Oscar: ಆಸ್ಕರ್ ಪ್ರಶಸ್ತಿಯ ಅಸಲಿ ಮೌಲ್ಯ ಎಷ್ಟು? ಮಾರಿದರೆ ಸಿಗೋ ಬೆಲೆ ಎಷ್ಟು? ಅಚ್ಚರಿ ಅದ್ರೂ ಸತ್ಯ ಇದು

Written by Soma Shekar

Published on:

---Join Our Channel---

Oscar Statuette Price: ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಾಧ್ಯಮಗಳಲ್ಲಿ ಸಹಾ ಸಿಕ್ಕಾಪಟ್ಟೆ ಸುದ್ದಿಯಾದ ವಿಚಾರ ಯಾವುದು ಎಂದರೆ ಅದು ಆಸ್ಕರ್(Oscar) ಪ್ರಶಸ್ತಿಯ ವಿಚಾರ. ಈ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಗಳು ದಕ್ಕಿರುವುದು ಖಂಡಿತ ಹೆಮ್ಮೆ ಪಡುವಂತಹ ವಿಷಯವಾಗಿದೆ. ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ಎಂದೂ, ತಮಿಳಿನ ದಿ ಎಲಿಫೆಂಟ್ ವಿಸ್ಪರರ್ಸ್ ಗೆ ಬೆಸ್ಟ್ ಡಾಕ್ಯುಮೆಂಟರಿ ಎಂತಲೂ ಆಸ್ಕರ್ ಪ್ರಶಸ್ತಿ ದಕ್ಕಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಈ ಖುಷಿಯನ್ನು ಸಿನಿಮಾ ಪ್ರೇಮಿಗಳು ಇನ್ನೂ ಕೂಡಾ ಸಂಭ್ರಮಿಸುತ್ತಿದ್ದಾರೆ.

RRR ಸಿನಿಮಾ ಬಾಕ್ಸಾಫೀಸಿನಲ್ಲಿ ಕಲೆಕ್ಷನ್ ಮಾಡಿದ್ದು ಒಂದು ಕಡೆ ಆದರೆ, ಇನ್ನೊಂದು ಕಡೆ ಜಾಗತಿಕ ಮಟ್ಟದಲ್ಲಿ ಈ ಸಿನಿಮಾ ಪಡೆದ ಪ್ರಶಸ್ತಿಗಳ ಯಶಸ್ಸು ಇನ್ನೊಂದು ಕಡೆ ಆಗಿತ್ತು. ಭಾರತೀಯ ಸಿನಿಮಾವೊಂದು ಹೀಗೆ ವಿವಿಧ ಪ್ರಶಸ್ತಿಗಳಿಗೆ ಭಾಜನವಾಗಿದ್ದು ಸಹಾ ಸಾಕಷ್ಟು ಸುದ್ದಿಯಾಗಿತ್ತು. ಗೋಲ್ಡನ್ ಗ್ಲೋಬ್, ಹಾಲಿವುಡ್ ಕ್ರಿಟಿಕ್ಸ್, ಗಳ ನಂತರ ವಿಶ್ವ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿ ಎಂದೇ ಕರೆಯಲಾಗಿರುವ ಆಸ್ಕರ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ RRR ಸಿನಿಮಾ. ಇದನ್ನೂ ಓದಿ: AR Rahman On Oscar: ಭಾರತ ಆಸ್ಕರ್ ಗೆ ತಪ್ಪು ಸಿನಿಮಾಗಳನ್ನು ಕಳಿಸುತ್ತಿದೆ! ರೆಹಮಾನ್ ಅಸಮಾಧಾನ

