ಹೊಂಬಾಳೆ ಫಿಲ್ಮ್ಸ್ ನಲ್ಲಿ ವಿಶ್ವಸುಂದರಿ: ಯಾವ ಸಿನಿಮಾಕ್ಕಾಗಿ ಮಾನುಷಿ ಚಿಲ್ಲರ್ ಭೇಟಿ??

Entertainment Featured-Articles Movies News

ವಿಜಯ ಕಿರಗಂದೂರು ಅವರ ಒಡೆತನದ ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಸಂಸ್ಥೆಗೆ ಪ್ರತ್ಯೇಕ ಪರಿಚಯ ಅಗತ್ಯವಿಲ್ಲ ಎನ್ನುವ ಮಟ್ಟಕ್ಕೆ ಬೆಳೆದು ನಿಂತಿದೆ. ಕೆಜಿಎಫ್ ಸಿನಿಮಾ ನಿರ್ಮಾಣದ ನಂತರ ಹೊಂಬಾಳೆ ಫಿಲ್ಮ್ಸ್ ಸಹಾ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದೆ. ಕೆಜಿಎಫ್-2 ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್ ಬ್ಯಾಕ್ ಟು ಬ್ಯಾಕ್ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಕನ್ನಡ ಮಾತ್ರವೇ ಅಲ್ಲದೇ ತೆಲುಗು, ತಮಿಳು, ಮಲೆಯಾಳಂ ಹೀಗೆ ದಕ್ಷಿಣದ ನಾಲ್ಕು ಭಾಷೆಗಳಲ್ಲಿಯೂ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ ಹೊಂಬಾಳೆ ಫಿಲ್ಮ್ಸ್.

ಹೊಂಬಾಳೆ ಫಿಲ್ಮ್ಸ್ ಸ್ಯಾಂಡಲ್ವುಡ್ ನಲ್ಲಿ ಈಗಾಗಲೇ ಮಾಸ್ಟರ್ ಪೀಸ್, ರಾಜಕುಮಾರ, ಕೆಜಿಎಫ್, ಯುವರತ್ನ ದಂತಹ ಅದ್ಭುತ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಅಲ್ಲದೇ ಇದೇ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣಗೊಂಡಿರುವ ಕಾಂತಾರಾ ಮತ್ತು ರಾಘವೇಂದ್ರ ಸ್ಟೋರ್ಸ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಇದಲ್ಲದೇ ಈ ನಿರ್ಮಾಣ ಸಂಸ್ಥೆಯ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ನಿರ್ಮಾಣ ಹಂತದಲ್ಲಿ ಇದೆ. ಇದಲ್ಲದೇ ಒಂದು ತಮಿಳು ಸಿನಿಮಾ ನಿರ್ಮಾಣ ಸಹಾ ನಡೆಯುತ್ತಿದೆ.

ಈಗ ಇವೆಲ್ಲವುಗಳ ನಡುವೆ ಹೊಂಬಾಳೆ ಫಿಲ್ಮ್ಸ್ ನ ಮಾಲೀಕರಾದ ವಿಜಯ್ ಕಿರಗಂದರೂ ಮತ್ತು ಮಾಜಿ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಅವರ ಭೇಟಿಯ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಕುತೂಹಲವನ್ನು ಕೆರಳಿಸಿದೆ. ಮಾನುಷಿ ಚಿಲ್ಲರ್ 2017 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಆಗಿದ್ದರು. ಅದೇ ವರ್ಷ ಅವರು ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಸಹಾ ಗೆದ್ದು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡರು.

ಮಾನುಷಿ ಚಿಲ್ಲರ್ ಇತ್ತೀಚಿಗಷ್ಟೇ ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಅಡಿಯಿರಿಸಿದ್ದಾರೆ. ಈಗ ಇವೆಲ್ಲವುಗಳ ನಡುವೆ ಮಾನುಷಿ ಚಿಲ್ಲರ್ ಹಾಗೂ ವಿಜಯ್ ಕಿರಗಂದೂರು ಅವರು ತಮ್ಮ ಕಛೇರಿಯಲ್ಲಿ ಭೇಟಿಯಾಗಿರುವ ಫೋಟೋ ಹಂಚಿಕೊಂಡಿದ್ದು, ಬಹುಶಃ ಮಾನುಷಿ ಚಿಲ್ಲರ್ ಹೊಂಬಾಳೆ ಫಿಲ್ಮ್ಸ್ ನ ಸಿನಿಮಾದಲ್ಲಿ ನಟಿಸಬಹುದೇ? ಹೊಂಬಾಳೆ ಫಿಲ್ಮ್ಸ್ ಬಾಲಿವುಡ್ ಸಿನಿಮಾ ನಿರ್ಮಾಣ ಮಾಡಲು ಹೊರಟಿದೆಯೇ? ಎನ್ನುವ ಕುತೂಹಲ ನಿರ್ಮಾಣವಾಗಿದೆ.

Leave a Reply

Your email address will not be published.