ಹೊಸದೊಂದು ಮೈಲಿಗಲ್ಲು ತಲುಪಿದ ಕನ್ನಡತಿ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್: ಅಭಿಮಾನಿಗಳು ಫುಲ್ ಖುಷಿ

Entertainment Featured-Articles News

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ ಕನ್ನಡತಿ ಧಾರಾವಾಹಿ. ಕನ್ನಡತಿ ಧಾರಾವಾಹಿಯು ತನ್ನ ಹೆಸರಿನಿಂದಲೇ ಜನರ ಗಮನವನ್ನು ಸೆಳೆಯುತ್ತದೆ. ಅದು ಮಾತ್ರವೇ ಅಲ್ಲದೇ ಈ ಧಾರಾವಾಹಿಯ ಕಥೆ, ಪಾತ್ರಗಳು, ಸನ್ನಿವೇಶಗಳು ಅಪಾರ ಜನರ ಮನಸ್ಸನ್ನು ಗೆದ್ದಿದ್ದು, ಈ ಧಾರಾವಾಹಿಯು ದೊಡ್ಡ ಸಂಖ್ಯೆಯ ಕಿರುತೆರೆಯ ಪ್ರೇಕ್ಷಕರ ಬಹಳ ಪ್ರಿಯವಾದ ಧಾರಾವಾಹಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ಧಾರಾವಾಹಿಯ ನಾಯಕ ಹರ್ಷ ನ ಪಾತ್ರದ ಮೂಲಕ ಮನೆ ಮನೆ ಮಾತಾಗಿರುವ ನಟ ಕಿರಣ್ ರಾಜ್ ಅವರು.

ಕನ್ನಡತಿ ಧಾರಾವಾಹಿಯ ತನ್ನ ಪಾತ್ರದ ಮೂಲಕ ನಟ ಕಿರಣ್ ರಾಜ್ ಅವರ ಅಭಿಮಾನ ಬಳಗ ದೊಡ್ಡದಾಗಿದೆ. ಅಲ್ಲದೇ ಕಿರಣ್ ರಾಜ್ ಅವರು ಆಗಾಗ ಮಾಡುವ ಸಮಾಜ ಮುಖಿ ಕೆಲಸಗಳಿಂದಾಗಿ ಸಹಾ ಅವರನ್ನು ಅಭಿಮಾನಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಕ್ರಿಯವಾಗಿರುವ ಈ ನಟ, ಸ್ಯಾಂಡಲ್ವುಡ್ ಗೂ ಸಹಾ ಎಂಟ್ರಿ ನೀಡಿಯಾಗಿದೆ. ಅವರು ನಟಿಸಿರುವ ಸಿನಿಮಾ ವಿಷಯಗಳು ಈಗಾಗಲೇ ಸುದ್ದಿಗಳಾಗಿದೆ.

ಹೀಗೆ ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟ ಕಿರಣ್ ರಾಜ್ ಅವರು ಇದೀಗ ಸೋಶಿಯಲ್ ಮೀಡಿಯಾಗಳ ದಿಗ್ಗಜ ಎನಿಸಿರುವ ವೇದಿಕೆಯಾದ ಇನ್ಸ್ಟಾಗ್ರಾಂ ನಲ್ಲಿ ಹೊಸದೊಂದು ಮೈಲಿಗಲ್ಲನ್ನು ಸಾಧಿಸಿದ್ದಾರೆ. ಹೌದು, ನಟ ಕಿರಣ್ ರಾಜ್ ಅವರ ಇನ್ಸ್ಟಾಗ್ರಾಂ ನಲ್ಲಿ ಅವರ ಹಿಂಬಾಲಕರ ಸಂಖ್ಯೆ ಈಗ 1 ಮಿಲಿಯನ್ ದಾಟುವ ಮೂಲಕ ನಟ ಕಿರಣ್ ರಾಜ್ ಅವರ ಜನಪ್ರಿಯತೆ ಹೆಚ್ಚುತ್ತಿದೆ ಎನ್ನುವುದನ್ನು ಸಾಬೀತು ಮಾಡಿದೆ.

ಇನ್ಸ್ಟಾಗ್ರಾಂ ನಲ್ಲಿ ತಮ್ಮ ಹಿಂಬಾಲಕರ ಸಂಖ್ಯೆ ಒಂದು ಮಿಲಿಯನ್ ತಲುಪಿದ ಖುಷಿಯಲ್ಲಿ ನಟ ಕಿರಣ್ ರಾಜ್ ಅವರು ಒಂದು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಹಂಚಿಕೊಂಡು ಅವರು ತಮ್ಮ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಕಿರಣ್ ರಾಜ್ ಅವರ ಈ ಖುಷಿಯನ್ನು ಕಂಡು ಅವರ ಅಭಿಮಾನಿಗಳು ಸಹಾ ಖುಷಿ ಪಟ್ಟಿದ್ದು, ನಟನ ಪೋಸ್ಟ್ ಗೆ ಅಭಿಮಾನಿಗಳು ಸಹಾ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

Leave a Reply

Your email address will not be published.