ಇನ್ಮುಂದೆ ಸಿನಿಮಾ‌ ಟಿಕೆಟ್ ಬೆಲೆ 80 ರೂ ಮಾತ್ರ: ತೆಲುಗು ಸಿನಿ ರಂಗಕ್ಕೆ ದೊಡ್ಡ ಶಾಕ್ ಕೊಟ್ಟ ಜಗನ್ ಸರ್ಕಾರ, ಮೆಗಾಸ್ಟಾರ್ ಅಸಮಾಧಾನ

Written by Soma Shekar

Published on:

---Join Our Channel---

ಕಳೆದ ಕೆಲವು ದಿನಗಳಿಂದಲೂ ಕೂಡಾ ಆಂಧ್ರಪ್ರದೇಶದಲ್ಲಿ ಸಿನಿಮಾ ಟಿಕೆಟ್ ದರವನ್ನು ಕುರಿತಂತೆ ಭಾರೀ ಚರ್ಚೆಗಳು ನಡೆಯುತ್ತಿವೆ. ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಮಾಡಿರುವ ನಿರ್ಧಾರಕ್ಕೆ ತೆಲುಗು ಚಿತ್ರರಂಗ ಸಿಟ್ಟು, ಆ ಕ್ರೋ ಶಗಳನ್ನು ಹೊರಹಾಕುತ್ತಿದೆ. ಸಿನಿಮಾ ರಂಗದ ಈ ಕೋಪ ಲ, ಅಸಮಾಧಾನದ ನಡುವೆಯೂ ಕೂಡಾ ಸಿಎಂ ಜಗನ್ ಮೋಹನ್ ರೆಡ್ಡಿ ಸಿನಿಮಾ ಟಿಕೆಟ್ ದರಕ್ಕೆ ಸಂಬಂಧಿಸಿದ ಹಾಗೆ ಹೊಸ ಮಸೂದೆಯನ್ನು ಜಾರಿ ಮಾಡಿದ್ದಾರೆ. ಈ ಹೊಸ ಮಸೂದೆಯ ಜಾರಿಯು ಇದೀಗ ತೆಲುಗು ಚಿತ್ರರಂಗಕ್ಕೆ ದೊಡ್ಡ ಆ ಘಾ ತವನ್ನೇ ನೀಡಿದೆ.

ಆಂಧ್ರಪ್ರದೇಶ ಸರ್ಕಾರ ಸಿನಿಮಾ ರಂಗದ ಮೇಲೆ ತನ್ನ ದೃಷ್ಟಿಯನ್ನು ಹರಿಸಿದೆ. ಆಂಧ್ರಪ್ರದೇಶದಲ್ಲಿ ವಿಶೇಷ ದಿನಗಳಂದು ಸಿನಿಮಾ ಟಿಕೆಟ್ ಗಳ ದರವನ್ನು ಹೆಚ್ಚಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾದಾಗ ವಿಶೇಷ ಶೋ ಗಳಿಗಾಗಿ ಸಾವಿರ ರೂಪಾಯಿಗಳವರೆಗೂ ಟಿಕೆಟ್ ಮಾರಾಟವಾಗುತ್ತದೆ. ಬ್ಲಾಕ್ ನಲ್ಲಿ ಟಿಕೆಟ್ ಖರೀದಿ ಮಾಡಲಾಗುತ್ತದೆ. ಹಬ್ಬ-ಹರಿದಿನಗಳ ದಿನ, ರಜೆಯ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಟಿಕೆಟ್ ಗಳ ಬೆಲೆ ಹೆಚ್ಚಾಗುತ್ತದೆ.

ಈಗ ಇವೆಲ್ಲವನ್ನೂ ತಡೆಯುವ ಸಲುವಾಗಿ ಆಂಧ್ರಪ್ರದೇಶ ಸರ್ಕಾರವು ಸಿನಿಮಾ ಟಿಕೆಟ್ ಬೆಲೆಯನ್ನು 80 ರೂಪಾಯಿಗೆ ನಿಗಧಿ ಮಾಡಿದೆ. ಇನ್ನು ಮುಂದೆ ಸಿನಿಮಾ ಟಿಕೆಟ್ ದರ 80 ರೂ ಮಾತ್ರವೇ ಇದ್ದು, ಇದಕ್ಕಿಂತ ಅಧಿಕ ಬೆಲೆಗೆ ಮಾರಾಟ ಮಾಡುವ ಹಾಗಿಲ್ಲ. ಈ ಆದೇಶವನ್ನು ಸರ್ಕಾರ ನೀಡಿದ ನಂತರ, ಸರ್ಕಾರದ ಈ ನಿರ್ಧಾರ ಟಾಲಿವುಡ್ ನ ಸ್ಟಾರ್ ನಟರ ಸಿಟ್ಟಿಗೆ ಕಾರಣವಾಗಿದೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ಕೂಡಾ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮೆಗಾಸ್ಟಾರ್ ಚಿರಂಜೀವಿ ಟ್ವಿಟರ್ ನಲ್ಲಿ, ಚಿತ್ರ ರಂಗದ ಪಾರದರ್ಶಕತೆಯನ್ನು ಕೋರಿದ ವಿಧಾನದಲ್ಲಿ, ಆನ್ಲೈನ್ ಟಿಕೆಟ್ ಗಳ ಬಿಲ್ ನ ಪರಿಚಯ ಮಾಡಿರುವುದು ಸಂತೋಷ ಪಡುವ ವಿಚಾರವೇ ಆದರೆ, ಚಿತ್ರಮಂದಿರಗಳ ಉಳಿವಿಗಾಗಿ, ಚಲನಚಿತ್ರದ ಮೇಲೆ ಆಧಾರಿತವಾಗಿ ಬದುಕುತ್ತಿರುವ ಅನೇಕ ಕುಟುಂಬಗಳ ಜೀವನಕ್ಕಾಗಿ, ಕಡಿಮೆ ಮಾಡಿದ ಟಿಕೆಟ್ ದರವನ್ನು ದೇಶದ ಇತರೆ ಸ್ಟೇಟ್ ಗಳಲ್ಲಿ ಇರುವಂತೆ, ಕಾಲಕ್ಕನುಗುಣವಾಗಿ ನಿರ್ಣಯಿಸುವುದು ಸೂಕ್ತ.

ದೇಶದಲ್ಲಿ ಒಂದೇ ಜಿ ಎಸ್ ಟಿ ಟ್ಯಾಕ್ಸ್ ಅನ್ನು ಸರ್ಕಾರಗಳು ಪಡೆಯುವಾಗ ಟಿಕೆಟ್ ದರದಲ್ಲೂ ಸಹಾ ಅದನ್ನೇ ಪಾಲಿಸುವುದು ಸೂಕ್ತ. ದಯವಿಟ್ಟು ಈ ಸಮಸ್ಯೆಯನ್ನು ಪುನರಾವರ್ತಿಸಿ. ತೆಲುಗು ಉದ್ಯಮವು ಆ ಪ್ರೋತ್ಸಾಹದ ಮೇಲೆಯೇ ನಿಲ್ಲಲು ಸಾಧ್ಯ ಎಂದು ಬರೆದುಕೊಂಡು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಒಟ್ಟಾರೆ ಸಿನಿಮಾ ಟಿಕೆಟ್ ದರ ಕಡಿಮೆ ಮಾಡಿರುವುದಕ್ಕೆ ಸಾಮಾನ್ಯ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Comment