ಫೇಸ್ ಬುಕ್ ಇನ್ನು ನೆನಪು ಮಾತ್ರ: ಇಷ್ಟು ವರ್ಷಗಳ ನಂತರ ಇಂತಹ ನಿರ್ಧಾರವೇಕೆ?
ಸಾಮಾಜಿಕ ಮಾದ್ಯಮಗಳ ದೈತ್ಯ ಎಂದರೆ ಅನುಮಾನವೇ ಇಲ್ಲದೇ ಅದು ಫೇಸ್ ಬುಕ್ ಎಂದು ಹೇಳಬಹುದು. ಫೇಸ್‌ಬುಕ್ ಇಲ್ಲದೇ ಜಗತ್ತನ್ನು ಊಹಿಸಿಕೊಳ್ಳುವುದು ಸಹಾ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಇಂದು ನೆಟ್ಟಿಗರು ಇದರ ಮೇಲೆ ಅವಲಂಬಿತರಾಗಿದ್ದಾರೆ. ಫೇಸ್ ಬುಕ್ ಹೆಸರು ವಿಶ್ವದಾದ್ಯಂತ ಜನಜನಿತವಾಗಿದೆ. ಇದೀಗ ಸೋಷಿಯಲ್ ಮೀಡಿಯಾಗಳ ಈ ದಿಗ್ಗಜ ಎನಿಸಿಕೊಂಡಿರುವ ಫೇಸ್ ಬುಕ್ ಇಂಕ್ ಮುಂದಿನ ವಾರ ಹೊಸ ಹೆಸರಿನೊಂದಿಗೆ ಕಂಪನಿಯನ್ನು ಮರು ಬ್ರಾಂಡ್ ಮಾಡಲು ಯೋಚಿಸುತ್ತಿದೆ ಎನ್ನುವ ಮಾಹಿತಿಯೊಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು, ಈ ವಿವರಗಳನ್ನು ಅಕ್ಟೋಬರ್ 19ರಂದು ವರ್ಜ್ ವರದಿ ಮಾಡಿದೆ ಎಂದು ಹೇಳಲಾಗಿದೆ.
ಫೇಸ್ಬುಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಮಾರ್ಕ್ ಜುಕರ್ಬರ್ಗ್ ಅಕ್ಟೋಬರ್ 28ರಂದು ನಡೆಯಲಿರುವ ಕಂಪನಿಯ ವಾರ್ಷಿಕ ಕಲೆಕ್ಟ್ ಕಾನ್ಫರೆನ್ಸ್ ನಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ. ಅಂದರೆ ಅವರು ಈ ಸಮಾವೇಶದಲ್ಲಿ ಹೆಸರು ಬದಲಾವಣೆಯ ಕುರಿತು ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದ್ದು, ಶೀಘ್ರದಲ್ಲೇ ಅದನ್ನು ಅನಾವರಣ ಕೂಡಾ ಮಾಡುವ ಸಾಧ್ಯತೆಗಳಿವೆ ಎಂದು ವರ್ಜ್ ವರದಿ ಮಾಡಿದೆ. ಈ ವಿಷಯ ಇದೀಗ ಒಂದು ರೀತಿಯಲ್ಲಿ ತೀವ್ರವಾದ ಕುತೂಹಲವನ್ನು ಹುಟ್ಟು ಹಾಕುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಮರುಬ್ರ್ಯಾಂಡ್ ಫೇಸ್‌ಬುಕ್ ನ ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್ ಅನ್ನು ಪೋಷಕ ಕಂಪೆನಿಯ ಅಡಿಯಲ್ಲಿರುವ ಅನೇಕ ಉತ್ಪನ್ನಗಳಲ್ಲಿ ಒಂದಾಗಿ ಇರಿಸುತ್ತದೆ. ಇದು ಇನ್ಸ್ಟಾಗ್ರಾಂ ವಾಟ್ಸಾಪ್, ಒಕುಲಸ್ ಹಾಗೂ ಇನ್ನೂ ಹೆಚ್ಚಿನವುಗಳಂತಹ ಗುಂಪುಗಳನ್ನು ಸಹಾ ಮೇಲ್ವಿಚಾರಣೆ ಮಾಡುತ್ತದೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.ಈ ವಿಚಾರವಾಗಿ ಪ್ರತಿಕ್ರಿಯೆಯ ಕೋರಿಕೆಗೆ ತಕ್ಷಣಕ್ಕೆ ಫೇಸ್ ಬುಕ್ ಯಾವುದೇ ರೀತಿಯ ಸ್ಪಂದನೆ ನೀಡಲಾಗಿಲ್ಲ ಎನ್ನಲಾಗಿದೆ. ಈ ವಿಷಯವನ್ನು ಮಾದ್ಯಮಗಳು ವರದಿ ಮಾಡಿದೆ.