ಅಮೂಲ್ಯಗೆ ಆ ಸಾಮರ್ಥ್ಯ ಇದೆ: ಅಮೂಲ್ಯಾನ ಒಪ್ಪಿಕೊಂಡ ರಾಕಿ ತಾಯಿ ಬಿಗ್ ಬಾಸ್ ಗೆ ಹೇಳಿದ್ದೇನು?

Written by Soma Shekar

Published on:

---Join Our Channel---

ಬಿಗ್ ಬಾಸ್ ಮನೆಯಲ್ಲಿ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಮನೆಯ ಸದಸ್ಯರ ನಡುವೆ ಜಗಳ, ಮನಸ್ತಾಪ ಮತ್ತು ಟಾಸ್ಕ್ ವಿಚಾರದಲ್ಲಿ ಮೂಡುವ ಅಸಮಾಧಾನಗಳು ಕಾಣುತ್ತವೆ. ಆದರೆ ಬಿಗ್ ಬಾಸ್ ಈ ವಾರದಲ್ಲಿ ನೀಡಿರುವ ವಿಶೇಷ ಉಡುಗೊರೆಯಿಂದಾಗಿ ಮನೆ ಮಂದಿಯ ಮುಖದಲ್ಲಿ ನಗುವೊಂದು ಮೂಡಿದೆ. ಹೌದು, ಈ ವಾರ ಬಿಗ್ ಬಾಸ್ ಮನೆ ಮಂದಿಗೆ ನೀಡಿದ ವಿಶೇಷ ಉಡುಗೊರೆ ಬಿಗ್ ಬಾಸ್ ಮನೆಯಲ್ಲಿ ನಗುವಿನ ಜೊತೆಗೆ ಒಂದಷ್ಟು ಭಾವುಕ ಕ್ಷಣಗಳಿಗೆ ಸಹಾ ಸಾಕ್ಷಿಯಾಗಿದೆ. ಈ ವಾರ ಬಿಗ್ ಬಾಸ್ ಮನೆಗೆ ಮನೆಯಲ್ಲಿರುವ ಸ್ಪರ್ಧಿಗಳ ತಾಯಂದಿರು ಮನೆಯೊಳಕ್ಕೆ ಪ್ರವೇಶ ನೀಡಿದ್ದು, ಮನೆ ಮಂದಿಗೆ ಬಹಳ ಸಂತೋಷವನ್ನು ನೀಡಿದೆ. ಅಲ್ಲೊಂದು ಖುಷಿಯ ವಾತಾವರಣವನ್ನು ನಿರ್ಮಾಣ ಮಾಡಿತ್ತು.

ಹೀಗೆ ಮನೆಯೊಳಗೆ ಬಂದ ಅತಿಥಿಗಳಲ್ಲಿ ಈ ಮನೆಯ ಕ್ಯಾಪ್ಟನ್ ಆಗಿರುವ ರಾಕೇಶ್ ಅಡಿಗ ಅವರ ತಾಯಿ ಸಹಾ ಇದ್ದರು‌. ಹೌದು ರಾಕಿ ಊಟ ಮಾಡುವಾಗ ಅವರ ತಾಯಿ ಮನೆಯೊಳಗೆ ಬಂದರು. ಎಲ್ಲರೂ ಓಡೋಡಿ ಬಂದು ಸ್ವಾಗತ ನೀಡಿದರು. ರಾಕೇಶ್ ಅವರ ತಾಯಿ ಲತಾ ಅವರು ಮನೆಯೊಳಗೆ ಎಂಟ್ರಿ ನೀಡಿದ ನಂತರ ಮನೆಯಲ್ಲಿ ಎಲ್ಲರನ್ನೂ ಸಹಾ ಮಾತನಾಡಿಸಿದರು. ಮಗನ ಜೊತೆ ಮಾತನಾಡುತ್ತಾ ಅವರು ನೀನು ಕ್ಯಾಪ್ಟನ್ ಆಗೋದೇ ಇಲ್ವೇನೋ ಅನ್ಕೊಂಡಿದ್ದೆ, ಆದ್ರೆ ಕ್ಯಾಪ್ಟನ್ ಆದೆ ಎಂದು ಖುಷಿ ಪಟ್ಟಿದ್ದಾರೆ. ರಾಕೇಶ್ ಅವರು ಸಮಯ ಹೆಚ್ಚಿಲ್ಲ ಎಂದು ಅವರ ತಾಯಿಯನ್ನು ಕರೆದುಕೊಂಡು ಹೋಗಿ ಮನೆ ಎಲ್ಲಾ ತೋರಿಸಿದ್ದಾರೆ.

