ಹೊರಬಿತ್ತು ಹೊಸ TRP: ಬದಲಾಯ್ತು ಸೀರಿಯಲ್ ಗಳ ಸ್ಥಾನ!! ತಲೆಕೆಳಗಾಯ್ತು ಊಹೆಗಳು!!

0 3

ಕನ್ನಡ ಕಿರುತೆರೆ ಎಂದರೆ ಅಲ್ಲಿ ಸೀರಿಯಲ್ ಗಳದ್ದೇ ಸಿಂಹಪಾಲು, ಇನ್ನು ಈಗ ಹೊಸ ವರ್ಷ, ಹೊಸ ವರ್ಷದ ಆರಂಭದಲ್ಲಿ ಯಾವ ಸೀರಿಯಲ್ ಯಾವ ಸ್ಥಾನವನ್ನು ಪಡೆದುಕೊಂಡು ಟಿ ಆರ್ ಪಿ ಯಲ್ಲಿ ಉತ್ತಮ ಗಳಿಕೆಯನ್ನು ಕಂಡು ಮುನ್ನುಗ್ಗಿದೆ ಎನ್ನುವುದನ್ನು ತಿಳಿಯುವ ಕುತೂಹಲ ಸಹಜವಾಗಿಯೇ ಕಿರುತೆರೆಯ ಪ್ರೇಕ್ಷಕರು ಹಾಗೂ ಸೀರಿಯಲ್ ಗಳ ಅಭಿಮಾನಿಗಳಲ್ಲಿ ಇದ್ದೇ ಇದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಸೀರಿಯಲ್ ಗಳು ಸಹಾ ಅದ್ದೂರಿತನದ ವಿಚಾರದಲ್ಲಿ ಪೈಪೋಟಿಗೆ ಬಿದ್ದ ಹಾಗೆ ನಿರ್ಮಾಣವಾಗುತ್ತಿವೆ.

ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಸಲುವಾಗಿ ಸೀರಿಯಲ್ ನಿರ್ಮಾಣ ಸಂಸ್ಥೆಗಳು ಸಹಾ ನಾನಾ ಕಸರತ್ತುಗಳನ್ನು ಮಾಡುತ್ತವೆ. ಟಾಪ್ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ಶ್ರಮಪಡುತ್ತವೆ. ಈ ಎಲ್ಲಾ ಪ್ರಯತ್ನಗಳ ಫಲ ಎಂಬಂತೆ ಟಿ ಆರ್ ಪಿ ಆಧಾರದಲ್ಲಿ ಸೀರಿಯಲ್ ಗಳ ಸ್ಥಾನ ಯಾವುದು ಎಂದು ಅನೌನ್ಸ್ ಆದಾಗ ಅವು ವೀಕ್ಷಕರ ಮನಸ್ಸನ್ನು ಎಷ್ಟರ ಮಟ್ಟಿಗೆ ಗೆದ್ದಿದೆ ಎನ್ನುವುದು ತಿಳಿಯುತ್ತದೆ. ಬನ್ನಿ ಹಾಗಾದ್ರೆ ಯಾವ ಸೀರಿಯಲ್ ಯಾವ ಸ್ಥಾನದಲ್ಲಿದೆ ತಿಳಿಯೋಣ.

ಕಿರುತೆರೆಗೆ ಹೊಸ ಎಂಟ್ರಿ ನೀಡಿರುವ ನಟಿ ಉಮಾಶ್ರೀ ಅವರು ಪ್ರಮುಖ ಪಾತ್ರದಲ್ಲಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ಆರಂಭವಾದ ಮೊದಲೇ ವಾರವೇ ನಂಬರ್ ಒನ್ ಸ್ಥಾನ ಪಡೆದುಕೊಂಡು, ಅದೇ ಓಟವನ್ನು ಮುಂದುವರೆಸಿದ್ದು, ಬೇರೆ ಸೀರಿಯಲ್ ಗೆ ಸ್ಥಾನ ಬಿಟ್ಟುಕೊಡದೇ ಮತ್ತೊಮ್ಮೆ ಮೇಲುಗೈ ಸಾಧಿಸಿ 12.4 ರೇಟಿಂಗ್ ಪಡೆದುಕೊಂಡು ಮೊದಲನೇ ಸ್ಥಾನದಲ್ಲಿ ಮಿಂಚಿದೆ. ಪುಟ್ಟಕ್ಕನ ಮಕ್ಕಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡಿ, ಮನೆ ಮನೆ ಮಾತಾಗಿದೆ.

