ಮದ್ವೆ ಆದ ವಾರದ ನಂತರ ತಾಳಿ, ಸಿಂಧೂರ ತೆಗೆದ ಆಥಿಯಾ: ಹೊಸ ಲುಕ್ ಕಂಡು ಸಿಟ್ಟಾದ ನೆಟ್ಟಿಗರು

Written by Soma Shekar

Published on:

---Join Our Channel---

ಕ್ರಿಕೆಟಿಗ ಕೆ ಎಲ್ ರಾಹುಲ್( K L Rahul) ಮತ್ತು ಬಾಲಿವುಡ್ ನಟಿ ಆಥಿಯಾ ಶೆಟ್ಟಿ(Athiya Shetty) ಮದುವೆ ಕಳೆದ ವಾರ ಅಂದರೆ ಜನವರಿ 23 ರಂದು ಬಹಳ ಅದ್ದೂರಿಯಾಗಿ ನಡೆದಿತ್ತು. ಹಿಂದೂ ಸಂಪ್ರದಾಯದಂತೆ ಬಹಳ ಅಚ್ಚುಕಟ್ಟಾಗಿ ಮದುವೆಯನ್ನು ಬಾಲಿವುಡ್ ನ‌ ಹಿರಿಯ ನಟ, ನಟಿ ಆಥಿಯಾ ಅವರ ತಂದೆ ಸುನೀಲ್ ಶೆಟ್ಟಿ(Sunil Shetty) ಅವರ ಖಂಡಾಲದ(Khandala) ಫಾರ್ಮ್ ಹೌಸ್ ನಲ್ಲಿ ನಡೆದಿತ್ತು. ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗಿ ಅಭಿಮಾನಿಗಳಿಂದ ಮೆಚ್ಚುಗೆಗಳು ಹರಿದು ಬಂದಿತ್ತು.

ಈಗ ಮದುವೆ ಒಂದು ವಾರದ ನಂತರ ಆಥಿಯಾ ಶೆಟ್ಟಿ ಲುಕ್(Athiya Shetty look) ಬದಲಾಗಿತ್ತು, ಮಾದ್ಯಮಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಈ ಹೊಸ ಫೋಟೋಗಳು ವೈರಲ್ ಆಗಿದ್ದೇ ತಡ ಎನ್ನುವಂತೆ ನೆಟ್ಟಿಗರು ಆಥಿಯಾ ಶೆಟ್ಟಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಲು ಮುಂದಾಗಿದ್ದಾರೆ. ಹಾಗಾದರೆ ನೆಟ್ಟಿಗರು ಅಸಮಾಧಾನಗೊಂಡಿದ್ದು ಏಕೆ? ತಿಳಿಯೋಣ ಬನ್ನಿ.

ಮದುವೆಯ ಬಳಿಕ ನವ ದಂಪತಿ ರಾಹುಲ್ ಮತ್ತು ಆಥಿಯಾ ಶೆಟ್ಟಿ (Rahul and Athiya) ಮುಂಬೈನ ಬಾಂದ್ರಾದಲ್ಲಿ(Mumbai Bandra) ಮಾದ್ಯಮಗಳ ಕಣ್ಣಿಗೆ ಕಂಡಿದ್ದಾರೆ. ಕೂಡಲೇ ಪಾಪರಾಜಿಗಳು ಈ ಜೋಡಿಯ ಹತ್ತು, ಹಲವು ಫೋಟೋಗಳನ್ನು ಕ್ಲಿಕ್ ಮಾಡಿದ್ದು, ಮಾದ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಹೊಸ ಫೋಟೋಗಳು ಭರ್ಜರಿಯಾಗಿ ವೈರಲ್ ಆಗುತ್ತಾ ಸಾಗಿದೆ.

ಆಥಿಯಾ ಶೆಟ್ಟಿ ಪತಿಯೊಡನೆ ಕಂಡಿದ್ದು, ಅವರು ನೀಲಿ ಬಣ್ಣದ ಜೀನ್ಸ್, ನೀಲಿ ಬಣ್ಣದ ಶರ್ಟ್ ಧರಿಸಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ನಟಿಯ ಸಿಂಪಲ್ ಲುಕ್ ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ರಾಹುಲ್ ಸಹಾ ಜೀನ್ಸ್, ಶರ್ಟ್ ಧರಿಸಿ ಬಹಳ ಸಿಂಪಲ್ ಲುಕ್ ನಲ್ಲೆ ಕಾಣಿಸಿಕೊಂಡಿದ್ದಾರೆ.

ಆಥಿಯಾ ಸಿಂಪಲ್ ಲುಕ್(Athiya Simple look) ಅಭಿಮಾನಿಗಳ ಮನಸ್ಸಿಗೆ ಮುದ ನೀಡಿದ್ದರೆ, ಇನ್ನೂ ಅನೇಕರ ಇದನ್ನು ಟೀಕೆ ಮಾಡುತ್ತಿದ್ದಾರೆ. ಮದುವೆಯಾಗಿ ಇನ್ನೂ ಕೆಲವೇ ದಿನಗಳಾಗಿದೆ, ಆದರೆ ನಟಿ ಸಿಂಧೂರ ಧರಿಸಿಲ್ಲ, ಕೊರಳಲ್ಲಿ ತಾಳಿ ಇಲ್ಲ ಎಂದು ಅಸಮಾಧಾನಗೊಂಡ ಕೆಲವರು ನಟಿಯ ಸಿಂಪಲ್ ಲುಕ್ ನೋಡಿ ಸಿಟ್ಟಾಗಿ ನೆಗೆಟಿವ್ ಆಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಮದುವೆಯಾದ ಒಂದೇ ವಾರಕ್ಕೆ ಸೆಲೆಬ್ರಿಟಿಗಳು ಹೀಗೆ ಸಂಪ್ರದಾಯವನ್ನು ಬದಿಗೊತ್ತಿದರೆ ಅದು ನಿಮ್ಮನ್ನು ಫಾಲೋ ಮಾಡುವವರ ಮೇಲೆ ಸಹಾ ಪರಿಣಾಮವನ್ನು ಬೀರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅವರಿಗೆ ನೀವು ಯಾವ ಸಂದೇಶವನ್ನು ನೀಡುತ್ತಿರುವಿರಿ ಎಂದು ಪ್ರಶ್ನೆ ಮಾಡಿದ್ದಾರೆ.

ನಮ್ಮ‌ ಸಂಸ್ಕೃತಿಯಲ್ಲಿ ಸಿಂಧೂರ ಮತ್ತು ಮಾಂಗಲ್ಯ ವನ್ನು ಗಂಡದ ಶ್ರೇಯಸ್ಸಿಗಾಗಿ ಧರಿಸುವುದು ಎನ್ನುವ ನಂಬಿಕೆಯಿದೆ. ಆದ್ದರಿಂದ ಅದರ ಬಗ್ಗೆ ಒಮ್ಮೆ ಆಲೋಚನೆ ಮಾಡಿ ಎಂದು ಕೆಲವರು ಸಲಹೆಯನ್ನು ನೀಡಿದ್ದಾರೆ. ಸೆಲೆಬ್ರಿಟಿಗಳಾದ ನೀವು ಸಾಮಾನ್ಯ ಜನರಿಗೆ ಮಾದರಿಯಾಗಿರಬೇಕು ಎಂದು ಸಲಹೆಗಳನ್ನು ನೀಡಿದ್ದಾರೆ.

Leave a Comment