ಗಾಸಿಪ್ ಗಳಿಗೆ ಬಿತ್ತು ಬ್ರೇಕ್: ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ

Written by Soma Shekar

Published on:

---Join Our Channel---

ಕನ್ನಡತಿ, ದಕ್ಷಿಣ ಸಿನಿಮಾ ರಂಗದ ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ(Anushka Shetty) ಬಾಹುಬಲಿ(Bahubali) ಸಿನಿಮಾ ನಂತರ ನಟಿಸಿದ ಎರಡು ಸಿನಿಮಾಗಳೂ ಸಹಾ ಅಷ್ಟೇನು ಗೆಲುವನ್ನು ಸಾಧಿಸಲಿಲ್ಲ. ಆದರೆ ಅದೇ ವೇಳೆ ನಟಿಯ ಮೇಲಿನ ಅಭಿಮಾನಿಗಳ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ ಎನ್ನುವುದು ಸಹಾ ಸತ್ಯ. ನಟಿ ಯಾವಾಗ ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಕಾಯತ್ತಿದ್ದರು. ಅಲ್ಲದೇ ಆಗಾಗ ಅನುಷ್ಕಾ ಹೊಸ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದವು ಆದರೆ ಅಧಿಕೃತವಾಗಿ ಯಾವುದೂ ಘೋಷಣೆ ಆಗಲಿಲ್ಲ.

ಇವೆಲ್ಲವುಗಳ ನಡುವೆ ಇತ್ತೀಚಿಗೆ ನಟಿ ಅನುಷ್ಕಾ (Anushka Shetty photos) ಅವರ ಇತ್ತೀಚಿನ ಫೋಟೋಗಳು ವೈರಲ್ ಆಗಿದ್ದವು. ನಟಿಯು ಮೊದಲಿಗಿಂತ ದಪ್ಪವಾಗಿದ್ದಾರೆ, ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸೈಜ್ ಜೀರೋ ಸಿನಿಮಾದ ನಂತರ ನಟಿಯು ತಮ್ಮ ಮೊದಲಿನ ಮೈಕಟ್ಟನ್ನು ಪಡೆಯಲು ಯಾವ ಪ್ರಯತ್ನ ಮಾಡಿದರೂ ಸರಿಯಾದ ಫಲಿತಾಂಶ ಸಿಗುತ್ತಿಲ್ಲ ಎಂದೆಲ್ಲಾ ಸುದ್ದಿಗಳು ಹರಿದಾಡಿದವು. ಆದರೆ ಈಗ ಸುದ್ದಿಗಳೇನೇ ಇದ್ದರೂ ನಟಿಯ ಅಭಿಮಾನಿಗಳಿಗೆ ಹೊಸ ಸಿಹಿಯೊಂದು ಹೊರ ಬಂದಿದೆ.

ಹೌದು, ಬಹಳ ದಿನಗಳ ನಂತರ ನಟಿ ಅನುಷ್ಕಾ ಶೆಟ್ಟಿ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ತೆಲುಗಿನ ಜನಪ್ರಿಯ ಯುವ ನಟ ನವೀನ್ ಪೋಲಿಶೆಟ್ಟಿ (Naveen Polishetty) ಜೊತೆಗೆ ನಾಯಕಿಯಾಗಿ ಅನುಷ್ಕಾ ಹೊಸ ಸಿನಿಮಾ ಮಾಡುತ್ತಿದ್ದು, ಸಿನಿಮಾದ ಅಧಿಕೃತ ಘೋಷಣೆ ಆಗಿದ್ದು, ಸಿನಿಮಾಕ್ಕೆ ಮಿಸ್ ಶೆಟ್ಟಿ, ಮಿಸ್ಟರ್ ಪೋಲಿ ಶೆಟ್ಟಿ(Ms Shetty, Mr Polishetty) ಎನ್ನುವ ಹೆಸರನ್ನು ನೀಡಲಾಗಿದೆ. ಪಿ.ಮಹೇಶ್ ಬಾಬು ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಇದೀಗ ಹೊಸ ಸಿನಿಮಾ ಘೋಷಣೆ ವಿಷಯ ತಿಳಿದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಅನುಷ್ಕಾ ನವೀನ್ ಪೋಲಿಶೆಟ್ಟಿ(Anushka Naveen Polishetty) ಜೊತೆಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ವಿಚಾರ ಬಹಳ ದಿನಗಳ ಹಿಂದೆಯೇ ಘೋಷಣೆ ಆಗಿತ್ತು. ಆದರೆ ಅದು ಅಧಿಕೃತ ಘೋಷಣೆ ಈಗ ಆಗಿದೆ. ಇಷ್ಟು ದಿನ ಇದನ್ನು ಕೇವಲ ಗಾಳಿಸುದ್ದಿಯೆಂದೇ ಹೇಳಲಾಗಿತ್ತು. ಆದರೆ ಈಗ ಸಿನಿಮಾದ ಅಧಿಕೃತ ಘೋಷಣೆಯೊಂದಿಗೆ ಹರಡಿದ್ದ ಸುದ್ದಿಗಳು ಗಾಸಿಪ್ ಅಲ್ಲ ಎನ್ನುವುದು ಸಹಾ ದೃಢ ಪಟ್ಟಿದೆ. ಅಭಿಮಾನಿಗಳು ಖುಷಿಯಾಗಿ ಕಾಮೆಂಟ್ ಮಾಡಿ ಸಿನಿಮಾಕ್ಕೆ ಶುಭ ಹಾರೈಸುತ್ತಿದ್ದಾರೆ.

Leave a Comment