ಅವಿವಾಹಿತ ನಟಿಯರು ಶೇರ್ ಮಾಡಿದ್ರು ಪ್ರೆಗ್ನೆನ್ಸಿ ಟೆಸ್ಟ್ ಕಿಟ್: ಸಂಚಲನ ಸೃಷ್ಟಿಸಿದ ಸ್ಟಾರ್ ನಟಿಯರು

Written by Soma Shekar

Published on:

---Join Our Channel---

ಇಂದು ದಕ್ಷಿಣದ ಇಬ್ಬರು ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ದೊಡ್ಡ‌‌ ಸಂಚಲನವನ್ನು ಸೃಷ್ಟಿಸಿದೆ. ಅದರಲ್ಲೂ ಮಲೆಯಾಳಂ ಸಿನಿಮಾ ರಂಗಕ್ಕೆ ಇವರು ಕೊಟ್ಟ ಶಾ ಕ್ ನೋಡಿ ಎಲ್ಲರೂ ಇದರ ಬಗ್ಗೆ ಮಾತನಾಡುವಂತಾಗಿದೆ. ಮಲೆಯಾಳಂ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯರಾಗಿರುವ ನಿತ್ಯ ಮೆನನ್ ಮತ್ತು ಪಾರ್ವತಿ ಮೆನನ್ ಅವರು ಮಾಡಿರುವ ಪೋಸ್ಟ್ ಈಗ ದೊಡ್ಡ ಸುದ್ದಿಯಾಗಿದೆ. ಅವರ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ನಟಿಯರು ಹಂಚಿಕೊಂಡ ಪೋಸ್ಟ್ ನೋಡಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅದೇ ಸಮಯದಲ್ಲಿ ಅವರು ಈ ಪೋಸ್ಟ್ ನ ಅರ್ಥವಾದರೂ ಏನು ಎಂದು ತಿಳಿಯುವ ಕುತೂಹಲದಲ್ಲಿ ಇದ್ದಾರೆ.

ಪಾರ್ವತಿ ಮೆನನ್ ಹಾಗೂ ನಿತ್ಯ ಮೆನನ್ ಇಬ್ಬರೂ ಸಹಾ ಇನ್ನೂ ಮದುವೆಯಾಗದೇ ಇರುವ ನಟಿಯರು. ಆದರೆ ಇಬ್ಬರೂ ಸಹಾ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಪ್ರೆಗ್ನೆನ್ಸಿ ಕಿಟ್ ಅನ್ನು ಶೇರ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ನಟಿ ಪಾರ್ವತಿ ಮೆನನ್ ಪುನೀತ್ ರಾಜ್‍ಕುಮಾರ್ ಅವರ ಮಿಲನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ನಟಿ. ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ನಟಿ ನಿತ್ಯ ಮೆನನ್ ದಕ್ಷಿಣದ ಪ್ರಖ್ಯಾತ ನಟಿಯರಲ್ಲಿ ಒಬ್ಬರೆನ್ನುವ ಸ್ಟಾರ್ ಡಂ ಪಡೆದುಕೊಂಡಿದ್ದು, ಪಂಚ ಭಾಷಾ ತಾರೆಯಾಗಿಯೂ ಗುರುತಿಸಿಕೊಂಡಿದ್ದಾರೆ.

ಇಬ್ಬರೂ ನಟಿಯರೂ ಸಹಾ ಇನ್ನೂ ಅವಿವಾಹಿತೆಯರಾಗಿದ್ದಾರೆ. ಅಲ್ಲದೇ ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರೆಗ್ನೆನ್ಸಿ ಕಿಟ್ ಶೇರ್ ಮಾಡಿಕೊಂಡ ನಂತರ ಅದಕ್ಕೆ ಕಾರಣವೇನು ಎನ್ನುವುದನ್ನು ಮಾತ್ರ ತಿಳಿಸಿಲ್ಲವಾದ್ದರಿಂದ ಇದೊಂದು ಚರ್ಚೆಗೆ ಕಾರಣವಾಗಿದೆ. ಇಬ್ಬರೂ ನಟಿಯರು ತಮ್ಮ ಪೋಸ್ಟ್ ನ ಉದ್ದೇಶವಾದರೂ ಏನು ಎಂದು ತಿಳಿಸದ ಕಾರಣ ಸಹಜವಾಗಿಯೇ ಇದು ಒಂದು ಹೊಸ ಕುತೂಹಲವನ್ನು ಮೂಡಿಸಿದೆ. ನೆಟ್ಟಿಗರು ಮತ್ತು ಅಭಿಮಾನಿಗಳು ಕಾರಣ ತಿಳಿಯಲು ಕಾತರರಾಗಿದ್ದಾರೆ. ನೆಟ್ಟಿಗರು ವೈವಿದ್ಯಮಯ ರೀತಿಯಲ್ಲಿ ಇದನ್ನು ಅರ್ಥೈಸುತ್ತಿದ್ದಾರೆ.

ಇಬ್ಬರೂ ನಟಿಯರು ಒಂದೇ ರೀತಿಯ ಪೋಸ್ಟ್ ಶೇರ್ ಮಾಡಿರುವ ಕಾರಣದಿಂದಾಗಿ ಅನೇಕರು ಇದು ಜಾಹೀರಾತು ಇರಬಹುದು ಅಥವಾ ಯಾವುದೋ ಹೊಸ ಸಿನಿಮಾದ ಪ್ರಮೋಷನ್ ಇರಬಹುದು ಎಂದು ಊಹೆ ಮಾಡುತ್ತಿದ್ದಾರೆ. ಅದೇ ವೇಳೆ ಮದುವೆ ಆಗದೇ ಇರುವ ಈ ನಟಿಯರು ಇಂತಹ ಜಾಹೀರಾತು ಮಾಡಿದ್ದಾರಾ ಅದೆಲ್ಲಾ ಏಕೆ ಬೇಕಿತ್ತು? ಎಂದು ಕೆಲವರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ನಟಿಯರು ಸಹಾ ಈ ಪೋಸ್ಟ್ ಮೂಲಕ ಯಾವ ವಿಷಯವನ್ನು ತಿಳಿಸುತ್ತಿದ್ದಾರೆ ಎನ್ನುವುದು ಸದ್ಯಕ್ಕಂತೂ ಪ್ರಶ್ನೆ ಯಾಗಿಯೇ ಉಳಿದಿದೆ.

Leave a Comment