ಬಡ ಕುಟುಂಬದ ಸಹೋದರರ ಸಾಧನೆ: ಅಣ್ಣನಿಗೆ 11, ತಮ್ಮನಿಗೆ 6 ಬಾರಿ ಒಲಿದ ಸರ್ಕಾರಿ ಉದ್ಯೋಗಗಳು:IAS ಈಗ ಅವರ ಗುರಿ

Written by Soma Shekar

Updated on:

---Join Our Channel---

ಬಡ ಕುಟುಂಬಗಳಲ್ಲಿ ಇಂದಿಗೂ ಸಹ ಸರ್ಕಾರಿ ಕೆಲಸ ಪಡೆಯುವುದು ಎಂದರೆ ಅದೊಂದು ಅದ್ಭುತ ಸಾಧನೆ ಎಂದು ಹೇಳಲಾಗುತ್ತದೆ. ಯಾವುದಾದರೂ ಒಂದು ಬಡ ಕುಟುಂಬದ ವ್ಯಕ್ತಿಯೊಬ್ಬ ತನ್ನ ಪ್ರತಿಭೆ ಹಾಗೂ ಶ್ರಮದಿಂದ ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡರೆ, ಆತನ ಉದಾಹರಣೆಯನ್ನು ಅವರ ದೂರದೂರದ ಸಂಬಂಧಿಕರಲ್ಲೂ ನೀಡಲಾಗುತ್ತದೆ. ಗ್ರಾಮಗಳಲ್ಲಿ ಆದರೆ ಇಡೀ ಗ್ರಾಮ ಅವರನ್ನು ಮಾದರಿ ವ್ಯಕ್ತಿಯನ್ನಾಗಿ ನೋಡುತ್ತದೆ. ಅಲ್ಲದೇ ಅನೇಕ ಮನೆಗಳಲ್ಲಿ ಅಂತಹವರ ಉದಾಹರಣೆ ಹೇಳುತ್ತಾ ತಮ್ಮ ಮಕ್ಕಳಿಗೂ ಸಹ ಅವರಂತೆ ಆಗಲು ಹಿರಿಯರು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಬಡತನ ಒಂದು ಕಡೆ, ಸ್ಪರ್ಧಾ ಜಗತ್ತು ಇನ್ನೊಂದು ಕಡೆ, ಆದರೆ ಅದೆಲ್ಲವನ್ನೂ ಸಮರ್ಥವಾಗಿ ಎದುರಿಸಿ ಸರ್ಕಾರಿ ಉದ್ಯೋಗ ಗಳಿಸುವುದು ಬಡ ಕುಟುಂಬದವರಿಗೆ ಒಂದು ಮಹತ್ವದ ಸಾಧನೆಯಾಗಿದೆ.

ನಾವಿಂದು ಹೇಳಲು ಹೊರಟಿರುವುದು ಕೂಡಾ ಅಂತಹದೇ ಬಡ ಕುಟುಂಬದಿಂದ ಬಂದ ಇಬ್ಬರು ಸಾಧಕರ ಕುರಿತಾಗಿ. ರಾಜಸ್ಥಾನದ ಗ್ರಾಮವೊಂದರ ಸಾಮಾನ್ಯ ಕುಟುಂಬದಲ್ಲಿ ಸರ್ಕಾರಿ ಉದ್ಯೋಗ ಎನ್ನುವುದು ಒಂದು ದೊಡ್ಡ ಕನಸಾಗಿತ್ತು. ಆದರೆ ಆ ಕನಸು ಕನಸಾಗಿಯೇ ಉಳಿದಿತ್ತು. ಆದರೆ ಅದನ್ನು ನಿಜ ಮಾಡುವಂತಹ ಇಬ್ಬರು ಸಹೋದರರು ಆ ಕುಟುಂಬದಲ್ಲಿ ಜನಿಸಿದರು. ವಿಶೇಷವೆಂದರೆ ಅವರಿಗೆ ಈವರೆಗೂ ಎಷ್ಟು ಸರ್ಕಾರಿ ಕೆಲಸಗಳ ಅವಕಾಶ ಒದಗಿ ಬಂದಿವೆ ಎನ್ನುವುದು ಕೂಡಾ ಬಹಳ ಆಸಕ್ತಿಕರ ವಿಷಯವಾಗಿದೆ. ಜೀವನದ ಮೇಲೆ ಹತಾಶೆ ಹೊಂದಿರುವವರು, ಸಾಧನೆ ಅಸಾಧ್ಯ ಎನ್ನುವ ಭಾವನೆ ಇರುವವರಿಗೆ ಈ ಇಬ್ಬರು ಸಹೋದರರು ಖಂಡಿತ ಸ್ಫೂರ್ತಿಯಾಗುತ್ತಾರೆ.

