ಅರಳಿ ಮರದ ಕೊಂಬೆಯಿಂದ ಹೀಗೆ ಮಾಡಿ: ನಿಮ್ಮ ಜಾತಕವೇ ಬದಲಾಗಿ ಹೋಗುತ್ತದೆ, ಶುಭ ಫಲ ಪ್ರಾಪ್ತಿಸುತ್ತದೆ

Written by Soma Shekar

Published on:

---Join Our Channel---

ಮನುಷ್ಯರಿಗೆ ಅವರ ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ, ಕೆಲವು ದಿನಗಳಲ್ಲಿ ಅವು ಕಳೆದು ಹೋಗುತ್ತವರೆ. ಸಮಸ್ಯೆಗಳು ಎನ್ನುವುದು ಶಾಶ್ವತವಲ್ಲ. ಆದರೆ ಕೆಲವರ ಜೀವನದಲ್ಲಿ ಮಾತ್ರ ಸಮಸ್ಯೆಗಳು ಒಂದಾದ ನಂತರ ಮತ್ತೊಂದು ಎನ್ನುವ ಹಾಗೆ ಪದೇ ಪದೇ ಬರುತ್ತಲೇ ಇರುತ್ತವೆ. ಅಂತಹ ಸಮಸ್ಯೆಗಳಿಂದ ಪರಿಹಾರಕ್ಕಾಗಿ ಅನೇಕ ಪೂಜೆ, ವ್ರತ, ನಿಯಮಗಳನ್ನು ಅನುಸರಿಸುವವರು, ಜ್ಯೋತಿಷ್ಯದ‌ ಮೊರೆ ಹೋಗುವವರು ಕೂಡಾ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಮನುಷ್ಯ ತನ್ನ ಸಮಸ್ಯೆಗಳಿಂದ ಹೊರ ಬರಲು ಅರಳಿ ಮರದ ಕೊಂಬೆಗಳ ವಿಶೇಷ ಪೂಜೆಗಳು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಅರಳಿ ಮರದ ಕೊಂಬೆಗಳ ಪೂಜೆ ಮಾಡುವುದರಿಂದ ಎದುರಾಗುವ ಅನೇಕ ತೊಂದರೆಗಳಿಗೆ ಪರಿಹಾರ ಸಿಗುವುದು ಎನ್ನಲಾಗಿದೆ. ನಮ್ಮ ಶಾಸ್ತ್ರ ಗಳು ಸಮಸ್ಯೆಗಳಲ್ಲಿ ಸಿಲುಕಿದವರಿಗೆ ಕೆಲವೊಂದು ಪರಿಹಾರ ಮಾರ್ಗಗಳನ್ನು ವಿವರಿಸುತ್ತದೆ. ಈಗ ಸಮಸ್ಯೆ ಪರಿಹಾರಕ್ಕಾಗಿ ಅರಳಿ ಮರದ ಸಣ್ಣ ಕೊಂಬೆಯಿಂದ ಪರಿಹಾರ ಹೇಗೆ ಸಾಧ್ಯ? ಎನ್ನುವ ಬಗ್ಗೆ ಶಾಸ್ತ್ರಗಳಲ್ಲಿ ತಿಳಿಸುರುವ ಒಂದು ಪರಿಹಾರ ಮಾರ್ಗದ ಕುರಿತಾಗಿ ನಾವು ಈಗ ತಿಳಿದುಕೊಳ್ಳೋಣ ಬನ್ನಿ.

