ಅಗಲಿದ ನಟನಿಗೆ ಇದೆಂತಾ ಅವಮಾನ: ನೊಂದ ಅಭಿಮಾನಿಗಳಿಂದ ಬಾಯ್ ಕಾಟ್ ಫ್ಲಿಪ್ ಕಾರ್ಟ್ ಆಯ್ತು ಟ್ರೆಂಡ್

Written by Soma Shekar

Published on:

---Join Our Channel---

ಆನ್ಲೈನ್ ಶಾಪಿಂಗ್ ಮಾರುಕಟ್ಟೆ ದಿಗ್ಗಜ ಎನಿಸಿರುವ ಫ್ಲಿಪ್ ಕಾರ್ಟ್ ಬಹಳ ಜನಪ್ರಿಯ. ಪ್ರಸ್ತುತ ಜನರು ತಮಗೆ ಬೇಕಾದ ವಸ್ತುಗಳನ್ನು ಫ್ಲಿಪ್ ಕಾರ್ಡ್ ಮೂಲಕ ಆರ್ಡರ್ ಮಾಡಿದರೆ ಆ ವಸ್ತು ಬಹಳ ಬೇಗ ಮನೆ ಬಾಗಿಲನ್ನು ತಲುಪುತ್ತದೆ. ಆನ್ಲೈನ್ ಶಾಪಿಂಗ್ ವ್ಯವಹಾರದಲ್ಲಿ ಫ್ಲಿಪ್ ಕಾರ್ಟ್ ಇಂದು ವಿಶಾಲವಾದ ವ್ಯಾಪ್ತಿಯನ್ನು ಸಹಾ ಪಡೆದಿದೆ. ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಬಾಯ್ ಕಾಟ್ ಫ್ಲಿಪ್ ಕಾರ್ಟ್ ಅಥವಾ ಪ್ಲಿಪ್ ಕಾರ್ಟ್ ಅನ್ನು ನಿಷೇಧ ಮಾಡಿ ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದ್ದು, ಅನೇಕರು ಫ್ಲಿಪ್ ಕಾರ್ಟ್ ಮೇಲೆ ತಮ್ಮ ಸಿಟ್ಟು, ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಜನರ ಈ ಅಸಮಾಧಾನಕ್ಕೆ ಕಾರಣವಾಗಿದ್ದು ಫ್ಲಿಪ್ ಕಾರ್ಟ್ ನಲ್ಲಿ ಕಾಣಿಸಿಕೊಂಡ ಟೀ ಶರ್ಟ್ ಬ್ರಾಂಡ್ ಆಗಿದೆ. ಹೌದು ಬಾಲಿವುಡ್ ನ ಯುವ ನಟ, ಅಪಾರ ಜನಪ್ರಿಯತೆಯನ್ನು ಪಡೆದುಕೊಂಡು, ತನ್ನ ಅಭಿನಯ ಶೈಲಿಯಿಂದ ಜನರ ಮನಸ್ಸನ್ನು ಸೂರೆಗೊಂಡಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಇದ್ದಕ್ಕಿದ್ದ ಹಾಗೆ ತಮ್ಮ ಜೀವನವನ್ನು ಕೊನೆ ಮಾಡಿಕೊಂಡಾಗ ಅಭಿಮಾನಿಗಳು ಶಾ ಕ್ ಆಗಿದ್ದರು. ಜನರು ಇನ್ನೂ ಸಹಾ ಸುಶಾಂತ್ ಅವರ ಅಂತಹುದೊಂದು ನಿರ್ಧಾರದ ಬಗ್ಗೆ ಇಂದಿಗೂ ಬೇಸರವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ.

ಅಭಿಮಾನಿಗಳು ಒಂದು ರೀತಿಯಲ್ಲಿ ಸುಶಾಂತ್ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಾರುಕಟ್ಟೆಗೆ ಒಂದು ಟಿ-ಶರ್ಟ್‌ನಲ್ಲಿ ಎಸ್‌ಎಸ್‌ಆರ್‌ನ ಕಲಾಕೃತಿಯನ್ನು ಮುದ್ರಿಸಲಾಗಿತ್ತು, ಅದರೊಂದಿಗೆ “ಮುಳುಗಿದಂತಹ ಖಿನ್ನತೆ’ ( Depression is like Drowning ) ಎಂದು ಬರೆಯಲಾಗಿದೆ. ಇದನ್ನು ನೋಡಿ ಅಭಿಮಾನಿಗಳು ಮತ್ತು ನೆಟ್ಟಿಗರು ಬೇಸರ ಪಟ್ಟಿದ್ದಾರೆ. ಇದೇ ಬೇಸರದ ಕಾರಣದಿಂದ ಹೆಚ್ಚು ಹೆಚ್ಚು ಜನರು ಈ ಟೀ-ಶರ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡುತ್ತಿದ್ದಂತೆ, ‘ಬಾಯ್ಕಾಟ್ ಫ್ಲಿಪ್‌ಕಾರ್ಟ್’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡಿದ್ದಾರೆ.

ಬಹಳಷ್ಟು ಜನ ನೆಟ್ಟಿಗರು ಫ್ಲಿಪ್ ಕಾರ್ಟ್ ಬಗ್ಗೆ ಟ್ವಿಟರ್ ನಲ್ಲಿ ಅಸಮಾಧಾನ ಹೊರಹಾಕುತ್ತಲೇ, ತಮ್ಮ ಅಭಿಮಾನ ನಟನ ನಗ್ಗೆ ನೋವನ್ನು ತೋಡಿಕೊಂಡಿದ್ದಾರೆ. ಸುಶಾಂತ್ ಅವರ ದು ರಂ ತ ಅಂತ್ಯವನ್ನು ಜನರು ಇನ್ನೂ ಮರೆತಿಲ್ಲ, ಆ ನೋವಿನಿಂದ ಹೊರ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸುಶಾಂತ್ ಅವರ ಚಿತ್ರವನ್ನು ಈ ರೀತಿ ಬಳಸಿದ ಕಂಪನಿಯ ಉತ್ಪನ್ನವನ್ನು ಸ್ವೀಕರಿಸಿದ ಫ್ಲಿಪ್ ಕಾರ್ಟ್ ಗೆ ನಾಚಿಕೆಯಾಗಬೇಕು. ಫ್ಲಿಪ್ ಕಾರ್ಟ್ ಸುಶಾಂತ್ ಅಭಿಮಾನಿಗಳ ಕ್ಷಮೆಯಾಚಿಸಬೇಕು ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

Leave a Comment