ಹೊಸ ರಿಯಾಲಿಟಿ ಶೋ ಗೆ ಜಡ್ಜ್ ಆಗಲಿದ್ದಾರೆ ನಟ ವಿಜಯ್ ರಾಘವೇಂದ್ರ: ಯಾವುದು ಈ ಹೊಸ ಶೋ??

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟರಲ್ಲಿ ಒಬ್ಬರು ನಟ ವಿಜಯ ರಾಘವೇಂದ್ರ ಅವರು. ನಟ ವಿಜಯ ರಾಘವೇಂದ್ರ ಅವರು ಕನ್ನಡ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೇ ಕಿರುತೆರೆಯ ಕೆಲವು ಜನಪ್ರಿಯ ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿಯೂ ಬಹಳ‌ ಜನರಿಂದ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಇದೇ ನಟ ಶೀಘ್ರದಲ್ಲೇ ಒಂದು ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗಾದರೆ ಯಾವುದು ಆ ಹೊಸ ಶೋ ?? ಎನ್ನುವ ವಿಶೇಷವಾದ ಮಾಹಿತಿ ಇಲ್ಲಿದೆ.‌

ವಿಜಯ್ ರಾಘವೇಂದ್ರ ಅವರು ಈಗಾಗಲೇ ಡಾನ್ಸ್ ಕರ್ನಾಟಕ ಡಾನ್ಸ್ ಎನ್ನುವ ಜನಪ್ರಿಯ ಡಾನ್ಸ್ ಶೋ‌ ಗೆ ಜಡ್ಜ್ ಆಗಿದ್ದ ವಿಷಯ ಎಲ್ಲರಿಗೂ ತಿಳಿದೇ ಇದೆ. ಕನ್ನಡದ ಒಂದು ಲೀಡಿಂಗ್ ಚಾನೆಲ್ ನಲ್ಲಿ ಪ್ರಸಾರವಾಗುವ ಡಾನ್ಸ್ ಕರ್ನಾಟಕ ಡಾನ್ಸ್ ಕೆಲವೇ ದಿನಗಳ ಹಿಂದೆ ಮುಗಿದಿದೆ. ಈಗ ವಿಜಯ್ ರಾಘವೇಂದ್ರ ಅವರು ಶೀಘ್ರದಲ್ಲೇ ಪ್ರಸಾರ ಆರಂಭವಾಗಲಿರುವ ಮತ್ತೊಂದು ಡಾನ್ಸ್ ರಿಯಾಲಿಟಿ ಶೋ ಗೆ ಜಡ್ಜ್ ಆಗಲಿದ್ದಾರೆ ಎನ್ನುವ ಸುದ್ದಿಯೊಂದು ಹೊರ ಬಂದಿದೆ.

ಹೌದು, ಕನ್ನಡದ ಒಂದು ಜನಪ್ರಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿರುವ, ಡಾನ್ಸ್ ಚಾಂಪಿಯನ್ ಹೆಸರಿ‌ನ ಡಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಲಿದ್ದಾರೆ ಎನ್ನಲಾಗಿದ್ದು, ಈ ಶೋ ನಿರೂಪಣೆಯನ್ನು ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಅವರು ಮಾಡಲಿದ್ದಾರೆ ಎನ್ನಲಾಗಿದೆ. ಇದು ವಾರಾಂತ್ಯದಲ್ಲಿ ಪ್ರಸಾರವನ್ನು ಕಾಣಲಿದೆ ಎಂದು ಹೇಳಲಾಗಿದೆ. ಇನ್ನು ಸಿನಿಮಾ‌ ವಿಚಾರದಲ್ಲಿ ವಿಜಯ್ ರಾಘವೇಂದ್ರ ಅವರು ಹೊಸ ಸಿನಿಮಾ ಒಂದು ಒಪ್ಪಿಕೊಂಡಿದ್ದು, ಪೋಲಿಸ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

Leave a Comment