ಹೊರಬಿತ್ತು ಪ್ರಭಾಸ್ ಅಭಿನಯದ ರಾಧೇ ಶ್ಯಾಮ್ ಸಿನಿಮಾದ ಫಸ್ಟ್ ರಿವ್ಯೂ: ಹಾಡಿ ಹೊಗಳಿದ ಸಿನಿ ವಿಶ್ಲೇಷಕ

Entertainment Featured-Articles News

ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯ ನಟ ಪ್ರಭಾಸ್ ನಾಯಕನಾಗಿರುವ ಬಹು ನಿರೀಕ್ಷಿತ ಸಿನಿಮಾ ರಾಧೇ ಶ್ಯಾಮ್ ಮಾರ್ಚ್ 11 ರಂದು ತೆರೆಗೆ ಬರುತ್ತಿದೆ. ಸ್ಟಾರ್ ನಟಿ ಪೂಜಾ ಹೆಗ್ಡೆ ನಾಯಕಿಯಾಗಿರುವ ಈ ಸಿನಿಮಾ ಹಲವು ವಿಶೇಷತೆಗಳಿಂದ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳಿಗೆ ತೀವ್ರ ಕುತೂಹಲವನ್ನು ಕೆರಳಿಸಿತ್ತು. ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ಮುಂದೂಡಲ್ಪಡುತ್ತಲೇ ಇತ್ತು. ಈಗ ಎಲ್ಲಾ ಅಡೆ ತಡೆಗಳು ತೀರಿ ಸಿನಿಮಾ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದ್ದು, ಅಭಿಮಾನಿಗಳಿಗೆ ಇದೊಂದು ಹಬ್ಬದ ಸಂಭ್ರಮ ತಂದಿದೆ.

300 ಕೋಟಿ ರೂಪಾಯಿಯಳ ಭಾರೀ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ಬಾಲಿವುಡ್ ನ ಸೌಂದರ್ಯ ರಾಶಿ ನಟಿ ಭಾಗ್ಯಶ್ರೀ ದಶಕಗಳ ನಂತರ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಅಲ್ಲದೇ ಹಿರಿಯ ನಟ ಕೃಷ್ಣಂ ರಾಜು ಕೂಡಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲದೇ ಇನ್ನೂ ಹಲವು ಜನಪ್ರಿಯ ನಟ ನಟಿಯರ ದೊಡ್ಡ ತಾರಾಗಣ ಇರುವ ಸಿನಿಮಾ ಟೀಸರ್, ಟ್ರೈಲರ್ ದೊಡ್ಡ ಸದ್ದನ್ನು ಮಾಡಿದೆ.‌ ಇವೆಲ್ಲವುಗಳ ನಡುವೆಯೇ ಓವರ್ ಸೀಸ್ ಸೆನ್ಸಾರ್ ಬೋರ್ಡ್ ಸದಸ್ಯರಾದ,‌ಸಿನಿ ವಿಶ್ಲೇಷಕ ಉಮೈರ್ ಸಂಧು ಸಿನಿಮಾ ಬಗ್ಗೆ ಮೊದಲ ರಿವ್ಯೂ ನೀಡಿದ್ದಾರೆ.

ಪ್ರಭಾಸ್ ನಟಿಸಿರುವ ರಾಧೇ ಶ್ಯಾಮ್ ಸಿನಿಮಾ ನೋಡಿದೆ. ಸಿ‌ನಿಮಾದಲ್ಲಿ ವಿಶ್ಯುಯಲ್ ಎಫೆಕ್ಟ್ಸ್ ಅದ್ಭುತವಾಗಿದೆ. ಪ್ರಭಾಸ್ ಮತ್ತು ಪೂಜಾ ಕೆಮೆಸ್ಟ್ರಿ ದೇಹದಲ್ಲಿ ವಿದ್ಯುತ್ ಸಂಚಾರವಾಗುವಂತೆ ಮಾಡುತ್ತಿದೆ. ರಹಸ್ಯ ಹಾಗೇ ಮುಂದುವರೆಯುತ್ತದೆ. ಇದೊಂದು ವಿಶಿಷ್ಠವಾದ ಕಥಾನಕವಾಗಿದೆ. ಒಂದೇ ಮಾತಿನಲ್ಲಿ ಹೇಳೋದಾದರೆ ರಾಧೇ ಶ್ಯಾಮ್ ಕ್ಲಾಸಿಕ್, ಸ್ಟೈಲಿಶ್, ಥ್ರಿಲ್ಲಿಂಗ್, ಮಿಸ್ಟರಿ ಅಂಡ್ ಮೋಸ್ಟ್ ರೊಮ್ಯಾಂಟಿಕ್ ಸಿನಿಮಾ. ಪ್ರಭಾಸ್ ಅವರ ಕ್ಲಾಸ್ ಅಂಡ್ ಸ್ಟೈಲ್ ಅನ್ನು ಯಾರಿಂದಲೂ ಬೀಟ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಉಮೈರ್ ಸಂಧು ಈ ಹಿಂದೆ ಸಹಾ ಅನೇಕ ಸಿನಿಮಾಗಳಿಗೆ ರಿವ್ಯೂ ನೀಡಿದ್ದಾರೆ. ಅವರು ರಿವ್ಯೂ ನೀಡಿದ ಸಿನಿಮಾಗಳಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆದರೆ ಕೆಲವೊಂದು ಸಿನಿಮಾಗಳು ಮಾತ್ರ ವಿಫಲವಾಗಿದೆ ಎನ್ನುವುದು ಸಹಾ ವಾಸ್ತವ. ಈಗ ಅವರು ರಾಧೇ ಶ್ಯಾಮ್ ಸಿನಿಮಾಕ್ಕೆ ನೀಡಿರುವ ಮೊದಲ ರಿವ್ಯೂ ಎಲ್ಲರ ಗಮನವನ್ನು ಸೆಳೆಯುತ್ತಿದೆ. ರಾಧೇ ಶ್ಯಾಮ್ ಮಾರ್ಚ್ 11 ಕ್ಕೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದೆ.

Leave a Reply

Your email address will not be published.