ಹೊಸ ಲುಕ್ ನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ನಾಗಿಣಿ 2 ಖ್ಯಾತಿಯ ನಮ್ರತಾ ಗೌಡ ಸ್ಟನ್ನಿಂಗ್ ಫೋಟೋ ಗಳು

Entertainment Featured-Articles Movies News

ಕನ್ನಡ ಕಿರುತೆರೆಯ ನಟಿ ನಮ್ರತಾ ಗೌಡ ಅವರಿಗೆ ಪ್ರತ್ಯೇಕ ಪರಿಚಯದ ಅಗತ್ಯ ಖಂಡಿತ ಇಲ್ಲ. ಬಾಲನಟಿಯಾಗಿ ಕಿರುತೆರೆಯನ್ನು ಪ್ರವೇಶಿಸಿದ ನಟಿ ನಮ್ರತಾ ಅವರು ಇಂದು ಕಿರುತೆರೆಯ ಸ್ಟಾರ್ ನಟಿಯಾಗಿದ್ದಾರೆ. ಕನ್ನಡ ಕಿರುತೆರೆಯ ಚಿರಪರಿಚಿತ ಮುಖವಾಗಿದ್ದಾರೆ ನಟಿ ನಮ್ರತಾ ಗೌಡ. ಕನ್ನಡ ಮನರಂಜನೆಯ ಲೋಕದ ಗ್ಲಾಮರ್ ನಟಿಯರಲ್ಲಿ ಒಬ್ಬರಾಗಿರುವ ನಟಿ ನಮ್ರತಾ ಗೌಡ ಅವರ ಫ್ಯಾಷನ್ ಹಾಗೂ ಅವರ ವಿಶೇಷ ಸ್ಟೈಲ್ ಗಳಿಗೆ ಸಾಕ್ಷಿಯಾಗಿದೆ ಅವರ ವೈವಿದ್ಯಮಯ ಫೋಟೋ ಶೂಟ್ ನ ಫೋಟೋಗಳು. ಇದರಲ್ಲಿ ನಟಿಯ ಅಂದ ನೋಡಿ ಫಿದಾ ಆದವರು ಸಹಸ್ರಾರು ಮಂದಿ.

ನಾಗಿಣಿ ಖ್ಯಾತಿಯ ಈ ನಟಿಯ ಹೊಸ ಲುಕ್ ಈಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ‌. ಇದೇ ವೇಳೆ ಅವರ ಹೊಸ ಲುಕ್ ಸ್ಟನ್ನಿಂಗ್ ಎನ್ನುವಂತೆ ಇದೆ. ನಟಿಯು ಹೊಸ ಫೋಟೋ ಶೂಟ್ ನಲ್ಲಿ ರಸ್ಟ್ ಬ್ರೌನ್ ಬಣ್ಣದ ಲೆಹಂಗಾ ಮತ್ತು ಕ್ರಾಪ್ ಟಾಪ್ ಧರಿಸಿದ್ದಾರೆ. ನಟಿಯ ಈ ಹೊಸ ಲುಕ್ ಕಡೆಗೆ ನೆಟ್ಟಿಗರು ತಿರುಗಿ ನೋಡುವಂತೆ ಅವರ ಹೊಸ ಲುಕ್ ಎಲ್ಲರ ಗಮನವನ್ನು ಸೆಳೆದಿದ್ದು, ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿದೆ. ಕಡಿಮೆ ಒಡವೆಗಳು, ಸಿಂಪಲ್ ಬ್ಯಾಕ್ ಗ್ರೌಂಡ್ ನಲ್ಲಿ ನಟಿಯ ಅಂದ ಎದ್ದು ಕಾಣುತ್ತಿದೆ.

ನಟಿ ಕ್ಯಾಮರಾ ಮುಂದೆ ಒಂದು ಸುಂದರವಾದ ಪೋಸ್ ನೀಡಿದ್ದು, ಹಸಿರಿನ ನಡುವೆ ನಟಿಯ ಈ ಅಂದವಾದ ಪೋಸ್ ಅದ್ಬುತವಾಗಿ ಮೂಡಿ ಬಂದಿದೆ. ನಟಿಯು ಶೇರ್ ಮಾಡಿಕೊಂಡ ಅವರ ಹೊಸ ಫೋಟೋ ಶೂಟ್ ನ ಫೋಟೋ ನೋಡಿ ಅವರ ಅಭಿಮಾನಿಗಳು ಥ್ರಿಲ್ ಅಗಿದ್ದು, ಮೆಚ್ಚುಗೆಗಳನ್ನು ನೀಡುತ್ತಾ ಸಾಗಿದ್ದಾರೆ. ಅನೇಕರು ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳಿಗೆ ತಮ್ಮ ಅಭಿಮಾನ ನಟಿಯ ಹೊಸ ಫೋಟೋಗಳು ಬಹಳ ಖುಷಿಯನ್ನು ನೀಡಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ವೃತ್ತಿಯ ವಿಚಾರಕ್ಕೆ ಬಂದರೆ ನಟಿ ನಮ್ರತಾ ಗೌಡ ಅವರು ಪ್ರಸ್ತುತ ನಾಗಿಣಿ 2 ಸೀರಿಯಲ್ ನಲ್ಲಿ ನಾಗಿಣಿ ಪಾತ್ರದ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ನಾಗಿಣಿ ಪಾತ್ರದ ಮೂಲಕ ನಮ್ರತಾ ಅವರು ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ನಾಗಿಣಿ ಪಾತ್ರವು ತನಗೆ ಅನಿರೀಕ್ಷಿತವಾಗಿ ಸಿಕ್ಕ ಅವಕಾಶ ಎಂದು ಮಾದ್ಯಮವೊಂದರ ಸಂದರ್ಶನದಲ್ಲಿ ನಟಿ ನಮ್ರತಾ ಅವರು ಹೇಳಿದ್ದುಂಟು. ನಮ್ರತಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಹಾ ದೊಡ್ಡ ಮಟ್ಟದ ಹಿಂಬಾಲಕರು ಇದ್ದಾರೆ.

Leave a Reply

Your email address will not be published.