ರಾಜಸ್ಥಾನದ ಗ್ರಾಮವೊಂದರಲ್ಲಿ ರೈತರಾಗಿರುವ ಮೋತಿಲಾಲ್ ಹಾಗೂ ಅವರ ಅಲ್ಪಸ್ವಲ್ಪ ಓದಿರುವ ಪತ್ನಿ ಕಮಲಾ ದೇವಿ ಅವರ ಮಕ್ಕಳು ರಾಕೇಶ್ ಕುಮಾರ್ ತಾನಾಣ ಮತ್ತು ಮಹೇಂದ್ರ ಕುಮಾರ್ ತಾನಾಣ. ಈ ಇಬ್ಬರು ಸಹೋದರರಿಗೆ ಒಬ್ಬ ತಂಗಿ ಹಾಗೂ ತಮ್ಮ ಕೂಡ ಇದ್ದಾರೆ. ತಂಗಿಗೆ ವಿವಾಹವಾಗಿದ್ದು, ತಮ್ಮ ಬಿಎಸ್ಸಿ ಪದವಿಯನ್ನು ಪಡೆದುಕೊಂಡಿದ್ದಾರೆ. ನಾವೀಗ ಹೇಳಲು ಹೊರಟಿರುವುದು ರಾಕೇಶ್ ಹಾಗೂ ಮಹೇಂದ್ರ ಅವರ ಕುರಿತಾಗಿ. ರಾಕೇಶ್ ಮನೆಯ ಹಿರಿಯ ಮಗನಾಗಿದ್ದು, ಅವರು ಇದುವರೆಗೂ 11 ಸರಕಾರಿ ಉದ್ಯೋಗಗಳ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಇನ್ನು ಮನೆಯ ಎರಡನೇ ಮಗ,‌ರಾಕೇಶ್ ಅವರ ತಮ್ಮ ಮಹೇಂದ್ರ ಆರು ಸರ್ಕಾರಿ ಉದ್ಯೋಗಗಳ ಪರೀಕ್ಷೆಗಳನ್ನು ಪಾಸ್ ಮಾಡಿದ್ದಾರೆ.

ಇವರಿಬ್ಬರನ್ನು ಸ್ಪೂರ್ತಿಯಾಗಿ ಪಡೆದ ಅವರ ತಮ್ಮ ಕೂಡಾ ತಾನೂ ಸರ್ಕಾರಿ ಉದ್ಯೋಗವನ್ನು ಪಡೆಯಲು ಪರೀಕ್ಷೆಗಳನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ರಾಕೇಶ್ ಮತ್ತು ಮಹೇಂದ್ರ ಅವರು ಪ್ರಸ್ತುತ ಆರ್ ಎ ಸ್ ( Rajasthan Administrative Service ) ಹಾಗೂ ಐಎಎಸ್ ಪರೀಕ್ಷೆಗಳಿಗಾಗಿ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದ್ದಾರೆ. ಈ ಸದಸ್ಯರು ಸಹೋದರರು ಪರೀಕ್ಷೆಗಳಿಗೆ ಸಿದ್ಧವಾಗುವ ವಿಧಾನವನ್ನು ತಿಳಿಸುತ್ತಾ, ತಾವು ತಿಂಡಿ ಮುಗಿಸಿದ ನಂತರ ಕೋಣೆಯನ್ನು ಸೇರಿ, ಅದರ ಚಿಲಕ ಹಾಕಿಕೊಂಡು ಹಲವು ಗಂಟೆಗಳ ಕಾಲ ಅಧ್ಯಯನವನ್ನು ಮಾಡುತ್ತೇವೆ. ಚಿಲಕ ಹಾಕಿದ್ದರಿಂದ ಯಾರೂ ನಮ್ಮನ್ನು ಡಿಸ್ಟರ್ಬ್ ಮಾಡುವುದಿಲ್ಲ ಎಂದು ಹೇಳುತ್ತಾರೆ.

