ಹೆಣ್ಣು ಮಕ್ಕಳೇ ಇಲ್ನೋಡಿ: ಭಾರತದ ಈ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿಕ್ತಾರೆ ಮದುವೆಗೆ ಸೂಕ್ತ ಗಂಡುಗಳು

Entertainment Featured-Articles News

ಮಾರುಕಟ್ಟೆ ಎಂದರೆ ಸಾಮಾನ್ಯವಾಗಿ ಅಲ್ಲಿ ಹಣ್ಣು, ತರಕಾರಿ, ಹೂವು ಮತ್ತು ದಿನಸಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ನಮ್ಮ ನಿತ್ಯ ಜೀವನಕ್ಕೆ ಅಗತ್ಯವಿರುವ ಬಹುತೇಕ ಎಲ್ಲಾ ವಸ್ತುಗಳು ಕೂಡಾ ನಮಗೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಆದರೆ ನಾವೀಗ ನಿಮಗೆ ಒಂದು ವಿಶೇಷವಾದ ಮಾರುಕಟ್ಟೆಯ ಬಗ್ಗೆ ಹೇಳಲು ಹೊರಟಿದ್ದೇವೆ. ಈ ಮಾರುಕಟ್ಟೆಯಲ್ಲಿ ನಿಮಗೆ ಹೂವು, ಹಣ್ಣು, ತರಕಾರಿ ಅಥವಾ ದಿನನಿತ್ಯದ ಅವಶ್ಯಕತೆಯ ಸಾಮಗ್ರಿಗಳು ಸಿಗುವುದಿಲ್ಲ. ಬದಲಾಗಿ ಈ ಮಾರುಕಟ್ಟೆಯಲ್ಲಿ ನಡೆಯುವ ವಿಶೇಷ ವ್ಯಾಪಾರ ವಹಿವಾಟಿನ ಬಗ್ಗೆ ತಿಳಿದರೆ ಖಂಡಿತ ನಿಮಗೆ ಅಚ್ಚರಿಯಾಗುತ್ತದೆ. ಇಂತಹುದೊಂದು ಮಾರಾಟ ನಡೆಯುವುದಕ್ಕೆ ಸಾಧ್ಯವೇ ? ಎನ್ನುವ ಪ್ರಶ್ನೆ ಕೂಡಾ ನಿಮ್ಮಲ್ಲಿ ಮೂಡುತ್ತದೆ.

ಹೌದು, ಇದು ಖಂಡಿತವಾಗಿಯೂ ಒಂದು ವಿಶೇಷವಾದ ಮಾರುಕಟ್ಟೆ ಯಾಗಿದ್ದು,‌ ಇಲ್ಲಿ ಹುಡುಗಿಯರು ತಮಗೆ ವರನನ್ನು ಖರೀದಿಸಬಹುದಾಗಿದೆ. ಇದೆಂತಹ ಮಾರುಕಟ್ಟೆ ಬಹುಶಃ ಇದು ವಿದೇಶದಲ್ಲಿ ಇರಬಹುದು ಎಂದು ನೀವು ಅಂದುಕೊಂಡರೆ ಅದು ಖಂಡಿತಾ ತಪ್ಪಾಗುತ್ತದೆ. ಏಕೆಂದರೆ ಇಂತಹದೊಂದು ಮಾರುಕಟ್ಟೆ ನಮ್ಮ ದೇಶದಲ್ಲೇ ಇದೆ ಎಂದರೆ ನೀವು ನಂಬಲೇ ಬೇಕಾಗಿದೆ. ಭಾರತದಲ್ಲಿ ವರನನ್ನು ಖರೀದಿ ಮಾಡಲು ಒಂದು ಮಾರುಕಟ್ಟೆ ಇದೆಯಾ? ಎಂದು ನಿಮಗೆ ಅಚ್ಚರಿಯಾದರೂ ಇದು ಸತ್ಯದ ವಿಷಯವಾಗಿದೆ.

