ಅಪರೂಪದ ಜೋಡಿಯ ಮದುವೆಗೆ ಆಹ್ವಾನ ಇಲ್ಲದಿದ್ರೂ ಹಾಜರಾದ್ರು ಸಾವಿರಾರು ಜನ: ಏನೀ ಮದುವೆಯ ವಿಶೇಷ??

Written by Soma Shekar

Published on:

---Join Our Channel---

ಒಂದು ಹೆಣ್ಣಿಗೆ ಒಂದು ಗಂಡು ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುವ ಮಾತನ್ನು ಹಿರಿಯರು ಆಗಾಗ ಹೇಳುವುದನ್ನು ಕೇಳಿದ್ದೇವೆ. ಅದರಲ್ಲೂ ವಿಶೇಷವಾಗಿ ಮದುವೆಯ ವಿಚಾರಗಳು ಪ್ರಸ್ತಾಪವಾದಾಗ ಈ ಮಾತು ಸಹಜವಾಗಿಯೇ ಕೇಳಿಬರುತ್ತದೆ. ಕೆಲವೊಮ್ಮೆ ಈ ಮಾತು ನಿಜ ಎನಿಸಿಬಿಡುತ್ತದೆ. ಈಗ ಈ ಮಾತಿಗೆ ತಕ್ಕಂತಹ ಒಂದು ವಿಶೇಷವಾದ ಮದುವೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದ್ದು, ವಿವಾಹವಾದ ಜೋಡಿ ಎಲ್ಲರ ಗಮನವನ್ನು ಸೆಳೆದಿದೆ. ಈ ಮದುವೆಗೆ ಆಹ್ವಾನಿತರಾಗಿಲ್ಲದೇ ಹೋದರು ಸಾವಿರಾರು ಜನರು ಆಗಮಿಸಿದ್ದಾರೆ.

ವಧು-ವರನ ವಿಶೇಷ ಜೋಡಿಯನ್ನು ನೋಡಲು, ಅವರೊಂದಿಗೆ ಸೆಲ್ಫಿ ಅನ್ನು ಕ್ಲಿಕ್ಕಿಸಿ ಕೊಳ್ಳಲು ನೂರಾರು ಜನರು ಹಾತೊರೆದಿದ್ದಾರೆ. ಅವರೊಡನೆ ಫೋಟೋ ತೆಗೆದುಕೊಂಡು ಅವರ ದಾಂಪತ್ಯ ಜೀವನ ಸುಖವಾಗಿರಲಿ ಎಂದು ಶುಭವನ್ನು ಹಾರೈಸಿದ್ದಾರೆ.  ಹಾಗಾದರೆ ಈ ಮದುವೆಯ ವಧು ಹಾಗೂ ವರನ ವಿಶೇಷತೆಯೇನು?  ಜನರು ಮದುವೆಯನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದು ಏಕೆ ?  ಎನ್ನುವುದಕ್ಕೆ ಖಂಡಿತಾ ಕಾರಣವೊಂದಿದೆ.

ಸಪ್ತಪದಿ ತುಳಿದು ಹೊಸ ಜೀವನಕ್ಕೆ ಅಡಿಯಿಟ್ಟ ಈ ಜೋಡಿಯಲ್ಲಿ ವರನ ಎತ್ತರ 36 ಇಂಚುಗಳಾಗಿದ್ದು, ವಧುವಿನ ಎತ್ತರ 34 ಇಂಚುಗಳಾಗಿದೆ.‌ ಈ ಜೋಡಿಯ ಮದುವೆ ಸುತ್ತಮುತ್ತಲ ಪ್ರದೇಶಗಳಲ್ಲಿ ಒಂದು ವಿಶೇಷ ಮದುವೆ ಎಂದೇ ಜನರ ಚರ್ಚೆಗಳಿಗೆ ಕಾರಣವಾಗಿದೆ.  24 ವರ್ಷ ವಯಸ್ಸಿನ ವಧು ಮಮತಾ ನವಗಚಿಯಾದ ಅಭಿಯಾ ಬಜಾರ್ ನ ಕಿಶೋರಿ ಮಂಡಲ್ ಅಲಿಯಾಸ್ ಗುಜೋ ಮಂಡಲ್ ಎನ್ನುವವರ ಪುತ್ರಿಯಾಗಿದ್ದಾರೆ.

ಮಸಾರು ನಿವಾಸಿಯಾದ ಬಿಂದೇಶ್ವರಿ ಮಂಡಲ್  ಅವರ 26 ವರ್ಷ ವಯಸ್ಸಿನ ಮಗ ಮುನ್ನಾ ಭಾರತಿ ವರ ನಾಗಿದ್ದಾನೆ. ವಧು ಮತ್ತು ವರನ ಎತ್ತರವೇ ಈ ಮದುವೆಯಾ ಕುರಿತಾಗಿ ಜನರಲ್ಲಿ ವಿಶೇಷ ಆಸಕ್ತಿಯನ್ನು ಮೂಡಿಸಲು ಕಾರಣವಾಗಿದೆ. 36 ಇಂಚು ಎತ್ತರದ ವರನೊಡನೆ 34 ಇಂಚು ಎತ್ತರದ ವಧುವಿನ ವಿವಾಹವನ್ನು ನೋಡಲು ಸುತ್ತಮುತ್ತಲ ಪ್ರದೇಶಗಳಿಂದ ಜನರು ಬಂದು ಮದುವೆಯನ್ನು ನೋಡಿ ನೂತನ ದಂಪತಿಗಳಿಗೆ ಶುಭವನ್ನು ಹಾರೈಸಿದ್ದಾರೆ.

Leave a Comment