ರಾಕೇಶ್ ಅವರಿಗೆ ವಿವಾಹವಾಗಿದೆ. ಇನ್ನು ಮಹೇಂದ್ರ ಅವರಿಗೆ ವಿವಾಹ ಆಗಬೇಕಿದೆ. ಆದರೆ ಇಬ್ಬರು ಸಹೋದರರು ಅಧ್ಯಯನದ ಕಡೆಗೂ ಗಮನ ನೀಡುವುದು ಕಡಿಮೆಯಾಗಿಲ್ಲ. ಇಬ್ಬರು ಸಹೋದರರು ಕೂಡಾ ತಾವು ಸೋಶಿಯಲ್ ಮೀಡಿಯಾ ಗಳಿಂದ ಸದಾ ದೂರವೇ ಉಳಿದಿದ್ದೇವೆ ಎಂದು ಹೇಳುತ್ತಾರೆ. ಇವರು ಕಡೆಯ ಬಾರಿ ಸೋಶಿಯಲ್ ಮೀಡಿಯಾ ಬಳಕೆ ಮಾಡಿದ್ದು 2013 ರಲ್ಲಿ ಎಂದು ಹೇಳಿದಾಗ ಒಂದು ಆಶ್ಚರ್ಯವಾಗುತ್ತದೆ. ಒಂದು ವೇಳೆ ನಾವೇನಾದರೂ ಸೋಶಿಯಲ್ ಮೀಡಿಯಾದಲ್ಲಿ ಸಮಯವನ್ನು ಕಳೆಯುತ್ತಾ‌ ಇದ್ದಿದ್ದರೆ ನಮ್ಮ ಜೀವನದಲ್ಲಿ ಇಂತಹ ಒಂದು ದಿನ ಬರುತ್ತಲೇ ಇರಲಿಲ್ಲ ಅವರು ಹೇಳುತ್ತಾರೆ.

ಇಬ್ಬರು ಸಹೋದರರು ಸಹ ತಾವು ಅಧ್ಯಯನ ಮಾಡಿದ ವಿಷಯಗಳ ನೋಟ್ಸ್ ಗಳನ್ನು ಸಿದ್ಧಪಡಿಸಿ ಕೊಳ್ಳುತ್ತಾರೆ. ರಾಕೇಶ್ ಮತ್ತು ಮಹೇಂದ್ರ ಇಬ್ಬರೂ ತಾವು ತಮ್ಮ ಅಧ್ಯಯನದಲ್ಲಿ ಬಹುತೇಕ ತಾವೇ ಸಿದ್ಧಪಡಿಸಿಕೊಂಡ ಅಂತಹ ನೋಟ್ಸ್ ಗಳ ಮೂಲಕವೇ ಅಧ್ಯಯನ ಮಾಡುತ್ತಿದ್ದೆವು, ಈಗಲೂ ಅದನ್ನೇ ಮಾಡುತ್ತೇವೆ ಎನ್ನುವ ವಿಚಾರವನ್ನು ಸಹ ಹಂಚಿಕೊಂಡಿದ್ದಾರೆ. ಅಲ್ಲದೇ ಅಧ್ಯಯನದ ಕಡೆಗೆ ಹೆಚ್ಚಿನ ಗಮನವನ್ನು ನೀಡಲು, ಅದಕ್ಕಾಗಿಯೇ ಹೆಚ್ಚಿನ ಸಮಯವನ್ನು ಮೀಸಲು ಮಾಡಿದ್ದಾಗಿ ಹೇಳಿದ್ದಾರೆ. ರಾಜಸ್ಥಾನದ ಹಲವು ಸ್ಥಳೀಯ ಸರ್ಕಾರಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವ ಮೂಲಕ ಸಹೋದರರು ದೊಡ್ಡ ಸುದ್ದಿಯನ್ನು ಮಾಡಿದ್ದಾರೆ.

Leave a Comment