ಇಂತಹದೊಂದು ಅಚ್ಚರಿಯನ್ನು ಮೂಡಿಸುವ ಮಾರುಕಟ್ಟೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಇದೆ. ಈ ಮಾರುಕಟ್ಟೆಯನ್ನು ವಧುಗಳಿಗೆ ವರನನ್ನು ಮಾರಾಟ ಮಾಡಲು ಮೀಸಲಿಡಲಾಗಿದೆ. ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಮರಗಳ ಕೆಳಗೆ 9 ದಿನಗಳ ಕಾಲ ಇಂತಹದೊಂದು ವಿಶಿಷ್ಟವಾದ ಕಾರ್ಯಕ್ರಮವನ್ನು‌ ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗುತ್ತದೆ. ಈ ವಿಶಿಷ್ಠವಾದ ಸಂಪ್ರದಾಯವು ಕಳೆದ 700 ವರ್ಷಗಳಿಂದಲೂ ನಡೆದು ಬರುತ್ತಿದೆ ಎಂದು ಹೇಳುತ್ತಾರೆ ಇಲ್ಲಿನ ಸ್ಥಳೀಯರು.

ಮೈಥಿಲ್ ಬ್ರಾಹ್ಮಣ ಸಮುದಾಯದ ಜನರು ಜಿಲ್ಲೆಯ ವಿವಿಧ ಮೂಲೆಗಳಿಂದ ತಮ್ಮ ಹೆಣ್ಣು ಮಕ್ಕಳಿಗಾಗಿ ವರನನ್ನು ಅರಸಿ ಈ ಮಾರುಕಟ್ಟೆಗೆ ಬರುತ್ತಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟ ದೊಡ್ಡ ಸಂಖ್ಯೆಯ ವರರು ತಮ್ಮ ಪೋಷಕರೊಂದಿಗೆ ಈ ಮಾರುಕಟ್ಟೆಯಲ್ಲಿ ಹಾಜರಾಗುತ್ತಾರೆ. ಪ್ರತಿಯೊಬ್ಬ ವರನ ಹಿನ್ನೆಲೆ ಮತ್ತು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಬೆಲೆ ನಿಗಧಿ ಮಾಡಲಾಗುತ್ತದೆ. ವಧುವಿನ ಕಡೆಯವರು ವರನನ್ನು ಆರಿಸಿಕೊಳ್ಳುವ ಮೊದಲು ಆತನ ಕುಟುಂಬದ ಹಿನ್ನೆಲೆ ಹಾಗೂ ಆತನ ಶೈಕ್ಷಣಿಕ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ ಎನ್ನಲಾಗಿದೆ.

ಸ್ಥಳೀಯ ನಂಬಿಕೆಗಳ ಪ್ರಕಾರ ಇಂತಹದೊಂದು ಪದ್ಧತಿಯನ್ನು ಕಾರ್ನಟ್ ರಾಜವಂಶದ ರಾಜ ಹರಿ ಸಿಂಗ್ ಪ್ರಾರಂಭ ಮಾಡಿದರು ಎಂದು ಹೇಳಲಾಗಿದೆ. ಬೇರೆ ಬೇರೆ ಗೋತ್ರಗಳ ಜನರ ನಡುವೆ ವಿವಾಹಗಳನ್ನು ಸರಳಗೊಳಿಸುವ ಉದ್ದೇಶದಿಂದ ಇಂತಹದೊಂದು ಆಚರಣೆಯನ್ನು ಪ್ರಾರಂಭ ಮಾಡಲಾಯಿತು ಎನ್ನಲಾಗಿದ್ದು, ಶತಮಾನಗಳ ಕಾಲವೇ ಕಳೆದರೂ ಇಂದಿಗೂ ಇಂತಹದೊಂದು ಪದ್ಧತಿಯನ್ನು ನಡೆಸಿಕೊಂಡು ಬರುತ್ತಿರುವುದು ಬಹಳ ಅಚ್ಚರಿಯ ವಿಷಯವಾಗಿದೆ.

Leave a Reply

Your email address will not be published.