ಇನ್ನೆಷ್ಟು ದಿನ ಈ ಮೌನ?ಹೀಗೆ ಆದ್ರೆ ಪ್ಯಾನ್ ಇಂಡಿಯಾ ಕ್ರೇಜ್ ಕಡಿಮೆಯಾಗಲಿದೆ: ನಟ ಯಶ ಹೊಸ ಸಿನಿಮಾ ಯಾವಾಗ??

Written by Soma Shekar

Published on:

---Join Our Channel---

ಕೆಜಿಎಫ್ ಚಾಪ್ಟರ್ ಒಂದು ಮತ್ತು ಎರಡನ್ನು ಜನರು, ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಮತ್ತು ಸಿ‌ನಿ ಪ್ರೇಮಿಗಳು ಹೇಗೆ ತಾನೇ ಮರೆಯಲು ಸಾಧ್ಯ?? ಈ ಸಿನಿಮಾಗಳು ಸಾಧಿಸಿದ ಯಶಸ್ಸು, ಬರೆದ ದಾಖಲೆಗಳ ನಂತರ ಸ್ಯಾಂಡಲ್ವುಡ್ ನಟ ಯಶ್ ಅವರು ಸಹಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಬಾಹುಬಲಿ ಸಿನಿಮಾದ ನಂತರ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಕ್ರೇಜ್ ಸೃಷ್ಟಿಸಿದರೆ, ಕೆಜಿಎಫ್ ಮೂಲಕ ಅಂತಹುದೇ ಒಂದು ಕ್ರೇಜ್ ಅನ್ನು ನಟ ಯಶ್ ಸೃಷ್ಟಿ ಮಾಡಿದ್ದಾರೆ. ಆದರೆ ಇಲ್ಲಿ ಒಂದು ಪ್ರಮುಖವಾದ ವ್ಯತ್ಯಾಸವನ್ನು ನಾವು ಗುರುತಿಸಬಹುದಾಗಿದೆ.

ನಟ ಪ್ರಭಾಸ್ ಬಾಹುಬಲಿ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬಹುಬೇಡಿಕೆ ಪಡೆದುಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಬಾಹುಬಲಿ ಆದ ನಂತರ ಪ್ರಭಾಸ್ ಅಭಿನಯದ ಸಾಹೋ, ರಾಧೇ ಶ್ಯಾಮ್ ಸಿನಿಮಾಗಳು ಬಂದಿವೆ. ಅಲ್ಲದೇ ಅವರು ಆದಿಪುರುಷ್, ಸಲಾರ್ ಸಿ‌ನಿಮಾ ಮಾಡುತ್ತಿದ್ದಾರೆ. ಇದಲ್ಲದೇ ಪ್ರಾಜೆಕ್ಟ್‌ ಕೆ ಮತ್ತು ಸ್ಪಿರಿಟ್ ಸಿನಿಮಾಗಳ ಕೆಲಸಗಳು ನಡೆಯುತ್ತಿವೆ. ಹೀಗೆ ನಟ ಪ್ರಭಾಸ್ ಒಂದರ ನಂತರ ಮತ್ತೊಂದು ಸಿ‌ನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಆದರೆ ನಟ ಯಶ್ ಅವರು ಮಾತ್ರ ಕೆಜಿಎಫ್ ನ ಭರ್ಜರಿ ಗೆಲುವಿನ ನಂತರ, ಪಡೆದಿರುವ ದೊಡ್ಡ ಮಟ್ಟದ ಜನಪ್ರಿಯತೆಯ ಹೊರತಾಗಿಯೂ ಅವರು ಇನ್ನೂ ತಮ್ಮ ಯಾವುದೇ ಹೊಸ ಸಿನಿಮಾವನ್ನು ಘೋಷಣೆ ಮಾಡಿಲ್ಲ. ಇದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಈಗಾಗಲೇ ತೆಲುಗಿನ ನಿರ್ಮಾಪಕ ದಿಲ್ ರಾಜು ಮತ್ತು ಮೈತ್ರಿ ಮೂವಿಸ್ ನಂತರ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಗಳ ಸಿ‌ನಿಮಾ ಮಾಡಲಿದ್ದಾರೆ, ಕನ್ನಡದ ನಿರ್ದೇಶಕ ನರ್ತನ್ ಅವರ ಸಿನಿಮಾ ಮಾಡಲಿದ್ದಾರೆ ಎಂದೆಲ್ಲಾ ಸುದ್ದಿ ಗಳಾಗಿವೆಯೇ ಹೊರತು ಅಧಿಕೃತ ಘೋಷಣೆ ಆಗಿಲ್ಲ.

ಕೆಜಿಎಫ್-2 ನಂತರ ಯಶ್ ಅವರು ಯಾವುದೇ ಸಿನಿಮಾ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಇತ್ತೀಚಿಗೆ ಅವರ ಅಭಿಮಾನಿಗಳು ಯಶ್ 19 ಎನ್ನುವ ಹ್ಯಾಷ್ ಟ್ಯಾಗ್ ಅನ್ನು ಟ್ರೆಂಡ್ ಮಾಡಿದ್ದರು. ಈ ಮೂಲಕ ಯಶ್ ಅವರು ತಮ್ಮ ಮುಂದಿನ ಸಿನಿಮಾ ಬಗ್ಗೆ ಹೇಳುವಂತೆ ಒತ್ತಾಯವೊಂದನ್ನು ಮಾಡಿದ್ದರು. ಆದರೆ ನಟ ಯಶ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿ ಉಳಿದಿರುವುದು ಮಾತ್ರ ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದು, ಹೊಸ ಸಿನಿಮಾ ಘೋಷಣೆಯ ನಿರೀಕ್ಷೆಯಲ್ಲಿ ಇದ್ದಾರೆ ಅಭಿಮಾನಿಗಳು.

ಸಿನಿಮಾ ಪಂಡಿತರಾದರೆ ನಟ ಯಶ್ ಅವರು ಈ ರೀತಿ ಮೌನವಾಗಿ ಇರುವುದು ಸರಿಯಲ್ಲ. ಅವರು ಹೊಸ ಸಿನಿಮಾ ಘೋಷಣೆ ಮಾಡಬೇಕು. ಹೀಗೆ ತಡಮಾಡುತ್ತಾ ಹೋದರೆ ಅವರ ಪ್ಯಾನ್ ಇಂಡಿಯಾ ಕ್ರೇಜ್ ಕಡಿಮೆಯಾಗುತ್ತದೆ ಎಂದು ನುಡಿಯುತ್ತಿದ್ದಾರೆ. ನಟ ಯಶ್ ಕನ್ನಡದ ಇಬ್ಬರು ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಸಿನಿಮಾಕ್ಕಾಗಿ ಸಿದ್ಧತೆ ನಡೆಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದೆ. ಆದರೆ ಯಾವುದೇ ಸುದ್ದಿಗೂ ಕೂಡಾ ಇನ್ನೂ ಅಧಿಕೃತ ಮೊಹರು ಮಾತ್ರ ಬಿದ್ದಿಲ್ಲ.

Leave a Comment