ಹೊಸ ಫೋಟೋ ಶೂಟ್ ಮೂಲಕ ಕಿಚ್ಚು ಹಚ್ಚಿದ ನಟಿ ವೈಷ್ಣವಿ ಗೌಡ: ಹರಿದು ಬರ್ತಿದೆ ಮೆಚ್ಚುಗೆಯ ಪ್ರವಾಹ

Entertainment Featured-Articles Movies News

ನಟಿ ಮತ್ತು ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯೂ, ಫೈನಲಿಸ್ಟ್ ಸಹಾ ಆಗಿದ್ದ ವೈಷ್ಣವಿ ಗೌಡ ಅವರು ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಖಂಡಿತ ಅಪರಿಚಿತ ಮುಖವಲ್ಲ. ಕಿರುತೆರೆಯ ಮೂಲಕವೇ ಸಿನಿಮಾ ನಟಿಯರಷ್ಟು ಜನಪ್ರಿಯತೆ ತಮ್ಮದಾಗಿಸಿಕೊಂಡಿರುವ ಕೆಲವೇ ನಟಿಯರಲ್ಲಿ ವೈಷ್ಣವ ಗೌಡ ಅವರು ಸಹಾ ಒಬ್ಬರಾಗಿದ್ದಾರೆ. ತನ್ನ ಅದ್ಭುತವಾದ ನಟನೆಯ ಕೌಶಲ್ಯದಿಂದಾಗಿ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ ವೈಷ್ಣವಿ ಗೌಡ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿಯನ್ನು ಹಿಂಬಾಲಿಸುವ ಅಭಿಮಾನಿಗಳ ಸಂಖ್ಯೆ ಸಹಾ ದೊಡ್ಡದಾಗಿದೆ‌.

ಇತ್ತೀಚಿಗೆ ನಟಿ ವೈಷ್ಣವಿ ಗೌಡ ಅವರು ಒಂದು ಹೊಸ ಫೋಟೋ ಶೂಟ್ ಮಾಡಿಸಿದ್ದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಈ ಹೊಸ ಫೋಟೋ ಶೂಟ್ ನ ಫೋಟೋಗಳು ಬಹಳ ಅದ್ಬುತವಾಗಿದ್ದು, ಅಭಿಮಾನಿಗಳ ಮನಸ್ಸಿಗೆ ಮುದವನ್ನು ನೀಡುತ್ತಿವೆ. ನಟಿಯು ಧರಿಸಿರುವ ವಿನೂತನ ವಿನ್ಯಾಸದ ಡ್ರೆಸ್ ಅವರ ಅಂದಕ್ಕೆ ಇನ್ನಷ್ಟು ಮೆರುಗನ್ನು ನೀಡಿದೆ. ಒಂದು ಸುಂದರವಾದ ಕನಸಿನಂತೆ ಕಂಡಿರುವ ವೈಷ್ಣವಿ ಗೌಡ ಅವರು ತೊಟ್ಟ ಡ್ರೆಸ್ ಮೇಲೆ ಇರುವ ಹೂವಿನ ಎಂಬ್ರಾಯ್ಡರಿ ಬಜಳ ಆಕರ್ಷಕವಾಗಿದೆ.

ತನ್ನ ಈ ಅದ್ಭುತವಾದ ಡ್ರೆಸ್ ಗೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುವಂತಹ ಮೇಕಪ್ ಮತ್ತು ಒಡವೆಗಳಿಂದ ವೈಷ್ಣವಿ ಗೌಡ ಅವರು ಮಿಂಚಿದ್ದಾರೆ. ನಟಿಯು ಶೇರ್ ಮಾಡಿಕೊಂಡ ಹೊಸ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಮೆಚ್ಚುಗೆಯ ಮಳೆಯನ್ನೇ ಹರಿಸುತ್ತಿದ್ದಾರೆ. ಅನೇಕರು ಕಾಮೆಂಟ್ ಗಳನ್ನು ಮಾಡುತ್ತಾ ನಟಿಯ ಅಂದವನ್ನು ಹಾಡಿ ಹೊಗಳುತ್ತಿದ್ದಾರೆ. ವೃತ್ತಿಯ ಬಗ್ಗೆ ಹೇಳುವುದಾದರೆ ವೈಷ್ಣವಿ ಗೌಡ ಅವರು ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಸಂಸ್ಕಾರವಂತ ಹೆಣ್ಣು ಸನ್ನಿಧಿ ಪಾತ್ರದ ಮೂಲಕ ಮನೆ ಮನೆ ಮಾತಾದ ನಟಿ.

ಬರೋಬ್ಬರಿ ಆರು ವರ್ಷಗಳ ಕಾಲ ನಟಿಯು ಸನ್ನಿಧಿ ಪಾತ್ರದಲ್ಲಿ ಕಾಣಿಸಿಕೊಂಡು, ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದು, ಅವರಿಂದ ಅಪಾರವಾದ ಅಭಿಮಾನ ತನ್ನದಾಗಿಸಿಕೊಂಡಿದ್ದಾರೆ. ಅಗ್ನಿ ಸಾಕ್ಷಿ ನಂತರ ನಟಿಯು ಬಿಗ್ ಬಾಸ್ ನ ಎಂಟನೇ ಸೀಸನ್ ನಲ್ಲಿ ಸೆಲೆಬ್ರಿಟಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿ, ಫೈನಲ್ ವರೆಗೂ ತಲುಪಿದ್ದರು. ಬಿಗ್ ಬಾಸ್ ನಂತರ ಅವರ ಅಭಿಮಾನಿಗಳು ನಟಿಯು ಯಾವಾಗ ಹೊಸ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ.

Leave a Reply

Your email address will not be published.