ಸೂರ್ಯೋದಯಕ್ಕೆ ಮುನ್ನ ಏನೂ ತಿನ್ನದೇ ಒಂದು ಅರಳಿ ಮರದ ಬಳಿಗೆ ಹೋಗಿ, ನಂತರ ಆ ಮರಕ್ಕೆ ಭಕ್ತಿಯಿಂದ ಪ್ರದಕ್ಷಿಣೆ ಮಾಡಿ, ಎಲೆಗಳಿರುವ ಒಂದು ಸಣ್ಣ ಕೊಂಬೆಯನ್ನು ಕತ್ತರಿಸಿಕೊಳ್ಳಿ. ಆ ಕೊಂಬೆಯಲ್ಲಿ ಇರುವ ಎಲೆಗಳು ಹಾಳಾಗಿರಬಾರದು ಎನ್ನುವುದನ್ನು ಗಮನಿಸಿ. ನಂತರ ಆ ಕೊಂಬೆಯನ್ನು ಮನೆಗೆ ತಂದು ದೇವರ ಮುಂದೆ ಇರಿಸಿ, ಎರಡು ಎಲೆಗಳಿಗೆ ಗಂಟು ಹಾಕಿ ಮೂರನೇ ಎಲೆಯನ್ನು ಆ ಗಂಟಿನಿಂದ ಹೊರಗೆ ತೆಗೆಯಬೇಕು. ನಂತರ ಇಷ್ಟ ದೈವದ ಪೂಜೆ ಮಾಡಿ, ನಾವು ಯಾವ ಕೆಲಸಕ್ಕಾಗಿ ಈ ಕೊಂಬೆ ತಂದಿರುವೆವೋ ಅದನ್ನು ಮನಸ್ಸಿನಲ್ಲಿ ಸ್ಮರಿಸಬೇಕು.

ಅನಂತರ ಆ ಎಲೆಗಳ ಸಹಿತ ಕೊಂಬೆಯನ್ನು ಜನರು ಓಡಾಡದ ಕಡೆ, ಕಸಬೊರಕೆ ತಗುಲದ ಕಡೆ ಅಥವಾ ಯಾವುದಾದರೂ ಒಂದು ಮರದ ಮೇಲೆ ಇಡಬೇಕು. ಈ ಎಲೆಗಳು ಒಣಗುತ್ತಾ ಹೋದಂತೆ ನೀವು ಅಂದು ಕೊಂಡ ಕಾರ್ಯ ಸಹಾ ನೆರವೇರಲು ಆರಂಭಿಸುತ್ತದೆ. ನಿಂತು ಹೋದ ಕೆಲಸಗಳು ಕೂಡಾ ಮತ್ತೆ ಪ್ರಾರಂಭವಾಗುತ್ತದೆ. ಇದಷ್ಟೇ ಅಲ್ಲದೇ ದೇವಾಲಯಗಳಲ್ಲಿ ಇರುವ ಅರಳಿ ಹಾಗೂ ಬೇವಿನ ಮರಗಳ ಪ್ರದಕ್ಷಿಣೆ ಹಾಕಿ, ಅವುಗಳ ಮುಂದೆ ಎಳ್ಳಿನ ಎಣ್ಣೆಯ ದೀಪವನ್ನು ಬೆಳಗಬೇಕು.

ಅದೇ ವೇಳೆ ದೊಡ್ಡ ದಾರವನ್ನು ತೆಗೆದುಕೊಂಡು ಅದನ್ನು ಒಂಬತ್ತು ಎಳೆಗಳಾಗಿ ಮಾಡಿ ಅನಂತರ ಅದನ್ನು ಅರಿಶಿಣ ದಾರವನ್ನಾಗಿ ಒಂಬತ್ತು ಬಾರಿ ಪ್ರದಕ್ಷಿಣೆ ಹಾಕುತ್ತಾ ಮರಕ್ಕೆ ಸುತ್ತಿ, ಹೀಗೆ ಪ್ರದಕ್ಷಿಣೆ ಮಾಡುವಾಗ ಮನಸ್ಸಿನಲ್ಲಿ, ಶ್ರೀಮನ್ನಾರಾಯಣ ನಾವು ಮಾಡಲು ಹೊರಟಿರುವ ಕೆಲಸವು ಶುಭ ಪ್ರದವಾಗಿ ನಡೆಯುವಂತೆ ಹರಸು ಎಂದು ಪ್ರಾರ್ಥನೆ ಮಾಡಬೇಕು. ಇದರಿಂದ ನಮ್ಮೆಲ್ಲಾ ಸಮಸ್ಯೆಗಳು ಸಂಪೂರ್ಣವಾಗಿ ಕಡಿಮೆಯಾಗುತ್ತವೆ ಎನ್ನುತ್ತವೆ ಶಾಸ್ತ್ರಗಳು.

Leave a Comment