ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಅಗಲಿಕೆಯಿಂದ ಅವರ ಪತ್ನಿ, ನಟಿ ಮೇಘನಾ ರಾಜ್ ಮಾನಸಿಕವಾಗಿ ಬಹಳ ಕುಸಿದು ಹೋಗಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಅವರಿಗೆ ಪತಿಯ ಅಗಲಿಕೆ ಒಂದು ಆ ಘಾ ತವನ್ನು ನೀಡಿತ್ತು. ಅನಂತರ ರಾಯನ್ ರಾಜ್ ಸರ್ಜಾ ಆಗಮನವು ಮೇಘನಾ ಅವರ ಜೀವನದಲ್ಲಿ ಒಂದು ಹೊಸ ನಗೆಯನ್ನು ಹೊತ್ತು ತಂದಿತ್ತು. ತಮ್ಮ ಮುದ್ದು ಮಗನ ಪಾಲನೆ, ಪೋಷಣೆಯಲ್ಲಿ ಮೇಘನಾ ರಾಜ್ ಅವರು ಚೇತರಿಸಿಕೊಳ್ಳಲು ಆರಂಭಿಸಿದರು ಹಾಗೂ ಹಂತ ಹಂತವಾಗಿ ಅವರ ಸಹಜ ಸ್ಥಿತಿಗೆ ಮರಳ ತೊಡಗಿದರು.
ಈಗ ಮೇಘನಾ ರಾಜ್ ಅವರು ಬಹು ದಿನಗಳ ನಂತರ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಕನ್ನಡ ಕಿರುತೆರೆಯ ಡಾನ್ಸ್ ರಿಯಾಲಿಟಿ ಶೋ ಒಂದಕ್ಕೆ ಮೇಘನಾ ಅವರು ಜಡ್ಜ್ ಆಗಿ ಎಂಟ್ರಿ ನೀಡಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿ ಆರಂಭಿಸಿರುವ ಹೊಸ ಸೆಲೆಬ್ರಿಟಿ ಡಾನ್ಸ್ ರಿಯಾಲಿಟಿ ಶೋ ಡಾನ್ಸಿಂಗ್ ಚಾಂಪಿಯನ್ ಶೋ ನ ಮೂವರು ಜಡ್ಜ್ ಗಳಲ್ಲಿ ಒಬ್ಬರಾಗಿ ಮೇಘನಾ ರಾಜ್ ಅವರು ಕಾಣಿಸಿಕೊಳ್ಳುತ್ತಿದ್ದು ವೃತ್ತಿ ಜೀವನದಲ್ಲಿ ಹೊಸ ಹೆಜ್ಜೆಯನ್ನು ಇಡುವುದಕ್ಕೆ ಅವರು ಸಜ್ಜಾಗಿದ್ದಾರೆ.
ಜನವರಿ ಎಂಟರಿಂದ ಈ ಡಾನ್ಸ್ ರಿಯಾಲಿಟಿ ಶೋ ಆರಂಭ ಆಗುತ್ತಿದ್ದು, ವಾರಾಂತ್ಯ ಶನಿವಾರ ಮತ್ತು ಭಾನುವಾರಗಳಂದು ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಸೆಲೆಬ್ರಿಟಿ ಜಡ್ಜ್ ಆಗಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮೇಘನಾ ರಾಜ್ ಅವರ ಪ್ರೊಮೋ ಒಂದರ ತುಣುಕನ್ನು ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮೇಘನಾ ಅವರು ತಮ್ಮ ಮಗ ರಾಯನ್ ಹಾಗೂ ಪತಿ ಚಿರು ಅವರ ಗುಣಗಳ ಬಗ್ಗೆ ಹೇಳಿರುವ ದೃಶ್ಯ ಇದೆ.
ರಾಯನ್ ಸೇಮ್ ಅವರ ಅಪ್ಪನ ರೀತಿಯೇ ತರಲೆ. ಅಮ್ಮ ಅನ್ನು ಎಂದು ಹೇಳಿ ಕೊಟ್ಟರೆ ವಾಪಸ್ ತಿರುಗಿ ಅಪ್ಪ ಎನ್ನುತ್ತಾನೆ. ಇಂದು ಚಿರು ಬಗ್ಗೆ ಯೋಚಿಸಿದಾಗ ಯಾವಾಗಲೂ ಒಂದು ನಗು ಇರುತ್ತದೆ. ಅವರು ಯಾವಾಗಲೂ ಖುಷಿಯಾಗಿರುತ್ತಿದ್ದರು, ಖುಷಿಯನ್ನು ಹಂಚುತ್ತಿದ್ದರು, ಅದನ್ನೇ ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಎನ್ನುವ ಮಾತನ್ನು ಮೇಘನಾ ಅವರು ಹೇಳಿಕೊಂಡು, ಚಿರು ಅವರನ್ನು ಕುರಿತಾಗಿ ಮಾತನಾಡಿದ್ದಾರೆ.
ಇದೇ ವೇಳೆ ಅವರು, “ಜೀವನದಲ್ಲಿ ಚಿರು ನನಗೆ ಹೇಳಿಕೊಟ್ಟಿದ್ದು ಒಂದೇ, ಮುಂದೆ ಏನಾಗುತ್ತೋ ಆಗಲಿ, ಹಿಂದೆ ಏನಾಗಿದೆ ಎಂಬುದು ನಮಗೆ ಬೇಕಾಗಿಲ್ಲ. ಇವತ್ತು ನಾವು ಇಲ್ಲಿ ಇರುವುದು ಮುಖ್ಯ. ನಾವು ಈ ಕ್ಷಣವನ್ನು ಎಂಜಾಯ್ ಮಾಡಬೇಕು. ಚಿರು ಕೂಡಾ ಇದನ್ನೇ ಮಾಡುತ್ತಿದ್ದರು” ಎಂದು ಮೇಘನಾ ಅವರು ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.