ಹೊಸ ಸಿನಿಮಾಕ್ಕೆ ಸಿದ್ಧತೆ ನಡೆಸಿದ್ದಾರಾ ಮೇಘನಾ ರಾಜ್?? ಜಿಮ್ ಕಡೆ ಮುಖ ಮಾಡಿದ ನಟಿ

0 2

ಸ್ಯಾಂಡಲ್ವುಡ್ ನ ನಟಿ ಮೇಘನಾ ರಾಜ್ ಅವರು ಕನ್ನಡ ಸಿನಿ ರಂಗದ ಹಿರಿಯ ಕಲಾವಿದರಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿಯ ಮುದ್ದಿನ ಮಗಳು ಹಾಗೂ ಸರ್ಜಾ ಕುಟುಂಬದ ಸೊಸೆ. ಮೇಘನಾ ಅವರು ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲದೇ ಮಲೆಯಾಳಂ ಸಿನಿ ರಂಗದಲ್ಲಿ ಸಹಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸುಂದರವಾದ ಜೀವನದಲ್ಲಿ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಅವರ ಜೊತೆಗೆ ಸುಖೀ ಜೀವನ ನಡೆಸುತ್ತಿದ್ದ ಅವರಿಗೆ ಚಿರಂಜೀವಿ ಅಗಲಿಕೆ ದೊಡ್ಡ ನೋವನ್ನು ನೀಡಿತ್ತು.

ಚಿರು ಅಗಲಿಕೆಯ ನೋವಿನ ಬೆನ್ನಲ್ಲೇ ಮುದ್ದು ಮಗನ ಆಗಮನ ಅವರ ಜೀವನದಲ್ಲಿ ಒಂದು ಹೊಸ ಖುಷಿಯನ್ನು ನೀಡಿತು. ದಿನಕಳೆದಂತೆ ಮೇಘನಾ ಅವರು ಸಾಮಾನ್ಯ ಜೀವನದ ಕಡೆಗೆ ಮರಳುತ್ತಿದ್ದಾರೆ. ಮೇಘನಾ ಅವರು ಹೊಸ ಸಿ‌ನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಿರುವ ವಿಷಯ ಸಹಾ ಇತ್ತೀಚಿಗೆ ಸುದ್ದಿಯಾಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟಿ ಮೇಘನಾ ಆಗಾಗ ವಿಶೇಷ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹಲವು ವಿಚಾರಗಳನ್ನು ತಿಳಿಸುತ್ತಾರೆ.

ಇದೀಗ ಮೇಘನಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಾವು ವರ್ಕೌಟ್ ಮಾಡಲು ಜಿಮ್ ಗೆ ವಾಪಸಾಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಮೇಘನಾ ಅವರು ಫೋಟೋ ಜೊತೆಗೆ, “ಭಾನುವಾರ ಹೇಗೆ ಮಾದರಿಯಾಗಿ ಪ್ರಾರಂಭವಾಗುತ್ತದೆ, ಜಿಮ್ ನಲ್ಲಿ ಪರಿಸರ ಸ್ನೇಹಿಯಾದ ಪರಿಸರ ಸ್ನೇಹಿ ಮ್ಯಾಟ್ ಹಾಗೂ ಪಾದರಕ್ಷೆಗಳು” ಎಂದು ಬರೆದುಕೊಂಡಿದ್ದಾರೆ. ಮೇಘನಾ ಅವರು ಶೇರ್ ಮಾಡಿಕೊಂಡ ಪೋಸ್ಟ್ ನೋಡಿ ಅವರ ಅಭಿಮಾನಿಗಳು ಮೆಚ್ಚುಗೆಯನ್ನು ನೀಡಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

Leave A Reply

Your email address will not be published.