ಅಭಿಮಾನಿಗಳಿಗೆ ಏಕಾಗ್ರತೆಯ ವೃದ್ಧಿಗಾಗಿ ಪ್ರಮುಖವಾದ ಟಿಪ್ಸ್ ಗಳನ್ನು ನೀಡಿದ ನಟಿ ಶಿಲ್ಪಾ ಶೆಟ್ಟಿ

Written by Soma Shekar

Published on:

---Join Our Channel---

ಬಾಲಿವುಡ್‌ ನ ಸ್ಟಾರ್ ನಟಿಸಿರುವ ಶಿಲ್ಪಾ ಶೆಟ್ಟಿ ಅವರು ತಮ್ಮ ಅಭಿಮಾನಿಗಳಿಗೆ ಏಕಾಗ್ರತೆಯ ಕುರಿತಾಗಿ, ಸಮಚಿತ್ತವನ್ನು ಹೊಂದುವುದು ಹೇಗೆ ಎನ್ನುವುದರ ಕುರಿತಾಗಿ ಕೆಲವು ಸರಳವಾದ ಟಿಪ್ಸ್ ಗಳನ್ನು ನೀಡಿದ್ದಾರೆ. ಪತಿ ರಾಜ್ ಕುಂದ್ರಾ ಬಂ‌ ಧ ನದ ನಂತರ ಒಂದಷ್ಟು ದಿನಗಳ ಕಾಲ ಶಿಲ್ಪಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣಗಳಿಂದ ಹಾಗೂ ಸುದ್ದಿ ಮಾಧ್ಯಮಗಳು ಮತ್ತು ತಮ್ಮ ಪ್ರಾಜೆಕ್ಟ್ ಗಳಿಂದ ದೂರ ಸರಿದು ನಿಶ್ಯಬ್ದವಾಗಿ ಉಳಿದಿದ್ದರು. ಕೆಲವೇ ದಿನಗಳ ಹಿಂದೆ ಅವರು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವುದು ಮಾತ್ರವೇ ಅಲ್ಲದೆ ತಮ್ಮ ಕೆಲಸಕ್ಕೆ ಹಿಂತಿರುಗಿದ್ದಾರೆ.

ಮಕ್ಕಳ ಜೊತೆ ಗಣೇಶ ಚತುರ್ಥಿಯನ್ನು ಬಹಳ ಸಂತೋಷದಿಂದ ಆಚರಿಸಿದ್ದಾರೆ ಶಿಲ್ಪಾ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ಸಮಚಿತ್ತ ಅಥವಾ ಏಕಾಗ್ರತೆಯನ್ನು ಹೊಂದುವುದು ಹೇಗೆ? ಎನ್ನುವ ಒಂದು ಬಹಳ ಪ್ರಮುಖವಾದ ವಿಚಾರದ ಕುರಿತಾಗಿ ಅಭಿಮಾನಿಗಳಿಗೆ ತನ್ನದೇ ಶೈಲಿಯಲ್ಲಿ ಪಾಠವನ್ನು ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಅವರು ವಿಡಿಯೋವನ್ನು ಶೇರ್ ಮಾಡಿಕೊಂಡು ಕೆಲವು ಆಸನಗಳನ್ನು ಕುರಿತಾದ ಮಾಹಿತಿಯನ್ನು ನೀಡಿದ್ದಾರೆ.‌

