, ಸೀಗಡಿಗಳು, ಸಸ್ಯಗಳೊಂದಿಗೆ ಅಂತರಿಕ್ಷ ಬಾಹ್ಯಾಕಾಶ ಕೇಂದ್ರಕ್ಕೆ ಹಾರಿದ ಸ್ಪೇಸ್ ಎಕ್ಸ್ ರಾಕೆಟ್

Written by Soma Shekar

Published on:

---Join Our Channel---

ಅಂತರಿಕ್ಷದ ಬಗ್ಗೆ ತಿಳಿದುಕೊಳ್ಳುವ ಸಂಶೋಧನೆಗಳು ಸದಾ ನಡೆಯುತ್ತಲೇ ಬರುತ್ತಿವೆ. ಅಂತರಿಕ್ಷದಲ್ಲಿ ಸಂಭವಿಸುವ ಅನೂಹ್ಯವಾದ ವಿದ್ಯಮಾನಗಳ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸುವ ಕೆಲಸವನ್ನು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ಮಾಡುತ್ತಿದ್ದು, ಇದೀಗ ಈ ವಿಷಯದಲ್ಲಿ ಹೊಸದೊಂದು ಹೆಜ್ಜೆಯನ್ನು ಇಡಲಾಗಿದೆ. ಹೌದು ಫಾಲ್ಕನ್ ರಾಕೆಟ್ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇಂದು ಮುಂಜಾನೆ ಅಂತರಿಕ್ಷಕ್ಕೆ ಹಾರಿದೆ. ಈ ರಾಕೆಟ್ ಅನ್ನು ಸ್ಪೇಸ್ ಎಕ್ಸ್ ಸಂಸ್ಥೆಯು ಹಾರಿಸಿದ್ದು, ಸ್ಪೇಸ್ ಎಕ್ಸ್ ಸಂಸ್ಥೆಯ ಮಾಲೀಕ ಎಲೆನ್ ಮಸ್ಕ್ ವೈಜ್ಞಾನಿಕ ಕಾದಂಬರಿ ಬರಹಗಾರ ಇಯಾನ್ ಬ್ಯಾಂಕ್ಸ್ ಅವರ ಗೌರವ ಸೂಚಕವಾಗಿ ಅವರ ಹೆಸರನ್ನೇ ಈ ರಾಕೆಟ್ ನ ಬೂಸ್ಡರ್ ರಿಕವರಿ ಶಿಪ್ ಗೆ ಇಟ್ಟಿದ್ದಾರೆ.

ಡ್ರ್ಯಾಗನ್‌ ರಾಕೆಟ್ ಗೆ 4,800 ಪೌಂಡ್ ಗಳು ಅಂದರೆ ಸುಮಾರು 2,170 ಕಿಲೋಗ್ರಾಂ ಗಳಿಗಿಂತ ಅಧಿಕ ತೂಕವನ್ನು ಹೊತ್ತು ಸಾಗುವ ಸಾಮರ್ಥ್ಯವಿದೆ. ಪ್ರಯೋಗಗಳನ್ನು ನಡೆಸುವ ಸಲುವಾಗಿ ಬಾಹ್ಯಾಕಾಶದ ಏಳು ನಿಲ್ದಾಣಗಳಲ್ಲಿ ಇರುವ ವಿಜ್ಞಾನಿಗಳಿಗೆ ತಾಜಾ ಆಹಾರವನ್ನು ಸರಬರಾಜು ಮಾಡಲು ಸಹಾ ಈ ನೌಕೆ ಪ್ರಮುಖವಾದ ಪಾತ್ರವನ್ನು ನಿರ್ವಹಿಸಲಿದೆ ಎಂದು ಹೇಳಲಾಗಿದೆ. ಇದಲ್ಲದೇ ಈಗ ಅಂತರಿಕ್ಷಕ್ಕೆ ಹಾರಿರುವ ರಾಕೆಟ್ ನಲ್ಲಿ ಮತ್ತೊಂದು ವಿಶೇಷ ಕೂಡಾ ಇದೆ. ಈ ರಾಕೆಟ್ ಮೂಲಕ ಕೆಲವು ಜೀವಿಗಳನ್ನು ಅಂತರಿಕ್ಷಕ್ಕೆ ಕಳುಹಿಸಲಾಗಿದೆ.

ಗರ್ಲ್ ಸ್ಕೌಟ್ಸ್ ಸಂಸ್ಥೆಯು ಇರುವೆಗಳು, ಸೀಗಡಿಗಳು ಹಾಗೂ ಸಸ್ಯಗಳನ್ನು ಪ್ರಯೋಗದ ಸಲುವಾಗಿ ಅಂತರಿಕ್ಷ ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಲಾಗಿದೆ. ಗುರುತ್ವಾಕರ್ಷಣ ಬಲವೇ ಇಲ್ಲದ ಅಂತರಿಕ್ಷದಲ್ಲಿ ಈ ಜೀವಿಗಳ ವರ್ತನೆ ಹೇಗೆ ಇರಲಿದೆ? ಅವುಗಳು ಹೇಗೆ ಆ ಪರಿಸ್ಥಿತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತವೆ ಎಂಬುದನ್ನು ಪರೀಕ್ಷಿಸಲು ವಿಜ್ಞಾನಿಗಳಿಗೆ ಅವಕಾಶ ಸಿಗಲಿದೆ. ಈ ಮೂಲಕ ಈ ಜೀವಿಗಳ ವರ್ತನೆ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ತೆರೆ ಬೀಳಲಿದೆ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಸ್ಪೇಸ್ ಎಕ್ಸ್ ನ ಈ ರಾಕೆಟ್ ಉಡಾವಣೆಯು ಕುತೂಹಲವನ್ನು ಕೆರಳಿಸಿದೆ.

Leave a Comment