ನಂತರ ಅವರು ಮನೆಯಿಂದ ಹೊರಡುವಾಗ ಕನ್ಫೆಷನ್ ರೂಮ್ ನಲ್ಲಿ ಬಿಗ್ ಬಾಸ್ ಲತಾ ಅವರನ್ನು ಈ ವಾರ ಯಾರು ಕ್ಯಾಪ್ಟನ್ ಆಗಬೇಕು ಎಂದು ಎರಡು ಹೆಸರು ಸೂಚಿಸುವಂತೆ ಕೇಳಿದ್ದಾರೆ.‌ ಲತಾ ಅವರು ಆಗ ಮುಂದಿನ ವಾರ ಅಮೂಲ್ಯ ಮನೆಯ ಕ್ಯಾಪ್ಟನ್ ಆಗಬೇಕು. ಅಮೂಲ್ಯಾಗೆ ಮನೆಯನ್ನು ನಿಭಾಯಿಸುವ ಕ್ವಾಲಿಟಿ ಇದೆ ಎಂದು ಹೇಳಿದ್ದಾರೆ. ಲತಾ ಅವರು ಕ್ಯಾಪ್ಟನ್ ಗೆ ಎರಡನೆಯ ಆಯ್ಕೆಯಾಗಿ ಅರುಣ್ ಸಾಗರ್ ಅವರ ಹೆಸರನ್ನು ಹೇಳಿದ್ದಾರೆ. ರಾಕಿ ಅವರ ತಾಯಿ ಅಮೂಲ್ಯರನ್ನು ಹಗ್ ಮಾಡಿದ ವಿಚಾರವಾಗಿ ಪ್ರಶಾಂತ್ ಸಂಬರ್ಗಿ ಮಾತನಾಡಿದರು. ಅಮೂಲ್ಯ ಆಗ ನೀವೂ ಏನೇನೋ ಹಬ್ಬಿಸಬೇಡಿ, ಅದಕ್ಕೆ ನಾನು ಕ್ಲಾರಿಟಿ ಕೊಡ್ತೀನಿ ಎಂದಿದ್ದಾರೆ.

ಇನ್ನು ಅಮೂಲ್ಯ ಬೇಸರ ದಲ್ಲಿ ಅಡುಗೆ ಮನೆಯಲ್ಲಿ ಕುಳಿತಿದ್ದಾಗ ರಾಕಿ ಅವರ ಬಳಿ ಬಂದಿದ್ದಾರೆ. ಅವರು ಅಮೂಲ್ಯಾಗೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳಿದ್ದಾರೆ. ಅಮೂಲ್ಯ ಅವರು ಆಗ, ಇಲ್ಲ, ಈ ಎಪಿಸೋಡ್ ಏನಾದರೂ ಅಮ್ಮ ನೋಡಿದರೆ ಅವರು ತಪ್ಪು ತಿಳಿದುಕೊಳ್ಳುವುದಿಲ್ಲವಾ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಅಮೂಲ್ಯ ಅವರ ಬೇಸರ ಕಂಡು ರಾಕಿ ಅವರಿಗೆ ಸಮಾಧಾನವನ್ನು ಮಾಡುವ ಕೆಲಸವನ್ನು ಮಾಡಿದ್ದಾರೆ. ರಾಕಿ ಅವರ ತಾಯಿ ಬಂದು ಹೋದ ಮೇಲೆ ರಾಕಿ ಬಹಳ ಖುಷಿಯಿಂದ ಇದ್ದಾರೆ.‌

Leave a Comment