ಹೊಸ ಡೈಲಾಗ್ ಮೂಲಕ ಹಳೇ ಹೆಂಡ್ತೀನಾ ಟಾರ್ಗೆಟ್ ಮಾಡಿದ್ರಾ ನಾಗಚೈತನ್ಯ??

Entertainment Featured-Articles Movies News

ಟಾಲಿವುಡ್ ನ ಯುವ ಸ್ಟಾರ್ ನಟ ನಾಗಚೈತನ್ಯ ಹೊಸ ಹೊಸ ಸಿನಿಮಾ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿ ಒಂದು ಅವರು ಪ್ರಸ್ತುತ ತೊಡಗಿಕೊಂಡಿರುವ ಸಿನಿಮಾ ‘ಥ್ಯಾಂಕ್ಯು’. ಈ ಸಿನಿಮಾವನ್ನು ಅಕ್ಕಿನೇನಿ ಕುಟುಂಬಕ್ಕೆ ಮನಂ ನಂತಹ ಒಂದು ಅದ್ಭುತ ಸಿನಿಮಾವನ್ನು ನೀಡಿದ ನಿರ್ದೇಶಕ ವಿಕ್ರಮ್ ಕುಮಾರ್ ಅವರು ನಿರ್ದೇಶನ ಮಾಡುತ್ತಿರುವುದರಿಂದ, ಸಹಜವಾಗಿಯೇ ಅಭಿಮಾನಿಗಳಲ್ಲಿ ಹಾಗೂ ಸಿನಿ ಪ್ರೇಮಿಗಳಲ್ಲಿ ಒಂದು ಕುತೂಹಲ ಮೂಡಿದೆ. ಇನ್ನು ಥ್ಯಾಂಕ್ಯು ಸಿನಿಮಾ ಮೇಕರ್ಸ್ ತಮ್ಮ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ.

ಟೀಸರ್ ನಲ್ಲಿ ನಾಗಚೈತನ್ಯ ಸೊಕ್ಕಿನ ವ್ಯಕ್ತಿಯಾಗಿ, ಸದಾ ತನ್ನ ಬಗ್ಗೆ ತಾನು ಯೋಚಿಸುವ ವ್ಯಕ್ತಿಯಂತೆ ತಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಟೀಸರ್ ನಲ್ಲಿ ನಾಯಕ ನಾಗಚೈತನ್ಯ ಹೇಳಿರುವ ಒಂದು ಡೈಲಾಗ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ನಾಗಚೈತನ್ಯ ಮತ್ತು ಸಮಂತಾ ವಿಚ್ಚೇದನದ ನಂತರ ಅವರ ಅಭಿಮಾನಿಗಳು ಪರಸ್ಪರ ಒಬ್ಬರು ಮತ್ತೊಬ್ಬರ ಕಾಲೆಳೆಯುವ ಯಾವುದೇ ಸಣ್ಣ ಅವಕಾಶವನ್ನು ಕೂಡಾ ಬಿಟ್ಟು ಕೊಡಲು ಸಿದ್ಧರಿಲ್ಲ. ಅದೇ ಹಿನ್ನೆಲೆಯಲ್ಲಿ ಈಗ ನಾಗಚೈತನ್ಯ ಅಭಿಮಾನಿಗಳಿಗೆ ಹೊಸ ಚಾನ್ಸ್ ಸಿಕ್ಕಿದೆ.

ಹೌದು, ಥ್ಯಾಂಕ್ಯೂ ಸಿನಿಮಾದ ಟೀಸರ್ ನಲ್ಲಿ ನಾಗಚೈತನ್ಯ ಅವರು “ಲೈಫ್ ನಲ್ಲಿ ಕಾಂಪ್ರಮೈಸ್ ಆಗೋದೇ ಇಲ್ಲ, ಅದೆಷ್ಟೋ ಬಿಟ್ಟುಕೊಟ್ಟು ಅಥವಾ ತೊರೆದು ಇಲ್ಲಿಯವರೆಗೆ ಬಂದಿದ್ದೇನೆ”( ಲೈಫ್ ಲೋ ಕಾಂಪ್ರಮೈಸ್ ಅಯ್ಯೇದೇ ಲೇದು, ಎನ್ನೋ ವದಲುಕುನಿ ಇಕ್ಕಡಿದಾಕ ವಚ್ಚಾನು ) ಎನ್ನುವ ಒಂದು ಪವರ್ ಫುಲ್ ಡೈಲಾಗ್ ಹೇಳಿದ್ದಾರೆ. ಈಗ ಈ ಡೈಲಾಗ್ ನಾಗಚೈತನ್ಯ ಅವರ ಅಭಿಮಾನಿಗಳಿಗೆ ಒಂದು ಅಸ್ತ್ರವಾಗಿ ಸಿಕ್ಕಿದ್ದು, ಸಮಂತಾ ಕಾಲೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ‌

ನಾಗಚೈತನ್ಯ ಅವರ ಕಟ್ಟಾ ಅಭಿಮಾನಿಗಳು ಈಗ ನಾಗಚೈತನ್ಯ ಅವರ ಹೊಸ ಡೈಲಾಗ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಆಗಿದ್ದಾರೆ. ನಾಗಚೈತನ್ಯ ಅಭಿಮಾನಿಗಳು ಈ ಡೈಲಾಗ್ ಸಮಂತಾಗೆ ನೇರವಾಗಿ ಕೆನ್ನೆಗೆ ಹೊಡೆದ ಹಾಗೆ ಇದೆ ಎಂದಿದ್ದಾರೆ. ನಾಗಚೈತನ್ಯ ಅವರನ್ನು ಗೊಂದಲದಿಂದ ತೊರೆದು ದೂರವಾದ ಸಮಂತಾಗೆ ಈ ಡೈಲಾಗ್ ನಿಂದ ಸಖತ್ ತಿರುಗೇಟು ಸಿಕ್ಕಿದೆ ಎಂದು ಖುಷಿ ಪಟ್ಟಿದ್ದಾರೆ. ಮತ್ತೊಮ್ಮೆ ಅಭಿಮಾನಿಗಳು ತಮ್ಮ ಲಾಜಿಕ್ ಬೇಕಾಗಿಲ್ಲ, ವಿಷಯಗಳನ್ನು ತಮ್ಮ ದೃಷ್ಟಿಕೋನದಿಂದಲೇ ನೋಡುವರು ಎಂದು ಮತ್ತೊಮ್ಮೆ ಸಾಬೀತಾಗಿದೆ.

Leave a Reply

Your email address will not be published.