ಅತ್ಯಂತ ಕೆಟ್ಟ ಸಿನಿಮಾ ಮಾಡಿದ ರಾಜಮೌಳಿಗೆ ಕನಿಷ್ಠ 6 ತಿಂಗಳ ಜೈಲು ಶಿಕ್ಷೆ ಆಗಬೇಕು: ಚಿತ್ರ ವಿಮರ್ಶಕನ ಕಟು ಟೀಕೆ

Written by Soma Shekar

Published on:

---Join Our Channel---

ಎಸ್ ಎಸ್ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ನಿನ್ನೆ ವಿಶ್ವದಾದ್ಯಂತ ಬಿಡುಗಡೆ ಹೊಂದಿದ್ದು, ಸಿನಿಮಾ ಬಗ್ಗೆ ಪ್ರೇಕ್ಷಕರು ಅಪಾರವಾದ ಮೆಚ್ಚುಗೆಗಳನ್ನು ನೀಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತ್ರಿಬಲ್ ಆರ್ ಕುರಿತಾದ ಸಿಕ್ಕಾಪಟ್ಟೆ ಸುದ್ದಿಗಳು ಹರಿದಾಡಿವೆ. ಜನರು ಥಿಯೇಟರ್ ಗಳ ಮುಂದೆ ಜಾತ್ರೆಯಂತೆ ಸೇರಿ ಸಂಭ್ರಮಿಸಿದ್ದಾರೆ. ಸಿನಿಮಾ ಬಗ್ಗೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಆದರೆ ಇವೆಲ್ಲವುಗಳ ನಡುವೆಯೇ ಚಿತ್ರ ವಿಮರ್ಶಕ ಕೆ ಆರ್ ಕೆ, ಕಮಾಲ್ ಆರ್ ಖಾನ್ ಮಾತ್ರ ಇಂತಹ ಕೆಟ್ಟ ಸಿನಿಮಾ ಮಾಡಿದ ರಾಜಮೌಳಿಯನ್ನು ಜೈಲಿಗೆ ಹಾಕಬೇಕು ಎಂದಿದ್ದಾರೆ.

ಕೆ ಆರ್ ಕೆ ತನ್ನ ಟ್ವೀಟ್ ನಲ್ಲಿ, ತ್ರಿಬಲ್ ಆರ್ ಒಂದು ಸಂಪೂರ್ಣ ತಲೆ, ಬುಡ ಇಲ್ಲದ ದಕ್ಷಿಣದ ಮಸಾಲೆ ಸಿನಿಮಾ ಆಗಿದೆ. ರಾಜಮೌಳಿ ಸಾಹೇಬರೇ ಈ ಸಿನಿಮಾದಲ್ಲಿ ಎಲ್ಲವೂ ಹೆಚ್ಚು ಅನಿಸ್ತಾ ಇಲ್ಲವೇ, ಸ್ವಲ್ಪ ಆದ್ರೂ ಲಿಮಿಟ್ ಇರಬೇಕು ಅನಿಸ್ತಿಲ್ವ, ನೀವಂತೂ ಅನ್ ಲಿಮಿಟೆಡ್ ಗೆ ಇಳಿದು ಬಿಟ್ಟಿದ್ದೀರಿ. ರಾಜಮೌಳಿ ಅವರೇ ನೀವು ನನ್ನೆಲ್ಲಾ ಸೆನ್ಸ್ ಗಳನ್ನು ಕೊಂದು ಹಾಕಿರುವಿರಿ. ಇಂದು ನನ್ನ ಜ್ಞಾನ ಜೀರೋ ಆಗಿದೆ. ಹೇಗೆ ನೀವು ಹೀಗೆಲ್ಲಾ ಮಾಡೋಕೆ ಸಾಧ್ಯ ಆಯ್ತು. ಪ್ರತಿಯೊಬ್ಬ ನಿರ್ದೇಶಕನು ತನ್ನ ಬೆಂಕಿಯನ್ನು ಹೊರಗಿಡುತ್ತಾನೆ. ಇದು ನಿಜವಾಗಿಯೂ ನಿಮ್ಮ ಬೆಂಕಿ ಎಂದು ಕೆ ಆರ್ ಕೆ ವ್ಯಂಗ್ಯ ಮಾಡಿದ್ದಾರೆ.

ಭಾರತ ಸಿನಿಮಾ ಇತಿಹಾಸದಲ್ಲಿ ಇಂತಹ ಕೆಟ್ಟ ಸಿನಿಮಾ ಬಂದಿಲ್ಲ. ಈ ಸಿನಿಮಾ ಮೆದುಳಿನ ಜೀವಕೋಶಗಳನ್ನು ಕೊಂದು, ಮನುಷ್ಯ ಬದುಕಿರುವಾಗಲೇ ಸಾಯುವಂತೆ ಮಾಡುತ್ತವೆ. ಭಾರತೀಯ ಸಿನಿಮಾದಲ್ಲೇ ಇದೊಂದು ಅತಿ ಕೆಟ್ಟ ಸಿನಿಮಾ. ಇದನ್ನು ನಾನು ಮಿಸ್ಟೇಕ್ ಎನ್ನುವುದಿಲ್ಲ, ಇದೊಂದು ದೊಡ್ಡ ಅ ಪ ರಾ ಧ. 650 ಕೋಟಿಯಲ್ಲಿ ಇಷ್ಟು ಕೆಟ್ಟ ಸಿನಿಮಾವನ್ನು ನಿರ್ದೇಶನ ಮಾಡಿರುವ ನಿರ್ದೇಶಕ ರಾಜಮೌಳಿಗೆ ಕನಿಷ್ಠ ಆರು ತಿಂಗಳ ಜೈಲು ಶಿಕ್ಷೆಯಾಗಬೇಕು ಎಂದೆಲ್ಲಾ ಟ್ವೀಟ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.

ಇಷ್ಟೇ ಅಲ್ಲದೇ ಕೆ ಆರ್ ಕೆ ಇಬ್ಬರು ಸ್ಟಾರ್ ನಟರೂ ಆ್ಯಕ್ಷನ್ ಸೀನ್ ಗಳಲ್ಲೇ ಬ್ಯುಸಿಯಾಗಿದ್ದಾರೆ, ಆದ್ದರಿಂದ ನಟನೆ ಮಾಡಲು ಸಮಯ ಸಿಕ್ಕಿಲ್ಲ ಎಂದಿದ್ದಾರೆ. ಅಲ್ಲದೇ ಇಬ್ಬರು ನಟರು ಕುಳ್ಳಗಿದ್ದಾರೆ. ಬಾಲಿವುಡ್ ಸ್ಟಾರ್ ಗಳ ಹಾಗಿಲ್ಲ. ‌ಆಲಿಯಾ ಭಟ್ ಪಾತ್ರ ಅವರ ಹೆಸರಿಗಿಂತಲೂ ಚಿಕ್ಕದು ಎಂದಿದ್ದು, ಅಜಯ್ ದೇವಗನ್ ಪಾತ್ರ ಸಹಾ ಕಡಿಮೆ ಅವಧಿಯದ್ದು ಅದಕ್ಕೆ ಅವರ ನಟನೆ ಬಗ್ಗೆ ತಾನು ಮಾತಾಡೋಕೆ ಆಗಲ್ಲ ಎಂದಿದ್ದು, ಬಾಲಿವುಡ್ ಗೆ ತಕ್ಕಂತ ಸಂಗೀತ ಇಲ್ಲ ಎಂದಿದ್ದಾರೆ ಕೆ ಆರ್ ಕೆ.

Leave a Comment