ಎರಡನೇ ಸ್ಥಾನದಲ್ಲಿ 11.9 ಟಿವಿಆರ್ ಪಡೆದುಕೊಂಡು ಗಟ್ಟಿಮೇಳ ಮಿಂಚಿದೆ. ಹೊಸ ಹೊಸ ಟ್ವಿಸ್ಟ್ ಗಳ ಮೂಲಕ ಗಟ್ಟಿಮೇಳ ಪ್ರೇಕ್ಷಕರ ಮನಸ್ಸನ್ನು ಗೆದ್ದು ಮುಂದೆ ಸಾಗಿದೆ. ವೇದಾಂತ್ ಅಮೂಲ್ಯ ಜೋಡಿಯ ವಿವಾಹದ ಎಪಿಸೋಡ್ ಪ್ರಸಾರ ಆಗುವ ವೇಳೆಯಲ್ಲಿ ಸೀರಿಯಲ್ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ಸೀರಿಯಲ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ವೈದೇಹಿ ಆಗಮನ, ಸುಹಾಸಿನಿಯ ಹೊಸ ಹೊಸ ಕುತಂತ್ರದ ಆಲೋಚನೆಗಳು ಜನರ ಮನಸ್ಸನ್ನು ಗೆಲ್ಲುತ್ತಿದೆ.

ಎಜೆ ಲೀಲಾ ನಡುವಿನ ಕೋಳಿ ಜಗಳದೊಂದಿಗೆ ಜನರ ಮನಸ್ಸನ್ನು ಗೆದ್ದಿರುವ ಹಿಟ್ಲರ್ ಕಲ್ಯಾಣ್ ಸೀರಿಯಲ್ ಮೂರನೇ ಸ್ಥಾನದಲ್ಲಿ ಮಿಂಚುತ್ತಿದೆ. ಸದಾ ಲೀಲಾ ಳ ಎಡವಟ್ಟು ಕಂಡು ಬೇಸರ ಪಡುತ್ತಿದ್ದ ಎಜೆ ಮನಸ್ಸಲ್ಲಿ ಸಹಾ ಈಗ ಲೀಲಾ ಮೇಲೆ ಮೃದು ಭಾವನೆ ಮೂಡಿದೆ. ಲೀಲಾ ಕೂಡಾ ಎಜೆಯ ಒಳ್ಳೆಯ ಗುಣ ಕಂಡು ಗೌರವಿಸಲು ಆರಂಭಿಸಿದ್ದು ಇಬ್ಬರ ನಡುವೆ ಪ್ರೀತಿಯ ತಂಗಾಳಿ ಬೀಸಲು ಆರಂಭಿಸಿದೆ. ಆರಂಭದಿಂದಲೂ ಹಿಟ್ಲರ್ ಕಲ್ಯಾಣ್ ವಿಶೇಷವಾಗಿ ಮೂಡಿ ಬರುತ್ತಿದೆ.

ನಾಲ್ಕನೇ ಸ್ಥಾನದಲ್ಲಿ ಅನು ಆರ್ಯ ಜೋಡಿಯ ಜೊತೆ ಜೊತೆಯಲಿ ಸೀರಿಯಲ್ ಇದೆ. ಆರ್ಯನ ಇನ್ನೊಂದು ಮುಖದ ಅನಾವರಣ, ರಾಜನಂದಿನಿ ರಹಸ್ಯವು ಸದ್ಯದ ಕುತೂಹಲದ ಅಂಶಗಳಾಗಿದ್ದು , ಈ ಹೊಸ ತಿರುವುಗಳನ್ನು ಕಂಡು ಪ್ರೇಕ್ಷಕರು ಸಹಾ ಥ್ರಿಲ್ ಆಗಿದ್ದಾರೆ. ಆರಂಭದಲ್ಲಿ ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡು ಜೊತೆಜೊತೆಯಲಿ ಹೊಸ ದಾಖಲೆಯನ್ನು ಬರೆದಿತ್ತು. ಅನಂತರ ಒಂದೊಂದೇ ಸ್ಥಾನ ಕೆಳಗಿಳಿದು ನಾಲ್ಕನೇ ಸ್ಥಾನಕ್ಕೆ ಬಂದಿದೆ.

ಇನ್ನು ಐದನೇ ಸ್ಥಾನದಲ್ಲಿದೆ ಸತ್ಯ. ಹೋರಾಟದ ಜೀವನ ನಡೆಸುತ್ತಾ, ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೆ ಹೊತ್ತ ಸತ್ಯಳು, ಅಕ್ಕನಿಗಾಗಿ ತನ್ನ ಪ್ರೇಮವನ್ನು ತ್ಯಾಗ ಮಾಡಿ, ಅಕ್ಕನ ಮದುವೆಗಾಗಿ ಹಣ ಕೂಡಿಡಲು ನಾನಾ ಕೆಲಸಗಳನ್ನು ಮಾಡುತ್ತಿರುವ ಸತ್ಯ ನಾರಿ ಶಕ್ತಿಯ ಪ್ರತೀಕವಾಗಿದೆ. ಆರಂಭದಲ್ಲಿ ಸತ್ಯ ಸೀರಿಯಲ್ ಕೂಡಾ ನಂಬರ್ ಒನ್ ಸ್ಥಾನದಲ್ಲಿ ಇತ್ತು, ದಿನಗಳೆದಂತೆ ಐದನೇ ಸ್ಥಾನಕ್ಕೆ ಇಳಿದಿದೆ.

Leave A Reply

Your email address will not be published.