ಹೊಸ ಲುಕ್ ನಲ್ಲಿ ಪುಟ್ಟಕ್ಕನ ಮಗಳು: ಸ್ನೇಹ ಖ್ಯಾತಿಯ ನಟಿ ಸಂಜನಾ ಹೊಸ ಲುಕ್ ಗೆ ನೆಟ್ಟಿಗರು ಫಿದಾ!!

Entertainment Featured-Articles Movies News

ಕನ್ನಡ ಕಿರುತೆರೆಯ ಜನಪ್ರಿಯ ಹಾಗೂ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿದೆ ಪುಟ್ಟಕ್ಕನ ಮಕ್ಕಳು ಸೀರಿಯಲ್. ಈ ಸೀರಿಯಲ್ ಮೂಲಕ ಸ್ಯಾಂಡಲ್ವುಡ್ ನ‌ ಹಿರಿಯ ನಟಿ ಉಮಾಶ್ರೀ ಅವರು ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದು, ಪುಟ್ಟಕ್ಕನ ಪಾತ್ರದ ಮೂಲಕ ಅಪಾರ ಜನ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಪುಟ್ಟಕ್ಕನ ಮೂರು ಜನ ಹೆಣ್ಣು ಮಕ್ಕಳಲ್ಲಿ ಎರಡನೆಯ ಮಗಳು ಸ್ನೇಹ ಪಾತ್ರದ ಮೂಲಕ ಯುವ ನಟಿ ಸಂಜನಾ ಬುರ್ಲಿ ತಮ್ಮ ಪಾತ್ರದ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಗಟ್ಟಿಗಿತ್ತಿ, ದಿಟ್ಟ ಯುವತಿಯಾಗಿ ಸ್ನೇಹ ಪಾತ್ರಕ್ಕೆ ಜೀವ ತುಂಬಿದ್ದಾರೆ ಸಂಜನಾ ಬುರ್ಲಿ.

ನಟಿ ಸಂಜನಾ ಬುರ್ಲಿ ಅವರು ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಹಳ್ಳಿ ಹೆಣ್ಣು ಮಗಳ ಪಾತ್ರವನ್ನು ನಿರ್ವಹಿಸುತ್ತಲಿರುವ ಕಾರಣದಿಂದಾಗಿ ಅದಕ್ಕೆ ಹೊಂದುವಂತೆ ಸರಳವಾದ ಉಡುಗೆ ತೊಡಗೆ ಹಾಗೂ ಮೇಕಪ್ ನಿಂದ ಕಾಣಿಸಿಕೊಳ್ಳುತ್ತಾರೆ. ಅವರ ಈ ಸರಳ ಲುಕ್ ನೋಡಿಯೇ ಅನೇಕರು ಅವರ ಅಭಿಮಾನಿಗಳಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ರಿಯಲ್ ಲೈಫ್ ನಲ್ಲೂ ಅವರು ಹೀಗೆ ಹಳ್ಳಿ ಹುಡುಗಿಯ ಜೊತೆಗೆ ಮಾಡ್ರನ್ ಲುಕ್ ನಲ್ಲಿ ಸಹಾ ಸಖತ್ ಅಂದವಾಗಿ ಕಾಣುತ್ತಾರೆ. ಇದಕ್ಕೆ ಸಾಕ್ಷಿ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳು.

ಹೌದು, ಸಂಜನಾ ಬುರ್ಲಿ ಅವರಿಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೂಲಕ ದೊಡ್ಡ ಮೆಚ್ಚುಗೆ ಸಿಕ್ಕಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಅವರನ್ನು ಅಲ್ಲಿ ಹಿಂಬಾಲಿಸುವವರ ಸಂಖ್ಯೆ ಸಹಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಂಜನಾ ಅವರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸಿನಿಮಾಗಳಿಂದಲೂ ಅವರಿಗೆ ಬೇಡಿಕೆ ಬರುತ್ತಿದ್ದು, ಈಗಾಗಲೇ ಅವರು ಒಂದು ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಸಹಾ ಕೆಲವು ಕಡೆಗಳಲ್ಲಿ ಸುದ್ದಿಯಾಗಿದೆ. ಹೊಸ ಹೊಸ ಫೋಟೋ ಶೂಟ್ ಗಳ ಮೂಲಕ ಸಂಜನಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇತ್ತೀಚಿಗೆ ಸಂಜನಾ ಬುರ್ಲಿ ಅವರು ಬಂಗಾಳಿ ಹೆಣ್ಣಿನ ರೀತಿಯಲ್ಲಿ, ಬಂಗಾಳಿ ಸ್ಟೈಲ್ ನಲ್ಲಿ ಉಡುಗೆ, ಆಭರಣಗಳನ್ನು ತೊಟ್ಟು ಹೊಸ ಫೋಟೋ ಶೂಟ್ ಒಂದನ್ನು ಮಾಡಿಸಿದ್ದಾರೆ. ಈ ಹೊಸ ಫೋಟೋ ಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಕೆಂಪು ಅಂಚಿರುವ ಸೀರೆಯುಟ್ಟು, ಅದಕ್ಕೆ ಹೊಂದುವಂತಹ ಸೂಕ್ತ ಆಭರಣಗಳನ್ನು ಧರಿಸಿ ಬಂಗಾಳಿ ಹೆಣ್ಣಿನಂತೆ ಮಿಂಚಿದ್ದಾರೆ ಸಂಜನಾ ಬುರ್ಲಿ. ಅವರ ಈ ಹೊಸ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

Leave a Reply

Your email address will not be published.