ಹೊಸ ಸಿನಿಮಾ ಬಿಡುಗಡೆ ಬೆನ್ನಲ್ಲೇ ಹೊಸ ದುಬಾರಿ ಕಾರು ಖರೀದಿ ಮಾಡಿದ ರಿಷಬ್ ಶೆಟ್ಟಿ

Entertainment Featured-Articles Movies News

ಕನ್ನಡ ಸಿನಿಮಾರಂಗದಲ್ಲಿ ರಿಷಭ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಅವರ ಸಿನಿಮಾಗಳು ಒಂದಲ್ಲಾ ಒಂದು ವಿಶೇಷತೆಯಿಂದ ಪ್ರೇಕ್ಷಕರ ಮುಂದೆ ಬಂದು ಅವರ ಮನಸ್ಸನ್ನು ಗೆದ್ದು, ಯಶಸ್ಸನ್ನು ಪಡೆದುಕೊಳ್ಳುತ್ತದೆ. ಒಂದು ಉತ್ತಮ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡುವ ಪ್ರಯತ್ನವನ್ನು ರಿಷಭ್ ಶೆಟ್ಟಿ ಅವರು ಮಾಡಿಕೊಂಡು ಬರುತ್ತಿದ್ದಾರೆ. ಅವರ ಸಿನಿಮಾಗಳನ್ನು ಮೆಚ್ಚಿ ನೋಡುವ ದೊಡ್ಡ ಪ್ರೇಕ್ಷಕ ಬಳಗವೇ ಇದೆ ಎಂದರೆ ತಪ್ಪಾಗಲಾರದು.

ಇನ್ನು ಕೆಲವೇ ದಿನಗಳ ಹಿಂದೆ ಎಷ್ಟೇ ರಿಷಬ್ ಶೆಟ್ಟಿ ಅವರ ಹೊಸ ಸಿನಿಮಾ ಹರಿಕಥೆ ಅಲ್ಲ ಗಿರಿ ಕಥೆ ತೆರೆಕಂಡಿದೆ. ಈ ಸಿನಿಮಾ ಪ್ರೇಕ್ಷಕರ ಮನಸ್ಸುಗಳಿಗೆ ನಗೆಯ ಕಚಗಯಳಿಯನ್ನು ರಿಷಭ್ ಶೆಟ್ಟಿ ಅವರು ಇಟ್ಟಿದ್ದಾರೆ. ಇನ್ನು ಸಿನಿಮಾ ಬಿಡುಗಡೆಯ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಅವರ ಮನೆಗೆ ಒಂದು ಹೊಸ ದುಬಾರಿ ಕಾರಿನ ಎಂಟ್ರಿ ಆಗಿದೆ. ಹೊಸ ದುಬಾರಿ ಕಾರನ್ನು ಖರೀದಿ ಮಾಡಿದ ರಿಷಭ್ ಶೆಟ್ಟಿ ಅವರು ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.

ರಿಷಭ್ ಶೆಟ್ಟಿ ಹಾಗೂ ಅವರ ಪತ್ನಿ ಹೊಸ ಕಾರಿನ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಅವರು ಶೇರ್ ಮಾಡಿಕೊಂಡ ಫೋಟೋಗಳಿಗೆ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆಗಳನ್ನು ನೀಡಿದ್ದಾರೆ. ರಿಷಭ್ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಪತಿ ಆಡಿ ಕ್ಯೂ 7 ಕಾರನ್ನು ಮಾಡಿರುವ ಹಿನ್ನೆಲೆಯಲ್ಲಿ ವಿಶ್ ಮಾಡುತ್ತಾ, “ಆಡಿ ಕ್ಯೂ 7 ಹೊಸದಾಗಿ ಸೇರ್ಪಡೆ ಆಯ್ತು, ನಿಮ್ಮ ಪರಿಶ್ರಮ ಮತ್ತು ಬದ್ಧತೆ ಕುರಿತು ಯಾವಾಗಲೂ ಹೆಮ್ಮೆಯಾಗುತ್ತದೆ” ಎಂದು ಹೇಳಿದ್ದಾರೆ.

ರಿಷಭ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಸಹಾ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದಾರೆ. ಅವರು ಸಿನಿಮಾಗಳಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸವನ್ನು ಮಾಡುತ್ತಾ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ರಿಷಭ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಲಾಂಛನದಲ್ಲಿ ಕಾಂತಾರಾ ಸಿನಿಮಾ ನಿರ್ದೇಶನ ಮಾಡಿ ನಟಿಸುತ್ತಿದ್ದಾರೆ‌. ಈ ಸಿನಿಮಾದ ಟೀಸರ್ ಬಿಡುಗಡೆ ಆಗಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಕುತೂಹಲವನ್ನು ಕೆರಳಿಸಿದೆ‌.

Leave a Reply

Your email address will not be published.