ಅಂತಹವರ ನರ ಕಟ್ ಮಾಡಿ ಬಿಸಾಕಿ: ಸಿಡಿದೆದ್ದ ಉರ್ಫಿಯ ಕೋಪ ಯಾರ ಮೇಲೆ? ಏಕೆ?

Written by Soma Shekar

Published on:

---Join Our Channel---

Urfi Javed : ಸಾಮಾಜಿಕ ಜಾಲತಾಣಗಳಲ್ಲಿ ತೊಡುವ ಬಟ್ಟೆಗಳ ಕಾರಣವಾಗಿಯೇ ಸದಾ ಸುದ್ದಿಯಾಗುತ್ತಾ, ಟ್ರೋಲ್ ಆಗುವುದು ಮಾತ್ರವೇ ಅಲ್ಲದೇ ಅ ಶ್ಲೀ ಲ ಬಟ್ಟೆಗಳು ತೊಟ್ಟರೆಂದು ಕೆಲವರಿಂದ ದೂರು ದಾಖಲಾಗಿ ಅದರಿಂದಲೂ ಸುದ್ದಿಯಾದ ಸೆಲೆಬ್ರಿಟಿ ಯಾರು ಎನ್ನುವುದಾದರೆ ಸಿಗೋದು ಒಂದೇ ಉತ್ತರ ಅದು ಉರ್ಫಿ ಜಾವೇದ್(Urfi Javed) ಎನ್ನುವುದು. ಹೌದು, ಕಳೆದ ಒಂದೂವರೆ ವರ್ಷದಿಂದಲೂ ಸಹಾ ನಟಿ ಉರ್ಫಿ ಜಾವೇದ್(Urfi) ಚಿತ್ರ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡು ನೆಟ್ಟಿಗರ ಸಿಟ್ಟಿಗೆ ಕಾರಣವಾಗುತ್ತಾ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಓಡಾಡಿಕೊಂಡಿರುವ ಉರ್ಫಿ ಇದೀಗ ಕಳೆದ ಕೆಲವು ದಿನಗಳಿಂದಲೂ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ಉರ್ಫಿ ದುಬೈಗೆ (Dubai) ಪ್ರವಾಸಕ್ಕೆಂದು ಹೋಗಿದ್ದಾಗ ಅಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅರೆ ಬರೆ ಬಟ್ಟೆಯನ್ನು ತೊಟ್ಟು ಓಡಾಡಿದ್ದು, ಶೂಟ್ ಮಾಡಿದ್ದು ನೋಡಿದ ಅಲ್ಲಿನ ಪೋಲಿಸರು ನಟಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಈ ವಿಷಯ ಅನಂತರ ದೃಢ ಪಟ್ಟಿತ್ತು ಕೂಡಾ. ನಟಿ ಅನುಮತಿ ಇಲ್ಲದ ಕಡೆ ಹಾಗೆ ಬಂದಿದ್ದು ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಕಾರಣವಾಯಿತು ಎಂದಿದ್ದರು ದುಬೈ ಪೋಲಿಸರು. ಇನ್ನು ನಟಿಗೆ ನವೀನ್ ಗಿರಿ ಎನ್ನುವವರು ಅ ತ್ಯಾ ಚಾ ರ ಮತ್ತು ಕೊ ಲೆ ಬೆ ದ ರಿ ಕೆ ಯನ್ನು ಹಾಕಿದ್ದರು, ಅನಂತರ ಅವರನ್ನು ಆದಷ್ಟು ಬೇಗನೇ ಪೋಲಿಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ನವೀನ್ ಗಿರಿಯ(Naveen Giri) ಬಂಧನದ ನಂತರ ಉರ್ಫಿ ಜಾ ವೇ ದ್ ಆತನ ವಿಚಾರವಾಗಿ ಸಿಕ್ಕಾಪಟ್ಟೆ ಕೋಪದಿಂದ ತಮ್ಮ ಅಸಮಾಧಾನ ಮತ್ತು ಆ ಕ್ರೋ ಶವನ್ನು ಹೊರ ಹಾಕಿದ್ದಾರೆ. ಉರ್ಫಿ ಜಾವೇದ್(Urfi Javed) ತನಗೆ ಬೆ ದ ರಿ ಕೆ ಹಾಕಿದವನ ವಿಚಾರವಾಗಿ ಪ್ರತಿಕ್ರಿಯೆಯನ್ನು ನೀಡಿದ್ದು, ಉರ್ಫಿ ತನಗೆ ಬೆ ದ ರಿ ಕೆ ಹಾಕಿದವನ ನರ ಕಟ್ ಮಾಡಿ, ಬೀದಿಯಲ್ಲಿ ಬಿಸಾಕಿ ಎಂದು ಪೋಲಿಸರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ಉರ್ಫಿಯು ಹೇಳಿದ ಮಾತುಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇನ್ನು ದುಬೈ ನಲ್ಲಿ ನಡೆದ ಘಟನೆಯ ವಿಚಾರವಾಗಿ ಮಾತ್ರ ಉರ್ಫಿ ಮಾದ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave a Comment