ಆ ಘಳಿಗೆ ಬಂದೇ ಬಂತು, ಹೊಸ ರೂಪದಲ್ಲಿ ತಾಯಿ ಮಗಳ‌ ಮಿಲನ: ಭಾವುಕ ಕ್ಷಣದತ್ತ ಜೊತೆ ಜೊತೆಯಲಿ!!

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಸೀರಿಯಲ್ ಗಳಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ‌. ಆದ್ದರಿಂದಲೇ ಅನೇಕ ಧಾರಾವಾಹಿಗಳು ಟಾಪ್ ಧಾರಾವಾಹಿಗಳಾಗಿ ಯಶಸ್ಸನ್ನು ಪಡೆದಿವೆ. ಹೀಗೆ ಟಾಪ್ ಧಾರಾವಾಹಿಗಳ ಸಾಲಿನಲ್ಲಿ ಮುಂದೆ ಸಾಗುತ್ತಿದೆ ಜೊತೆ ಜೊತೆಯಲಿ ಧಾರಾವಾಹಿ. ಹಿಂದೊಮ್ಮೆ ಟಾಪ್ ಒನ್ ಸ್ಥಾನದಲ್ಲಿ ಇದ್ದಂತಹ ಜೊತೆ ಜೊತೆಯಲಿ ಈಗ ಟಾಪ್ ಒನ್ ಅಲ್ಲದೇ ಹೋದರೂ ಕೂಡಾ ಸೀರಿಯಲ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ರೋಚಕ ತಿರುವುಗಳ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದೆ.

ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಇತ್ತೀಚಿಗೆ ಪ್ರೇಕ್ಷಕರ ಅಪಾರ ಮೆಚ್ಚುಗೆಯನ್ನು ಪಡೆದಿದ್ದು ರಾಜ ನಂದಿನಿ ಅಧ್ಯಾಯ. ಏಕೆಂದರೆ ಅನು ಗೆ ತನ್ನ ಗತ ಜನ್ಮ, ಆರ್ಯ ಮತ್ತು ಜೇಂಡೇಯ ಅಸಲಿ ಮುಖಗಳ ಪರಿಚಯ ಆದ ಭಾಗವದು. ರಾಜ ನಂದಿನಿ ಅಧ್ಯಾಯ ನಡೆಯುವಾಗಲೇ ಪ್ರೇಕ್ಷಕರಿಗೆ ಈ ಅಧ್ಯಾಯದ ನಂತರ ಮುಂದೆ ಅನು ನಡೆ ಏನಾಗಲಿದೆ ಎನ್ನುವುದನ್ನು ತಿಳಿಯುವ ಕುತೂಹಲ ಸಹಜವಾಗಿಯೇ ಹುಟ್ಟು ಕೊಂಡಿತ್ತು. ಅದಕ್ಕಾಗಿ ಪ್ರೇಕ್ಷಕರು ಕಾತರತೆಯಿಂದ ಕಾಯುತ್ತಿದ್ದರು.

ರಾಜನಂದಿನಿ ಅಧ್ಯಾಯ ಮುಗಿದಾಗಿದೆ. ಅನು ಗೆ ತಾನೇ ರಾಜನಂದಿನಿ ಎನ್ನುವ ಸತ್ಯದ ಅರಿವಾಗಿದೆ. ಅಲ್ಲದೇ ಇದೇ ವೇಳೆ ಅನು ಈ ವಿಚಾರವನ್ನು ತನ್ನ ತಂದೆ ತಾಯಿಗೆ ಹೇಳಿದಾಗ ಅದನ್ನು ನಂಬದ ಅವರು, ಅನುಗೆ ಮಾನಸಿಕವಾಗಿ ಏನೋ ಸಮಸ್ಯೆಯಾಗಿದೆ ಎನ್ನುವ ಕಾರಣಕ್ಕೆ ಆಕೆಯನ್ನು ಮನೋವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಅಲ್ಲೂ ಕೂಡಾ ಅನು ರಾಜ ಸಾಹೇಬರ ಡೆ ತ್ ಸರ್ಟಿಫಿಕೇಟ್ ತಂದು ಕೊಟ್ಟದ್ದ ವ್ಯಕ್ತಿಯನ್ನು ನೋಡಿ, ಗುರುತಿಸಿ, ಅವನ ಅಸಲಿಯತ್ತನ್ನು ಬಯಲು ಮಾಡಿದ್ದಾಳೆ.

ಆದರೆ ಇವೆಲ್ಲವುಗಳ ನಡುವೆ ಅನು ತನ್ನ ಹಿಂದಿನ ಜನ್ಮದ ತಾಯಿ ಶಾರದಾ ದೇವಿಯ ಮುಂದೆ ಬಂದಿದ್ದು, ತಾನೇ ರಾಜನಂದಿನಿ ಎನ್ನುವ ಮಾತನ್ನು ಹೇಳಿದ್ದಾಳೆ. ಈ ವೇಳೆ ಶಾರದಾ ದೇವಿ ಅವರು ಸಹಾ ನನಗೆ ಆ ಸತ್ಯ ಗೊತ್ತಿತ್ತು, ಆದರೆ ಹೇಳುವುದು ಗೊತ್ತಾಗಲಿಲ್ಲ. ಯಾರು ನಂಬಲಿ, ಬಿಡಲಿ ನಾನು ಮಾತ್ರ ನೀನು ನನ್ನ ಮಗಳೆಂದು ಒಪ್ಪುತ್ತೇನೆ ಎನ್ನುವ ಮಾತನ್ನು ಹೇಳಿದ್ದಾರೆ. ಒಟ್ಟಾರೆ ಇಪ್ಪತ್ತು ವರ್ಷಗಳ ನಂತರ ಅಮ್ಮ, ಮಗಳ ಭೇಟಿಯು ಒಂದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದೆ.

ಇನ್ನು ಅನು ತನ್ನ ತಾಯಿಗೆ ಆರ್ಯನ ನಿಜವಾದ ಬಣ್ಣ ಏನು ಎನ್ನುವುದನ್ನು ಹೇಗೆ ತಿಳಿಸಲಿದ್ದಾಳೆ ಎನ್ನುವುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಇಂದಿನ ತಾಯಿ ಮಗಳ ಭಾವನಾತ್ಮಕ ಸನ್ನಿವೇಶ ಪ್ರೇಕ್ಷಕರ ಮನಸ್ಸನ್ನು ಸೂರೆಗೊಳ್ಳಲಿದೆ ಎನ್ನುವುದಕ್ಕೆ ಎರಡು ಮಾತಿಲ್ಲ. ಒಟ್ಟಾರೆ ಜೊತೆ ಜೊತೆಯಲಿ ಧಾರಾವಾಹಿಯು ಮಹತ್ವದ ತಿರುವುಗಳ ಜೊತೆಗೆ ದಿನದಿಂದ ದಿನಕ್ಕೆ ಇನ್ನಷ್ಟು ಮತ್ತಷ್ಟು ಕುತೂಹಲವನ್ನು ಕೆರಳಿಸುತ್ತಿದೆ.

Leave a Comment