ವಿಡಿಯೋ ಜೊತೆಗೆ ಒಂದು ಪೋಸ್ಟ್ ಕೂಡಾ ಬರೆದಿದ್ದು ಅದರಲ್ಲಿ ಅವರು, ನಿಮ್ಮ ದಿನವನ್ನು ಒಂದು ಒಳ್ಳೆಯ ಮನಸ್ಸಿನಿಂದ ಆರಂಭಿಸುವುದು ಬಹಳ ಮುಖ್ಯ. ಪ್ರಾಮಾಣಿಕವಾಗಿ ಹೇಳುವುದಾದರೆ, ಹೆಚ್ಚಿನ ಮಟ್ಟದ ಶಕ್ತಿಯೊಂದಿಗೆ ಮತ್ತು ಚಟುವಟಿಕೆಗಳಿಂದ ತುಂಬಿರುವ ದಿನ ಅಥವಾ ವಾರವನ್ನು ಪ್ರಾರಂಭಿಸಬೇಕಾದರೆ ಯೋಗಕ್ಕಿಂತ ಉತ್ತಮವಾದ ಮಾರ್ಗ ಬೇರೋಂದಿಲ್ಲ ಎನ್ನುತ್ತಾ ಕೆಲವು ಆಸನಗಳ ಕುರಿತಾಗಿ ಮಾಹಿತಿಯನ್ನು ನೀಡಿದ್ದಾರೆ.

ಏಕ ಪಾದ ವಸಿಷ್ಠಾಸನವು ಸಮತೋಲನ, ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಣಿಕಟ್ಟಿನ ನಮ್ಯತೆಯನ್ನು ಬಲಪಡಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ. ಮುಂದೋಳುಗಳು, ಭುಜಗಳು ಮತ್ತು ಬೆನ್ನುಮೂಳೆಯನ್ನು ಬಲಪಡಿಸುವಾಗ ಇದು ಓರೆಗಳನ್ನು ಬಲಪಡಿಸುವ ಮತ್ತು ಟೋನ್ ಮಾಡುವ ಕೆಲಸ ಮಾಡುತ್ತದೆ ಮತ್ತು ಕೋರ್ ಅನ್ನು ಸ್ಥಿರಗೊಳಿಸುತ್ತದೆ.

https://www.instagram.com/p/CTwAS-0DwCz/?utm_medium=copy_link

ಈ ದಿನಚರಿಯು ನನ್ನ ದಿನವನ್ನು ಶಕ್ತಿಯುತವಾಗಿ ಆರಂಭಿಸಲು ಸಹಾಯ ಮಾಡುತ್ತದೆ. ಇದು ಅಗತ್ಯವೆಂದು ನೀವು ಭಾವಿಸುವವರೊಂದಿಗೆ ಇದನ್ನು ನೀವು ಹಂಚಿಕೊಳ್ಳಿ ಎಂದು ಹೇಳಿದ್ದಾರೆ. ಪ್ರಸ್ತುತ ನಟಿ ಶಿಲ್ಪಾ ಶೆಟ್ಟಿ ಅವರಿಗೆ 46 ವರ್ಷ ವಯಸ್ಸಾಗಿದೆ. ಆದರೆ ಅವರ ದೈಹಿಕ ಫಿಟ್ನೆಸ್ ನೋಡಿದಾಗ ಹಾಗೂ ಅಂದವನ್ನು ಗಮನಿಸಿದಾಗ ಅವರಿಗೆ ಎಷ್ಟು ವಯಸ್ಸಾಗಿದೆ ಎಂದು ನಂಬಲು ಸಾಧ್ಯವಿಲ್ಲ.

ಶಿಲ್ಪಾ ತನ್ನ ಈ ಫಿಟ್ನೆಸ್ ಹಾಗೂ ಸಹಜವಾದ ಅಂದದ ಹಿಂದಿನ ಪ್ರಮುಖವಾದ ಕಾರಣ ಯೋಗ ಎಂದು ಹೇಳುತ್ತಾರೆ. ಪ್ರತಿದಿನ ತಾನು ತಪ್ಪದೇ ಯೋಗಾಸನಗಳನ್ನು ಮಾಡುವುದರಿಂದಲೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರುವುದಾಗಿ ಹಾಗೂ ತಾನು ಹೆಚ್ಚು ಚಟುವಟಿಕೆಯಿಂದ ಇರಲು ಸಾಧ್ಯವಾಗಿದೆ ಎಂದು ಅನೇಕ ಸಂದರ್ಭಗಳಲ್ಲಿ ಅವರು ವಿವರಿಸಿದ್ದಾರೆ.

Leave a Comment