ಹೊಸ ಲುಕ್, ಹೊಸ ಸ್ಟೈಲ್ ನಲ್ಲಿ ಕಣ್ಸೆಳೆದ ಮಂಗಳ ಗೌರಿ ಮದುವೆ ಸೀರಿಯಲ್ ನಟಿ ಕಾವ್ಯಶ್ರೀ ಗೌಡ

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಕಾವ್ಯಶ್ರೀ ಗೌಡ ಹೆಸರು ಖಂಡಿತ ಹೊಸದಲ್ಲ. ಏಕೆಂದರೆ ಈ ನಟಿಯು ಕನ್ನಡ ಕಿರುತೆರೆಯ ಮೂಲಕ ಈಗಾಗಲೇ ನಾಡಿನ ಲಕ್ಷಾಂತರ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಾವ್ಯಶ್ರೀ ಗೌಡ ಅವರು ಕನ್ನಡದ ಜನಪ್ರಿಯ ಧಾರಾವಾಹಿಯಾದ ಮಂಗಳ ಗೌರಿ ಮದುವೆ ಯಲ್ಲಿ ಮಂಗಳ ಪಾತ್ರಧಾರಿಯಾಗಿ ಮನೆ ಮನೆ ಮಾತಾಗಿದ್ದಾರೆ. ಸೀರಿಯಲ್ ನಲ್ಲಿ ಅವರ ನಟನೆಯನ್ನು ನೋಡಿ ಅಭಿಮಾನಿಗಳಾದ ಅನೇಕರು ಅವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಫಾಲೋ ಮಾಡುತ್ತಿದ್ದಾರೆ. ಕಾವ್ಯಶ್ರೀ ಗೌಡ ಅವರು ಧಾರಾವಾಹಿಯಲ್ಲಿ ಒಬ್ಬ ಸಂಸ್ಕಾರವಂತ ಮನೆಯ ಸಾಮಾನ್ಯ ಹೆಣ್ಣುಮಗಳಾಗಿ ಕಾಣಿಸಿಕೊಳ್ಳುವುದೇ ಹೆಚ್ಚು. ಆದರೆ ತಮ್ಮ ನಿಜ ಜೀವನದಲ್ಲಿ ಒಬ್ಬ ಅಪರೂಪ ಸೌಂದರ್ಯವತಿಯೂ ಹೌದು.

ಕಾವ್ಯಶ್ರೀ ಗೌಡ ಅವರ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಇತ್ತೀಚಿನ ಫೋಟೋಶೂಟ್ ಒಂದರ ಸುಂದರವಾದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟಿಯನ್ನು ಈ ಹಿಂದೆ ನೋಡದಂತಹ ಹೊಸ ರೂಪದಲ್ಲಿ ನೋಡಿ ಅವರ ಅಭಿಮಾನಿಗಳು ಬಹಳ ಸಂತಸಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡ ಫೋಟೋಗಳಿಗೆ ಅದ್ಭುತವಾದ ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ಅಭಿಮಾನಿಗಳು ನಟಿಯ ಹೊಸ ರೂಪಕ್ಕೆ ಮನಸೋತಿದ್ದಾರೆ. ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಮಂಗಳ ಗೌರಿ ಮದುವೆ ಧಾರಾವಾಹಿ ಯಲ್ಲಿ ಎಂದೂ ನೋಡದಂತಹ ಹೊಸ ಲುಕ್ಸ್ ಹಾಗೂ ಸ್ಟೈಲ್ ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಅವರು ತೊಟ್ಟ ಮಾಡ್ರನ್ ಡ್ರೆಸ್ ಹಾಗೂ ಅದಕ್ಕೆ ತಕ್ಕಂತಹ ಜ್ಯವೆಲ್ಲರಿ ಹಾಗೂ ಮೇಕಪ್ ನಿಂದಾಗಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ ಕಾವ್ಯಶ್ರೀ ಗೌಡ. ನಟಿ ಕಾವ್ಯಶ್ರೀ ಗೌಡ ವೃತ್ತಿಪರವಾಗಿ ಪತ್ರಕರ್ತೆ. ಅವರು ಕಿರುತೆರೆಯಲ್ಲಿ ಬೆಂಗಳೂರಿನ ಒಂದು ಸ್ಥಳೀಯ ವಾಹಿನಿಯ ಮೂಲಕ ನಿರೂಪಕಿಯಾಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ನಂತರ ಅವರು ಮಂಗಳಗೌರಿ ಮದುವೆ ಧಾರವಾಹಿಯ ಮೂಲಕ ನಟಿಯಾಗಿ ಜರ್ನಿ ಆರಂಭಿಸಿದರು.

Leave a Comment