ಹೊಸ ಬಾಯ್ ಫ್ರೆಂಡ್ ಸಿಕ್ಕಿದ ಕೂಡಲೇ ಹಿಜಾಬ್ ಧರಿಸಿ, ರಾಖಿ ಹೇಳಿದ ಮಾತಿಗೆ ದಂಗಾದ ನೆಟ್ಟಿಗರು!!

Entertainment Featured-Articles Movies News Viral Video

ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಇದ್ದ ಕಡೆ ಸುದ್ದಿಗಳಿಗೆ ಕೊರತೆ ಖಂಡಿತ ಇರುವುದಿಲ್ಲ. ರಾಖಿ ಎಂತಹ ನಟಿ ಎನ್ನುವ ವಿಚಾರಕ್ಕೆ ಬಂದರೆ, ಈ ನಟಿಯು ತಮ್ಮ ಜೀವನದ ಬಹುತೇಕ ಎಲ್ಲಾ ವಿಚಾರಗಳನ್ನು ಸಹಾ ತಮ್ಮ ಅಭಿಮಾನಿಗಳ ಜೊತೆಗೆ‌ ಹಂಚಿಕೊಳ್ಳುತ್ತಾರೆ. ಅದು ತಮ್ಮ‌ ಮದುವೆಯ ವಿಚಾರವೇ ಆಗಲೀ, ಬ್ರೇಕಪ್ ಆಗಲೀ ಅಥವಾ ಹೊಸ ಬಾಯ್ ಫ್ರೆಂಡ್ ಆಗಲೀ, ಅದು ಯಾವುದೇ ವಿಚಾರವೇ ಆದರೂ ಸರಿ ರಾಖಿ ಎಲ್ಲವನ್ನೂ ಸಹಾ ಬಹಿರಂಗ ಪಡಿಸುತ್ತಾರೆ.‌ ಇನ್ನು ಕೆಲವೇ ದಿನಗಳ ಹಿಂದೆ ರಾಖೀ ತಮ್ಮ‌ ಅಭಿಮಾನಿಗಳ ಮುಂದೆ ಒಂದು ಶಾಕಿಂಗ್ ವಿಚಾರವನ್ನು ಹಂಚಿಕೊಂಡಿದ್ದರು.

ಹೌದು ರಾಖಿ ತಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯೊಬ್ಬರ ಆಗಮನವಾಗಿದೆ, ತನ್ನನ್ನು ಕೇರ್ ಮಾಡುವ ವ್ಯಕ್ತಿಯೊಬ್ಬರು ಜೀವನದೊಳಗೆ ಬಂದಾಗಿದೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದರು. ನಂತರ ತನ್ನ ಹೊಸ ಬಾಯ್ ಫ್ರೆಂಡ್ ಅನ್ನು ಎಲ್ಲರಿಗೂ ಪರಿಚಯ ಸಹಾ ಮಾಡಿಕೊಟ್ಟರು ರಾಖಿ. ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ರಾಖಿ ಕೆಲವು ದಿನಗಳ ಹಿಂದೆ ಒಂದು ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋದಲ್ಲಿ ರಾಖಿ ಬಿಳಿಯ ಬಣ್ಣದ ಹಿಜಬ್ ನಿಂದ ತಮ್ಮ ಮುಖವನ್ನು ಕವರ್ ಮಾಡಿಕೊಂಡಿದ್ದಾರೆ.

ರಾಖಿಯ ಈ ವೀಡಿಯೋ ನೋಡಿದ ಜನರು ತರಹೇವಾರಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇನ್ನು ವೀಡಿಯೋದಲ್ಲಿ ರಾಖಿ ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಹೇಳುತ್ತಿದ್ದಾರೆ ಮತ್ತು ಜಗತ್ತನ್ನು ಉಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ರಾಖಿ ಸದ್ಯಕ್ಕಂತೂ ತಮ್ಮ ಹೊಸ ಬಾಯ್ ಫ್ರೆಂಡ್ ಆದಿಲ್ ಖಾನ್ ಅವರ ವಿಚಾರವಾಗಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇದೇ ವಿಚಾರವಾಗಿ ಒಂದಲ್ಲಾ ಒಂದು ಸುದ್ದಿಗಳು ಮಾದ್ಯಮಗಳಲ್ಲಿ ಹರಿದಾಡುತ್ತಲೇ ಇದೆ. ಕಳೆದ ವರ್ಷವಷ್ಟೇ ರಾಖಿ ತಮ್ಮ ಪತಿ ರಿತೇಶ್ ರನ್ನು ಪರಿಚಯ ಮಾಡಿಕೊಟ್ಟಿದ್ದರು.

ಆದರೆ ದುರಾದೃಷ್ಟವಶಾತ್ ಈ ವರ್ಷದ ವೇಳೆಗೆ ರಾಖಿ ಪತಿಯಿಂದ ದೂರವಾಗಿದ್ದಾರೆ. ಆದರೆ ಬಹಳ ಬೇಗ ಅವರಿಗೆ ಹೊಸ ಬಾಯ್ ಫ್ರೆಂಡ್ ಕೂಡಾ ಸಿಕ್ಕಾಗಿದೆ. ಪತಿಯಿಂದ ದೂರಾಗಿ ಡಿಪ್ರೆಶನ್ ನಲ್ಲಿ ಇದ್ದ ರಾಖೀ ಅದರಿಂದ ಹೊರ ಬರಲು ನೆರವಾಗಿದ್ದು ಆದಿಲ್ ಖಾನ್ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರ ಮನೆಯವರಿಗೆ ರಾಖಿ ಹಾಗೂ ಆದಿಲ್ ನಡುವಿನ ಸಂಬಂಧ ಇಷ್ಟ ವಿಲ್ಲ ಎನ್ನಲಾಗಿದೆ. ರಾಖಿ ಧರಿಸುವ ಡ್ರೆಸ್ ಗಳು ಆದಿಲ್ ಅವರ ಪರಿವಾರದವರಿಗೆ ಇಷ್ಟವಿಲ್ಲ ಎಂದು ರಾಖಿ ಹೇಳಿದ್ದಾರೆ.

Leave a Reply

Your email address will not be published.