ದಯವಿಟ್ಟು ಅಂತಹ ಜಾಹೀರಾತಲ್ಲಿ ನಟಿಸಬೇಡಿ: ಅಮಿತಾಬ್ ಗೆ ವೈದ್ಯರ ಮನವಿ, ಒಪ್ತಾರಾ ಬಿಗ್ ಬಿ?

Written by Soma Shekar

Published on:

---Join Our Channel---

ಸಿನಿಮಾ ಸೆಲೆಬ್ರಿಟಿಗಳು(cinema celebrities) ಹಲವು ಕಂಪನಿಗಳು ಹಾಗೂ ಅವುಗಳ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಅಥವಾ ರಾಯಭಾರಿಗಳಾಗಿರುತ್ತಾರೆ. ಸೌಂದರ್ಯ ವರ್ಧಕಗಳಿಂದ ಹಿಡಿದು ಆರೋಗ್ಯ, ಆಹಾರ ಹೀಗೆ ಹತ್ತು ಹಲವು ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಅವುಗಳನ್ನು ಜನರು ಬಳಸುವಂತೆ‌ ಪ್ರೇರಣೆಯನ್ನು ನೀಡುತ್ತಾರೆ. ಆದ್ದರಿಂದಲೇ ಸೆಲೆಬ್ರಿಟಿಗಳು ಜಾಹೀರಾತುಗಳನ್ನು ನೀಡುವ ಮೊದಲು ಉತ್ಪನ್ನಗಳ ಬಗ್ಗೆ ತಿಳಿದುಕೊಂಡು, ಅದು ಜನರಿಗೆ ಒಳ್ಳೆಯದೋ ಅಲ್ಲವೋ ಎಂದು ತಿಳಿದು ಜಾಹೀರಾತಿಗೆ ಒಪ್ಪಿಗೆ ನೀಡಬೇಕಾಗುವುದು ಅವರ ಜವಾಬ್ದಾರಿ ಆಗಿರುತ್ತದೆ.‌

ಬಾಲಿವುಡ್ ‌ನ ಹಿರಿಯ ನಟ, ಬಹು ಜನಪ್ರಿಯ ನಟ ಅಮಿತಾಬ್ ಬಚ್ಚನ್(Amitab Bachchan) ಅವರು ಈಗಾಗಲೇ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಬಹಳಷ್ಟು ಅಹಾರ ಉತ್ಪನ್ನಗಳ ಜಾಹೀರಾತುಗಳಲ್ಲಿ(Advertisement) ಅವರು ನಟಿಸಿದ್ದಾರೆ. ಈಗ ಅವರು ನಟಿಸಿರುವ ಒಂದು ಬಿಸ್ಕೆಟ್ ಜಾಹೀರಾತಿಗೆ(Biscuit Advertisement) ಸಂಬಂಧಿಸಿದಂತೆ ಸ್ವತಂತ್ರ ವೈದ್ಯಕೀಯ ತಜ್ಞರು, ಮಕ್ಕಳ ವೈದ್ಯರು ಹಾಗೂ ಪೌಷ್ಠಿಕ ತಜ್ಞರ, ನ್ಯೂಟ್ರಿಷನ್ ಅಡ್ವೋಕಸಿ ಇನ್ ಪಬ್ಲಿಕ್ ಇಂಟರೆಸ್ಟ್ ಇಂಡಿಯಾ ಸಂಸ್ಥೆಯು ಅಮಿತಾಬ್ ಬಚ್ಚನ್ ಅವರಿಗೆ ಪತ್ರವೊಂದರ ಮೂಲಕ ಮನವಿಯೊಂದನ್ನು ಮಾಡಿದೆ ಎನ್ನಲಾಗಿದೆ.

NAPI ಸಂಸ್ಥೆ ಎರಡನೇ ಬಾರಿ ಪತ್ರವನ್ನು ಬರೆದಿದೆ ಎನ್ನಲಾಗಿದೆ. ವೈದ್ಯರು ಅಮಿತಾಬ್ ಬಚ್ಚನ್ ಅವರಿಗೆ ಈ ಸಂಸ್ಥೆ ಆರೋಗ್ಯವನ್ನು ಹದಗೆಡಿಸುವ ಬಿಸ್ಕೆಟ್ ನ ಜಾಹೀರಾತಿನಲ್ಲಿ ನಟಿಸಬೇಡಿ, ಈ ಬಿಸ್ಕೆಟ್ ಗಳು ಆರೋಗ್ಯದ ಮೇಲೆ‌ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಬ್ರಿಟಾನಿಯಾ ಮಿಲ್ಕ್ ನಿಕಿಸ್ ಜಾಹೀರಾತಿನಲ್ಲಿ ಅಮಿತಾಬ್ ಕಾಣಿಸಿಕೊಂಡಾಗಲೇ ಈ ವೈದ್ಯಕೀಯ ಸಂಸ್ಥೆ ಮೊದಲ ಪತ್ರವನ್ನು ಬರೆದಿತ್ತು ಎನ್ನಲಾಗಿದೆ. ಈಗ ಅದೇ ಸಂಸ್ಥೆ ಮತ್ತೊಮ್ಮೆ ಮನವಿಯನ್ನು ಮಾಡಿಕೊಂಡಿದೆ.

ಜನವರಿ ಹನ್ನೊಂದಕ್ಕೆ ಎರಡನೇ ಪತ್ರವನ್ನು ಬರೆದಿರುವ ಸಂಸ್ಥೆ ಅದರಲ್ಲಿ ಸವಿರವಾಗಿ ಮಾಹಿತಿಯನ್ನು ನೀಡಿದೆ ಎನ್ನಲಾಗಿದೆ. ನಟ ಅಮಿತಾಬ್ ಬಚ್ಚನ್ ಅವರು ಈ ಹಿಂದೆ ದೊಡ್ಡ ದೊಡ್ಡ ಕಂಪನಿಗಳಾದ ಪೆಪ್ಸಿ, ಹಾರ್ಲಿಕ್ಸ್ ನಂತಹ ಜಾಹೀರಾತುಗಳಿಂದಲೇ ಹಿಂದೆ ಸರಿದ ಉದಾಹರಣೆಗಳು ಉಂಟು. ಈಗ ಮತ್ತೊಮ್ಮೆ‌ ಅವರು ಅಂತಹುದೇ ನಿರ್ಧಾರವನ್ನು ಮಾಡಲಿದ್ದಾರಾ? ಎನ್ನುವುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಆ ನಟನನ್ನು ಹಾಡಿ ಹೊಗಳಿದ ರಶ್ಮಿಕಾ: ನನಸಾಗುತ್ತಾ ರಶ್ಮಿಕಾ ಕಾಣ್ತಾ ಇರೋ ಈ ಕನಸು? ಥ್ರಿಲ್ ಆದ ಅಭಿಮಾನಿಗಳು

Leave a Comment