ಹೆಣ್ಣೆಂದು ಕೀಳಾಗಿ ಕಂಡಿದ್ರು, ನಟಿಯೆಂದು ಹಿಯಾಳಿಸಿದ್ರು: ನಾಗಿಣಿ ಖ್ಯಾತಿಯ ನಟಿ ನಮ್ರತಾ ನುಡಿದ ಕಹಿ ಸತ್ಯ

Entertainment Featured-Articles News

ಗ್ಲಾಮರ್ ಎನ್ನುವ ಬಣ್ಣದ ಲೋಕದಲ್ಲಿ , ರಂಗು ರಂಗಾಗಿ ಮಿಂಚುವ ತಾರೆಯರಂತಹ ಕಲಾವಿದರು, ಅವರ ಜೀವನ ವಿಧಾನ ಎಲ್ಲವನ್ನೂ ನೋಡಿದಾಗ ಅಬ್ಬಾ ಎಂತಹ ಐಶಾರಾಮೀ ಜೀವನ ಇವರದ್ದು ಎಂದು ಕೊಳ್ಳುವುದು ಸಹಜ. ಆದರೆ ಈ ತಾರೆಯರಿಗೆ ಬಣ್ಣದ ಬದುಕಿನ ಜೊತೆಗೆ ಅವರದ್ದೇ ಆದ ವೈಯಕ್ತಿಕ ಬದುಕು ಸಹಾ ಇದೆ. ಆ ಬದುಕಲ್ಲಿ ಅವರು ಏಳು ಬೀಳು ಗಳನ್ನು ಕಂಡು, ನೋ ವಿ ನ ಕಹಿಯನ್ನು ಉಂಡು ಬಂದವರು ಎನ್ನುವುದನ್ನು ಹಂಚಿಕೊಂಡಾಗ ಅವರ ಜೀವನ ಸಹಾ ಸಾಮಾನ್ಯರ ಜೀವನಕ್ಕಿಂತ ಭಿನ್ನವಾಗಿಲ್ಲ ಎನ್ನುವುದರ ಅರಿವು ನಮಗಾಗುತ್ತದೆ.

ಕನ್ನಡ ಕಿರುತೆರೆಯಲ್ಲಿ ಪುಟ್ಟ ಗೌರಿ ಮದುವೆ ಹಾಗೂ ಪ್ರಸ್ತುತ ನಾಗಿಣಿ 2 ಧಾರಾವಾಹಿಯ ಮೂಲಕ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ನಮ್ರತಾ ಗೌಡ ಅವರ ಜೀವನ ಖಂಡಿತ ಇಂದಿನಷ್ಟು ಸಂತೋಷದಿಂದ ಈ ಹಿಂದೆ ಇರಲಿಲ್ಲ ಎನ್ನುವ ವಾಸ್ತವ ವಿಷಯಗಳನ್ನು ಸ್ವತಃ ನಟಿಯೇ ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ನಿರೂಪಣೆಯಲ್ಲಿ ಬರುತ್ತಿರುವ ಗೋಲ್ಡನ್ ಗ್ಯಾಂಗ್ ಶೋ ನಲ್ಲಿ ಹಂಚಿಕೊಂಡು, ತಮ್ಮ ಜೀವನದಲ್ಲಿ ತಮ್ಮ ಜೀವನದಲ್ಲಿ ಎದುರಾಗಿದ್ದ ಕಠಿಣತೆಗಳ ಬಗ್ಗೆ ತಿಳಿಸಿದ್ದಾರೆ.

