ಹೆಣ್ಣು ಮಗುವಿನ ಜನನದ ಸಂಭ್ರಮ: ಹೆಲಿಕಾಪ್ಟರ್ ನಲ್ಲಿ ಪುಟ್ಟ ಲಕ್ಷ್ಮಿಯನ್ನು ಮನೆಗೆ ಕರೆತಂದ ಅಪ್ಪ

Entertainment Featured-Articles News Wonder

ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಸರಿ ಸಮಾನರಲ್ಲ ಎನ್ನುವ ಭಾವನೆಯು ಇಂದಿಗೂ ನಮ್ಮ ಸಮಾಜದಲ್ಲಿ ಬಹಳಷ್ಟು ಜನರ ಮನಸ್ಸಿನಲ್ಲಿ ಸಾಕಷ್ಟು ಬಲವಾಗಿ ಬೇರುಬಿಟ್ಟಿದೆ. ಅಲ್ಲದೇ ಹೆಣ್ಣು ಮಗುವಾಗುತ್ತದೆ ಎಂದು ಗೊತ್ತಾದರೆ ಬೇಸರ ಪಟ್ಟು ಕೊಳ್ಳುವವರು ಇದ್ದಾರೆ. ಮಗುವಿನ ಜನನಕ್ಕಿಂತ ಮೊದಲೇ ಅದನ್ನು ಕೊ ಲ್ಲು ವ ಕ್ರೂರಿಗಳು ಇದ್ದಾರೆ. ಇಂತಹ ಆಲೋಚನೆಗಳ ಫಲವಾಗಿಯೇ ದೇಶದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಇಳಿಮುಖವಾಗತೊಡಗಿದಾಗ ಸರ್ಕಾರವು ಅದರ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಜಾರಿ ಮಾಡಿದೆ. ಅಲ್ಲದೇ ಹೆಣ್ಣು ಗಂಡು ನಡುವಿನ ತಾರತಮ್ಯ ನಿವಾರಣೆಗೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಹೆಣ್ಣೆಂದರೆ ಮೂಗುಮುರಿಯುವ ಜನರ ನಡುವೆಯೇ ಹೆಣ್ಣು ಹುಟ್ಟುವುದು ಅದೃಷ್ಟವೆಂದು ಸಂಭ್ರಮಿಸುವ ಜನರು ಕೂಡಾ ನಮ್ಮ ನಡುವೆ ಇದ್ದಾರೆ. ಇದಕ್ಕೊಂದು ತಾಜಾ ಉದಾಹರಣೆ ಎನ್ನುವಂತೆ ಮಹಾರಾಷ್ಟ್ರದಲ್ಲಿ ದಂಪತಿಯೊಂದು ತಮ್ಮ ಮುದ್ದು ಮಗುವನ್ನು ಹೆಲಿಕ್ಯಾಪ್ಟರ್ ನಲ್ಲಿ ಮನೆಗೆ ಕರೆತಂದು, ಮಗುವಿಗೆ ಭವ್ಯ ಸ್ವಾಗತವನ್ನು ನೀಡುವ ಮೂಲಕ ದೇಶದ ಗಮನವನ್ನು ಸೆಳೆದಿದ್ದಾರೆ. ಹೆಣ್ಣು ಮಗುವಿನ ಆಗಮನದ ಸಂತೋಷವನ್ನು ಅವರು ಸಂಭವಿಸಿರುವ ವಿಧಾನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಪುಣೆ ಪುಣೆಯ ಶೆಲ್ಗಾಂವ್ ಮೂಲದ ವೃತ್ತಿಯಲ್ಲಿ ವಕೀಲರಾಗಿರುವ ವಿಶಾಲ್ ಜರೇಕರ್ ಅವರ ಪತ್ನಿ ಜನವರಿ 22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಮಗುವಿಗೆ ರಾಜಲಕ್ಷ್ಮಿ ಎನ್ನುವ ಹೆಸರನ್ನು ಇಡಲಾಗಿದೆ. ಏಪ್ರಿಲ್ 2 ರಂದು ವಿಶಾಲ್ ಅವರ ಭೋನ್ಸಾರಿಯಿಂದ ತಮ್ಮ ಪತ್ನಿ ಹಾಗೂ ಮಗು ಇಬ್ಬರನ್ನೂ ಶೆಲ್ಗಾಂವ್ ಗೆ ಕರೆತರಲು ಒಂದು ಲಕ್ಷ ರೂಪಾಯಿಗಳ ಬಾಡಿಗೆಯನ್ನು ನೀಡಿ, ಹೆಲಿಕ್ಯಾಪ್ಟರ್ ಅನ್ನು ಬುಕ್ ಮಾಡಿದ್ದಾರೆ. ತಾಯಿ ಮತ್ತು ಮಗು ಹೆಲಿಕ್ಯಾಪ್ಟರ್ ನಲ್ಲಿ ಶೆಲ್ಗಾವ್ ಗೆ ಆಗಮಿಸಿದ್ದಾರೆ.

ಹೆಲಿಕಾಪ್ಟರ್ ಬಂದಿಳಿದ ಕೂಡಲೇ ವಿಶಾಲ್ ಚಾಲಕರ ಅವರ ಕುಟುಂಬದ ಸದಸ್ಯರು ಬಹಳ ಸಡಗರ ಹಾಗೂ ಸಂಭ್ರಮದಿಂದ ತಾಯಿ ಹಾಗೂ ಮಗುವನ್ನು ಬರಮಾಡಿಕೊಂಡಿದ್ದಾರೆ‌. ಬಹಳ ದಿನಗಳ ನಂತರ ಅವರ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿರುವುದು ಇಡೀ ಕುಟುಂಬಕ್ಕೆ ವಿಶೇಷವಾಗಿದ್ದು, ಬಹಳ ವೈಭವದಿಂದ ಮಗುವನ್ನು ಮನೆಗೆ ಬರಮಾಡಿಕೊಂಡಿರುವುದಾಗಿ, ಹೆಣ್ಣು ಮಗು ಜನಿಸಿದ ಸಂಭ್ರಮವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ ವಿಶಾಲ್.‌

Leave a Reply

Your email address will not be published.