ಹೊಸ ಹೆಸರಿನೊಂದಿಗೆ ಆಧ್ಯಾತ್ಮದ ಕಡೆ ಮುಖ ಮಾಡಿದ ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೋಟೂರು

Written by Soma Shekar

Published on:

---Join Our Channel---

ಕನ್ನಡ ಬಿಗ್ ಬಾಸ್ ಸೀಸನ್ ಏಳರಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನು ಹುಟ್ಟುಹಾಕಿದ್ದ ಸ್ಪರ್ಧಿಗಳಲ್ಲಿ ಚೈತ್ರಾ ಕೋಟೂರು ಅವರು ಕೂಡಾ ಒಬ್ಬರಾಗಿದ್ದರು. ಬಿಗ್ ಬಾಸ್ ನಿಂದ ಹೊರಗೆ ಬಂದ ಮೇಲೆ ಚೈತ್ರ ಅವರು ಮೊದಲಿಗಿಂತಲೂ ಹೆಚ್ಚು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಬಿಗ್ ಬಾಸ್ ನಂತರ ಸಿನಿಮಾ ಹಾಗೂ ಕಿರುತೆರೆಯಲ್ಲಿ ತೊಡಗಿಕೊಂಡಿದ್ದ ಚೈತ್ರಾ ಕೋಟೂರು ಅವರು ಕಿರುತೆರೆಯಲ್ಲಿ ಲಗ್ನ ಪತ್ರಿಕೆ ಎನ್ನುವ ಧಾರವಾಹಿಯ ಮೂಲಕ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಪ್ರಯತ್ನವನ್ನು ಮಾಡಿದ್ದರು. ಇವೆಲ್ಲವುಗಳ ನಡುವೆ ಇವರ ವಿವಾಹ ಸರಳವಾಗಿ ಒಂದು ದೇವಾಲಯದಲ್ಲಿ ನಡೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಅವರ ಮದುವೆಯ ವಿಷಯವು ದೊಡ್ಡ ಸುದ್ದಿಯಾಗಿತ್ತು.

ಚೈತ್ರ ಕೋಟೂರು ಅವರಿಗೆ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಅವರ ವಿವಾಹದ ಶುಭಾಶಯವನ್ನು ಕೋರುವಾಗಲೇ ಅವರ ವಿವಾಹದ ವಿಷಯ ವಿ ವಾ ದಕ್ಕೆ ತಿರುಗಿತ್ತು. ವಿವಾಹದ ವಿಚಾರವಾಗಿ ಎದ್ದ ವಿ ವಾ ದದಿಂದಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿತ್ತು. ಇವೆಲ್ಲವುಗಳಿಂದ ಮನನೊಂದ ಚೈತ್ರಾ ಕೊಟೂರು ಅವರು ಪ್ರಾಣವನ್ನು ಕಳೆದು ಕೊಳ್ಳುವ ಪ್ರಯತ್ನ ಮಾಡಿ, ಆಸ್ಪತ್ರೆ ಸೇರಿದ್ದ ವಿಷಯ ಕೂಡಾ ಸುದ್ದಿಯಾಗಿತ್ತು. ಅದೃಷ್ಟವಶಾತ್ ಅದರಿಂದ ಪಾರಾಗಿದ್ದ ಚೈತ್ರ ಅವರು ಈಗ ಇವೆಲ್ಲಗಳ ನಂತರ ಆಧ್ಯಾತ್ಮದ ಕಡೆಗೆ ಮುಖ ಮಾಡಿದ್ದಾರೆ.

ಓಶೋ ಮಂದಿರವನ್ನು ಸೇರಿರುವ ಚೈತ್ರ ಅವರು ಅಲ್ಲಿ ಧ್ಯಾನ ಮತ್ತು ಆಧ್ಯಾತ್ಮದ ಕಡೆಗೆ ಹೆಚ್ಚಿನ ಒಲವನ್ನು ತೋರಿದ್ದಾರೆ. ಬೆಳಗಾವಿಯಲ್ಲಿರುವ ಓಶೋ ಧ್ಯಾನ ಶಿಬಿರವನ್ನು ಸೇರಿದ್ದಾರೆ ಚೈತ್ರಾ ಕೋಟೂರು ಅವರು. ಅಲ್ಲದೇ ಅವರು ತಮ್ಮ ಹೆಸರನ್ನು ಸಹ ಬದಲಾವಣೆ ಮಾಡಿಕೊಂಡಿದ್ದಾರೆ. ಮಾ ಪ್ರಗ್ಯಾ ಭಾರತಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಸ್ವತಃ ಚೈತ್ರಾ ಕೋಟೂರು ಅವರು ಈ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ ಓಶೋ ಧ್ಯಾನ ಶಿಬಿರ ಎಂದು ಚೈತ್ರಾ ಕೊಟೂರು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡು, ಗುರುಗಳೊಂದಿಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮಾನಸಿಕ ನೆಮ್ಮದಿಯಿಂದ ದೂರವಾಗಿದ್ದ ಚೈತ್ರ ಅವರು ಇದೀಗ ಆಧ್ಯಾತ್ಮದ ಕಡೆಗೆ ಗಮನ ನೀಡಿದ್ದು ಅವರ ಈ ಪಯಣ ಅವರ ಮನಸ್ಸಿಗೆ ನೆಮ್ಮದಿಯನ್ನು ನೀಡಲಿ ಎಂದು ನಾವು ಹಾರೈಸೋಣ.

Leave a Comment