ವಿಶ್ವ ಮಟ್ಟದಲ್ಲಿ ಆಸ್ಕರ್ ಪ್ರಶಸ್ತಿಗೆ, ಆ ಹೆಸರಿಗೆ ಅದರದ್ದೇ ಆದ ಗತ್ತು, ಗಮ್ಮತ್ತು ಎಲ್ಲವೂ ಇದೆ. ಇಷ್ಟೆಲ್ಲಾ ಪ್ರಾಮುಖ್ಯತೆ ಯನ್ನು ಪಡೆದುಕೊಂಡಿರುವ ಆಸ್ಕರ್ ಪ್ರಶಸ್ತಿ ತಯಾರಿಸಲು ಎಷ್ಟು ಖರ್ಚಾಗುತ್ತದೆ? ಒಂದು ವೇಳೆ ಇದನ್ನು ಗೆದ್ದವರು ಮಾರಾಟ ಮಾಡಿದರೆ ಎಷ್ಟು ಹಣ ಸಿಗುತ್ತದೆ? ಎನ್ನುವ ವಿಚಾರಗಳು ಕೂಡಾ ಆಸ್ಕರ್ ಪ್ರಶಸ್ತಿಯಷ್ಟೇ ಆಸಕ್ತಿಕರ ವಿಚಾರಗಳಾಗಿದೆ. ಹಾಗಾದರೆ ಈಗ ನಾವು ಆ ವಿಚಾರಗಳ ಕಡೆಗೂ ಸಹಾ ಸ್ವಲ್ಪ ಗಮನವನ್ನು ನೀಡೋಣ ಬನ್ನಿ.

ಆಸ್ಕರ್ ಪ್ರಶಸ್ತಿ ನಿರ್ಮಾಣಕ್ಕೆ(Oscar award making) ಹೆಚ್ಚು ಹಣ ಖರ್ಚಾಗುತ್ತದೆ ಎಂದು ತಿಳಿಯುವ ಕುತೂಹಲ ಸಹಜವಾಗಿಯೇ ಅನೇಕರಲ್ಲಿ ಇರುತ್ತದೆ. ಸಾಮಾನ್ಯವಾಗಿ ಆಸ್ಕರ್ ಪ್ರಶಸ್ತಿಯನ್ನು ಸಿದ್ಧಪಡಿಸಲು ತಗುಲುವ ವೆಚ್ಚ ಸುಮಾರು 400 ಡಾಲರ್ ಗಳು ಎನ್ನಲಾಗಿದೆ. ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ ಇದು ಸುಮಾರು 33 ಸಾವಿರ ರೂಪಾಯಿಗಳಾಗಿದೆ. ಗಟ್ಟಿಯಾದ ಕಂಚಿನಿಂದ ಸಿದ್ಧವಾದ ಈ ಆಸ್ಕರ್ ಮೂರ್ತಿಗೆ 24 ಕ್ಯಾರೆಟ್ ಬಂಗಾರವನ್ನು ಲೇಪನ ಮಾಡಲಾಗುತ್ತದೆ.

ಇನ್ನು ಆಸ್ಕರ್ ಪ್ರಶಸ್ತಿ ಮಾರಾಟ ಮಾಡಬಹುದೇ? ಎನ್ನುವ ವಿಷಯಕ್ಕೆ ಬಂದರೆ, ಆಸ್ಕರ್ ಪ್ರಶಸ್ತಿ ಗೆದ್ದವರಿಗೆ ಅದನ್ನು ಮಾರಾಟ ಮಾಡುವ ಹಕ್ಕಿಲ್ಲ. ಆಸ್ಕರ್ ಪ್ರಶಸ್ತಿ ನೀಡುವ ಸಂಸ್ಥೆಯು ಇದರ ಮಾರಾಟವನ್ನು ನಿಷೇಧ ಮಾಡಿದೆ. ಒಂದು ವೇಳೆ ಮಾರಲು ಬಯಸಿದರೆ, ಅದನ್ನು ಅಕಾಡೆಮಿಗೆ ನೀಡಿದರೆ ಅದರ ಬೆಲೆಯಾಗಿ ಕೇವಲ ಒಂದು ಡಾಲರ್ ಮೊತ್ತವನ್ನು ನೀಡಲಾಗುತ್ತದೆ. ಒಂದು ವೇಳೆ ಆಸ್ಕರ್ ಪ್ರಶಸ್ತಿ ತಮ್ಮ ಬಳಿ ಇಟ್ಟುಕೊಳ್ಳಲು ಸಾಧ್ಯ ಇಲ್ಲ ಎನ್ನುವವರು ಅದನ್ನು ಅಕಾಡೆಮಿಗೆ ಹಿಂದಿರುಗಿಸಬಹುದಾಗಿದೆ.

Leave a Comment