ಹೊಸ ಹೇಳಿಕೆ ನೀಡಿ ಜನರನ್ನು ಕೆಣಕಿದ ಆಲಿಯಾ: ನಟಿಯ ಸವಾಲು ಸ್ವೀಕರಿಸಿ ಗರ್ವ ಭಂಗ ಮಾಡೋಕೆ ಸಜ್ಜಾಗಿ ಅಂದ ನೆಟ್ಟಿಗರು

Entertainment Featured-Articles Movies News

ಬಾಲಿವುಡ್ ಸಿನಿಮಾಗಳು ಮತ್ತು ಅಲ್ಲಿನ ಸ್ಟಾರ್ ನಟರಿಗೆ ಬಾಯ್ ಕಾಟ್ ಬಿಸಿಯು ತಟ್ಟಿದ್ದು, ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾಗಳು ಹೀನಾಯ ಸೋಲನ್ನು ಕಾಣುತ್ತಿದೆ. ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಬಹಳಷ್ಟು ಜನ ನಿರ್ಮಾಪಕರು ಹಾಗೂ ಸಿನಿಮಾ ನಟ-ನಟಿಯರಿಗೆ ಸಹಜವಾಗಿಯೇ ಆ ತಂ ಕವೊಂದು ಕಾಡುತ್ತಿದೆ. ದಕ್ಷಿಣದ ಸಿನಿಮಾಗಳು ಉತ್ತರದಲ್ಲಿ ಸಾಕಷ್ಟು ಸದ್ದನ್ನು ಮಾಡುವಾಗಲೇ, ದಕ್ಷಿಣ ಸಿನಿಮಾಗಳ ಅಬ್ಬರವನ್ನು ಭರಿಸಲಾಗದೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗುತ್ತಿದ್ದು, ಬಾಲಿವುಡ್ ಕಂಗಾಲಾಗಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಹೊಸ ಹೇಳಿಕೆಯ ಮೂಲಕ ಜನರನ್ನು ಕೆಣಕುವ ಕೆಲಸ ಮಾಡಿದ್ದಾರೆ.

ಬಾಲಿವುಡ್ ನಲ್ಲಿ ನಟಿ ಆಲಿಯಾ ಭಟ್ ಗೆ ತಮ್ಮದೇ ಆದಂತಹ ಸ್ಥಾನ ಮತ್ತು ವರ್ಚಸ್ಸು ಎರಡೂ ಇವೆ. ಈಗಾಗಲೇ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಈ ನಟಿ, ತಮ್ಮ ನಟನೆಗಾಗಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುವ ನಟಿ ಕೂಡಾ ಆಲಿಯಾ ಭಟ್ ಇಂದು ಎನ್ನುವುದು ಹೊಸ ವಿಚಾರವೇನಲ್ಲ. ಸಾಮಾನ್ಯ ಜ್ಞಾನದ ಕೊರತೆಯ ವಿಚಾರವಾಗಿ, ನೇಪೋಟಿಸಂ ವಿಚಾರವಾಗಿ ಈಗಾಗಲೇ ಸಾಕಷ್ಟು ಬಾರಿ ನಟಿ ಟ್ರೋಲ್ ಆಗಿದ್ದಾರೆ. ಆದರೆ ಇದೀಗ ನಟಿಯು ಮತ್ತೊಂದು ಹೊಸ ವಿ ವಾ ದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ನಟಿ ಆಲಿಯಾ ಭಟ್, “ನಾನು ಮಾತಿನ ಮೂಲಕ ನನ್ನನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನಿಮಗೆ ಇಷ್ಟ ಇಲ್ಲ ಎನ್ನುವುದಾದರೆ ನನ್ನನ್ನು ನೋಡಬೇಡಿ. ಯಾಕೆ ನಾನೇನೂ ಮಾಡಲಾಗುವುದಿಲ್ಲ” ಎನ್ನುವ ಅರ್ಥದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ನಟಿಯು ಆಡಿದ ಮಾತು ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಾತುಗಳು ನೆಟ್ಟಿಗರು ಮತ್ತು ಜನರನ್ನು ಕೆರಳಿಸಿ, ಅವರನ್ನು ಸಿಟ್ಟಾಗುವಂತೆ ಮಾಡಿದೆ. ನಟಿ ಆಡಿದ ಮಾತುಗಳನ್ನು ಕೇಳಿದ ನಂತರ ನೆಟ್ಟಿಗರು ಆಲಿಯಾ ಭಟ್ ಅವರಿಗೆ ಪ್ರೇಕ್ಷಕರ ಬಗ್ಗೆ ಗೌರವವಿಲ್ಲ ಎಂದಿದ್ದಾರೆ.

ಅವರು ಬಹಳ ಅಹಂಕಾರದಿಂದ ಮಾತ ಮಾಡಿದ್ದಾರೆ ಮತ್ತು ಅವರು ನಮಗೆ ನೀಡಿರುವ ಸವಾಲನ್ನು ನಾವು ಸ್ವೀಕರಿಸೋಣ. ಆಲಿಯಾ ಭಟ್ ಅವರ ಮುಂದಿನ ಸಿನಿಮಾ ಬ್ರಹ್ಮಾಸ್ತ್ರವನ್ನು ಬಹಿಷ್ಕರಿಸೋಣ ಎಂದು ಹೇಳಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ ಕಾಟ್ ಬ್ರಹ್ಮಾಸ್ತ್ರ ಟ್ರೆಂಡ್ ಆಗುತ್ತಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಇಂತಹದೇ ಒಂದು ಹೇಳಿಕೆಯನ್ನು ನೀಡಿದ್ದರು, ನಟಿ ಕರೀನಾ ಕಪೂರ್. ಆಗ ಅವರು ಸಹಾ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದರು. ಈಗ ಆಲಿಯಾ ಭಟ್ ಕೂಡಾ ಮತ್ತೊಮ್ಮೆ ಅದೇ ಕೆಲಸ ಮಾಡಿ ಜನರನ್ನು ಕೆಣಕಿದ್ದಾರೆ ಮತ್ತು ಹೊಸ ಸಿನಿಮಾ ಬಿಡುಗಡೆ ವೇಳೆಯಲ್ಲೇ ವಿ ವಾ ದಕ್ಕೆ ಕಾರಣವಾಗಿದ್ದಾರೆ.

Leave a Reply

Your email address will not be published.