ತುಂಬು ಕುಟುಂಬದಿಂದ ಬಂದಿರುವ ನಮ್ರತ ಗೌಡ ಅವರ ತಂದೆಯ ಮನೆಯಲ್ಲಿ, ಅವರ ತಂದೆ ತಾಯಿಗೆ ಗಂಡು ಮಗು ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಅವರ ಕುಟುಂಬದವರು ಇದ್ದರು ಎನ್ನಲಾಗಿದೆ. ಆದರೆ ಹೆಣ್ಣು ಮಗುವಾಗಿದ್ದರಿಂದ ಕುಟುಂಬದಲ್ಲಿ ಅವರ ತಂದೆ ತಾಯಿಗೆ ಗೌರವ ಸಿಗುತ್ತಿರಲಿಲ್ಲವೆಂದು, ಅದು ತನಗೆ ತಿಳಿಯಬಾರದೆಂದು ಅವರ ತಂದೆ ತಾಯಿ ನಮ್ರತಾ ಅವರನ್ನು ಸಂಗೀತ, ನೃತ್ಯ, ಕರಾಟೆ ಮತ್ತು ಶೂಟಿಂಗ್ ಎಂದು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿ ನಮ್ರತಾ ಅವರನ್ನು ಹೆಚ್ಚು ಬ್ಯುಸಿಯಾಗಿ ಇಡುತ್ತಿದ್ದರಂತೆ.

ಆದರೆ ಇದೆಲ್ಲಾ ತಿಳಿದಾಗ ನಮ್ರತಾ ತನ್ನ ತಂದೆ ತಾಯಿಯನ್ನು ಅಲ್ಲಿಂದ ಹೊರಗೆ ಕರೆತರಬೇಕು ಎನ್ನುವ ಆಲೋಚನೆ ಮಾಡಿ, ಅದನ್ನೇ ಗುರಿಯಾಗಿರಿಸಿಕೊಂಡಿದ್ದಾಗಿ ಹೇಳಿದ್ದಾರೆ. ಇನ್ನು ತಾಯಿ ಮನೆ ಕಡೆಯವರು ನಮ್ರತಾ ಸಿನಿಮಾ ಫೀಲ್ಡ್, ಬೋಲ್ಡ್ ಡ್ರೆಸ್ ಹಾಕೋದು, ಎಲ್ಲಾ ನೋಡಿ ತಮ್ಮ ಮಕ್ಕಳ ಮೇಲೆ ಅದೆಲ್ಲಾ ಪರಿಣಾಮ ಬೀರುತ್ತದೆ ಎಂದು ಬೇರೆ ರೀತಿಯಲ್ಲೇ ನೋಡುತ್ತಿದ್ದರು ಎಂದು ಹೇಳುತ್ತಾ ತಾನು ಹೆಣ್ಣಾಗಿ ಹುಟ್ಟಿದ್ದರಿಂದ ತನ್ನ ತಂದೆ ತಾಯಿ ಎದುರಿಸಿದ ಕಷ್ಟಗಳ ಬಗ್ಗೆ ನಮ್ರತಾ ಮೊದಲ ಬಾರಿಗೆ ಮಾತನಾಡಿದ್ದಾರೆ.

ಆದರೆ ಈಗ ಮೂರು ನಾಲ್ಕು ವರ್ಷಗಳಿಂದ ತಂದೆ, ತಾಯಿ ಹಾಗೂ ತಾನು ಪ್ರತ್ಯೇಕವಾಗಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಮಗಳು ಹೇಳಿದ ವಿಚಾರಗಳನ್ನೆಲ್ಲಾ ಮೌನ ಪ್ರೇಕ್ಷಕರಂತೆ ಕೇಳುತ್ತಾ ಭಾವುಕರಾಗಿದ್ದ ನಮ್ರತಾ ಗೌಡ ಅವರ ತಾಯಿ ಮಗಳು ಇಂದು ಈ ರೀತಿ ಬೆಳೆದಿರುವುದನ್ನು ನೋಡಿದಾಗ ಸಂತೋಷವಾಗುತ್ತದೆ, ಮಗಳು ಏನು ಮಾಡಿದರೂ ಒಳ್ಳೆಯದೇ ಮಾಡುತ್ತಾಳೆ ಎನ್ನುವ ಮಾತನ್ನು ಹೇಳಿದ್ದಾರೆ.

Leave a Reply

Your email address will not be published.