ಇತ್ತೀಚಿಗೆ ಸದ್ದು ಮಾಡ್ತಿದೆ ಈ ಬ್ಯಾನ್ ಪದ! ಸ್ಯಾಂಡಲ್ವುಡ್ ನಲ್ಲಿ ಇದಕ್ಕೆ ಜಾಗ ಇದ್ಯಾ?

Written by Soma Shekar

Published on:

---Join Our Channel---

ಕನ್ನಡ ಚಿತ್ರೋದ್ಯಮದಲ್ಲಿ (Kannada Film Industry) ಕಳೆದ ಕೆಲವು ದಿನಗಳಿಂದಲೂ ಒಂದು ಪದ ಪದೇ ಪದೇ ಸದ್ದು ಮಾಡುತ್ತಿದೆ. ಆ ಪದ ಯಾವುದು ಎನ್ನುವುದಾದರೆ ಅದು ಬ್ಯಾನ್ (ban). ಹೌದು ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟ ಅನಿರುದ್ಧ್(Anirudh) ಅವರು ನಟಿಸುತ್ತಿದ್ದ ಜನಪ್ರಿಯ ಸೀರಿಯಲ್ ಜೊತೆ ಜೊತೆಯಲಿ (Jothe jotheyli) ತಂಡದೊಂದಿಗೆ ಆದ ಭಿನ್ನಾಭಿಪ್ರಾಯ, ಮೂಡಿದ ವೈಮನಸ್ಸಿನಿಂದ ಅವರು ಸೀರಿಯಲ್ ನಿಂದ ಹೊರಗೆ ಬಂದಿದ್ದರು. ಅನಂತರ ಸೀರಿಯಲ್ ನಿರ್ಮಾಪಕರ ಸಂಘವು ನಟ ಅನಿರುದ್ಧ (Anirudh) ಅವರನ್ನು ಎರಡು ವರ್ಷಗಳ ಕಾಲ ಯಾವುದೇ ಸೀರಿಯಲ್, ಕಿರುತೆರೆ ಕಾರ್ಯಕ್ರಮದಲ್ಲಿ ಬಳಸಿಕೊಳ್ಳುವಂತಿಲ್ಲ ಎಂದು ಹೇಳಿತು.

ಆ ವಿ ವಾ ದದ ಸಂದರ್ಭದಲ್ಲಿ ಅನಿರುದ್ಧ್ ಅವರನ್ನು ಬ್ಯಾನ್ ಮಾಡಲಾಗುವುದು ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಅದು ದೊಡ್ಡ ಸುದ್ದಿಯಾದ ಮೇಲೆ ನಿರ್ಮಾಪಕರ ಸಂಘವು ಬ್ಯಾನ್ ಪದ ಬಳಕೆ ಮಾಡಿಲ್ಲ ಎಂದಿತ್ತು. ಇನ್ನು ಇತ್ತೀಚಿಗೆ ಈ ಪದ ಮತ್ತೊಮ್ಮೆ ಸದ್ದು ಮಾಡಿದ್ದು, ಸ್ಟಾರ್ ನಟಿಯಾದ ರಶ್ಮಿಕಾ ಮಂದಣ್ಣ (Rashmika Mandanna) ವಿಚಾರದಲ್ಲಿ. ನಟಿ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಸಿನಿಮಾ, ನಿರ್ಮಾಣ ಸಂಸ್ಥೆ ಬಗ್ಗೆ ತೋರಿದ ವರ್ತನೆ ವೈರಲ್ ಆದ ನಂತರ ರಶ್ಮಿಕಾ ಬ್ಯಾನ್ (Rashmika Ban) ಎನ್ನುವ ಸುದ್ದಿ ಸಿಕ್ಕಾಪಟ್ಟೆ ಹರಿದಾಡಿತ್ತು. ಆದರೆ ನಿಜವಾಗಿಯೂ ಕನ್ನಡ ಚಿತ್ರ ರಂಗದಲ್ಲಿ (Kannada cinema industry) ಬ್ಯಾನ್ ಮಾಡುವ ಅಧಿಕಾರಿ ಇದೆಯೇ?

ಕನ್ನಡ ಚಿತ್ರೋದ್ಯಮದಲ್ಲಿ ಬ್ಯಾನ್ ಎನ್ನುವ ಪದವನ್ನೇ ಬ್ಯಾನ್ ಮಾಡಲಾಗಿದೆ ಎನ್ನುವುದು ಸತ್ಯ. ಹೌದು ವರ್ಷಗಳ ಹಿಂದೆ ನಟಿ ನಿಖಿತಾ ತುಕ್ರಾಲ್ (Nikita Tukral) ಅವರನ್ನು ಬ್ಯಾ ನ್ ಮಾಡಿರುವುದಾಗಿ ನಿರ್ಮಾಪಕರ ಸಂಘ ಘೋಷಣೆ ಮಾಡಿತ್ತು. ಆದರೆ ಅದಕ್ಕೆ ತೀವ್ರ ವಿ ರೋ ಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂದು ನಿರ್ಮಾಪಕರ ಸಂಘದ ಅಧ್ಯಕ್ಷರು ಕನ್ನಡ ಸಿನಿಮಾ ರಂಗದಲ್ಲಿ ಬ್ಯಾ ನ್ ಪದವನ್ನೇ ಬ್ಯಾ ನ್ ಮಾಡಿರುವುದಾಗಿ ಘೋಷಣೆ ಮಾಡಿದ್ದರು. ಆದ್ದರಿಂದಲೇ ಇಲ್ಲಿ ಅಂದರೆ ಕನ್ನಡ ಚಿತ್ರರಂಗದಲ್ಲಿ (Sandalwood) ಯಾರನ್ನೂ ಬ್ಯಾ ನ್ ಮಾಡುವ ಹಾಗೆ ಇಲ್ಲ.

Leave a Comment