ಹೊಸ ಕಾರು ಕೊಂಡ ಖುಷಿ ಯಲ್ಲಿ ಬಿಗ್ ಬಾಸ್ ಖ್ಯಾತಿಯ ಬೆಡಗಿ, ಟಿಕ್ ಟಾಕ್ ಸುಂದರಿ ಧನುಶ್ರೀ

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನಲ್ಲಿ ಇತ್ತೀಚಿಗೆ ಸೆಲೆಬ್ರಿಟಿಗಳು ಒಬ್ಬರ ನಂತರ ಮತ್ತೊಬ್ಬರು ದುಬಾರಿ ಬೆಲೆಯ ಐಶಾರಾಮೀ ಕಾರುಗಳನ್ನು ಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಹೌದು ವರ ಮಹಾ ಲಕ್ಷ್ಮಿ ಹಬ್ಬದ ದಿನ ಸಿಂಪಲ್ ಸ್ಟಾರ್ ರಕ್ಷಿತ್ ಅವರು ಹೊಸ ಕಾರನ್ನು ಖರೀದಿ ಮಾಡಿದ್ದರು. ಇನ್ನು ಮೊನ್ನೆ ಮೊನ್ನೆಯಷ್ಟೇ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಯಲ್ಲಿ ನಾಯಕಿಯಾಗಿ ಅನು ಸಿರಿಮನೆ ಪಾತ್ರದ ಮೂಲಕ ಜನರ ಮನ್ನಣೆ ಪಡೆದುಕೊಂಡು, ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿ ಯಾಗಿ ನಟಿಸಿರುವ ಮೇಘಾ ಶೆಟ್ಟಿ ಅವರು ಒಂದೇ ಸಮಯದಲ್ಲಿ ಎರಡು ದುಬಾರಿ ಕಾರುಗಳನ್ನು ಖರೀದಿ ಮಾಡಿ, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಖುಷಿಯನ್ನು ಹಂಚಿಕೊಂಡಿದ್ದರು.

ಅದಾದ ಬೆನ್ನಲ್ಲೇ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ಸೀಸನ್ ಏಳರ ವಿನ್ನರ್ ಆದ ಶೈನ್ ಶೆಟ್ಟಿಯವರು ಹೊಸ ಐಶಾರಾಮೀ ಕಾರನ್ನು ಕೊಂಡು, ಶೋ ರೂಂ ನಲ್ಲಿ ತಾಯಿ ಮತ್ತು ತಮ್ಮನ ಜೊತೆಗೆ ಕಾರಿನ ಬಳಿ ನಿಂತಿರುವ ಫೋಟೋ ಶೇರ್ ಮಾಡಿಕೊಂಡು ಖುಷಿಯನ್ನು ಸಂಭ್ರಮಿಸದ್ದರು. ಅನಂತರ ಸ್ಯಾಂಡಲ್ವುಡ್ ನ ಜನಪ್ರಿಯ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ಸಹಾ ಒಂದು ಹೊಸ ಕಾರನ್ನು ಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಈಗ ಇವರೆಲ್ಲರ ನಂತರ ಮತ್ತೊಬ್ಬರು ಹೊಸ ಕಾರನ್ನು ಖರೀದಿ ಮಾಡಿ ಸುದ್ದಿಯಾಗಿದ್ದಾರೆ.

ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಇದೀಗ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಟಿಕ್ ಟಾಕ್ ನಲ್ಲಿ ಲಕ್ಷ ಗಟ್ಟಲೆ ಫಾಲೋಯರ್ಸ್ ಪಡೆದಿದ್ದ ಧನುಶ್ರೀ ಅವರು ಬಿಗ್ ಬಾಸ್ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆದರಾದರೂ, ಮೊದಲನೇ ವಾರವೇ ಅವರು ಎಲಿಮಿನೇಷನ್ ಎದುರಿಸಿ ಮನೆಯಿಂದ ಹೊರ ಬಂದರು. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಧನುಶ್ರೀ ಸಿನಿಮಾಗಳಲ್ಲಿ ಸಹಾ ಅವಕಾಶವನ್ನು ಪಡೆದುಕೊಂಡಿದ್ದು ಅದೇ ಖುಷಿ ಯಲ್ಲಿದ್ದ ಅವರು ಇದೀಗ ಹೊಸ ಕಾರು ಕೊಂಡ ಖುಷಿಯನ್ನು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಕಾರು ಕೊಂಡ ಖುಷಿಯ ಕ್ಷಣಗಳ ಪೋಟೋ ಹಂಚಿಕೊಂಡಿರುವ ಧನುಶ್ರೀ ಅವರು, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನುತ್ತಾ, ಇದು ಮೊದಲ ಹೆಜ್ಜೆ. ಇದೆಲ್ಲಾ ಸುಲಭದ ಕೆಲಸ ಎಂದು ಜನರು ಮಾತನಾಡಬಹುದು, ಆದರೆ ಯಾವುದೇ ಕೆಲಸವಾಗಲಿ, ಅದಕ್ಕೆ ಅದರದ್ದೇ ಆದ ಸವಾಲುಗಳು ಇರುತ್ತವೆ. ನಾನು ಪಟ್ಟಿರುವ ಕಷ್ಟ, ಹೂಡಿದ ಪರಿಶ್ರಮಕ್ಕೆ ನನಗೆ ನಾನೇ ಧನ್ಯವಾದಗಳನ್ನು ಹೇಳಿಕೊಳ್ಳುತ್ತೇನೆ. ನನಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು’’ ಎಂದು ಬರೆದುಕೊಂಡು ಖುಷಿಯನ್ನು ಹಂಚಿಕೊಂಡಿದ್ದಾರೆ.

Leave a Comment