ಪ್ರೋಟೀನ್ ಗಾಗಿ ಪತ್ನಿಯ ಎದೆ ಹಾಲು ಕದ್ದು ಕುಡಿದ ನಟ: ಪುಸ್ತಕದಲ್ಲಿ ಎಲ್ಲಾ ಬಹಿರಂಗ ಮಾಡಿದ ನಟನ ಪತ್ನಿ
ಆಯುಷ್ಮಾನ್ ಖುರಾನಾ ಬಾಲಿವುಡ್ ನ ಸ್ಟಾರ್ ನಟರಲ್ಲಿ ಒಬ್ಬರು. ಯಾವುದೇ ಗಾಡ್ ಫಾದರ್ ಗಳು ಅಥವಾ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೇ, ತನ್ನ ಸ್ವಂತ ಪ್ರತಿಭೆಯಿಂದ ಸ್ಟಾರ್ ನಟನಾಗಿ ಬೆಳೆದಿದ್ದಾರೆ ಆಯುಷ್ಮಾನ್ ಖುರಾನಾ. ಆಯುಷ್ಮಾನ್ ಹಾಗೂ ಅವರ ಪತ್ನಿ ತಾಹೀರಾ ಕಶ್ಯಪ್ ಬಾಲಿವುಡ್ ನ ಕ್ಯೂಟ್ ಕಪಲ್ ಎನ್ನುವ ಹೆಸರನ್ನು ಪಡೆದುಕೊಂಡಿದ್ದಾರೆ. ಆಗಾಗ ಮಾದ್ಯಮಗಳ ಸುದ್ದಿಗಳಲ್ಲಿ ಈ ಇಬ್ಬರು ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇಂತಹ ಕ್ಯೂಟ್ ಕಪಲ್ ನ ಒಂದು ವಿಚಾರ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ದೊಡ್ಡ ಸದ್ದನ್ನು ಮಾಡಿದೆ.
ಹೌದು, ತಾಹೀರಾ ಮೊದಲ ಸಲ ಮಗುವಾದ ಮಹಿಳೆಯರು ಮತ್ತು ಸಮಾಜದಲ್ಲಿ ವಿವಾಹಿತ ಮಹಿಳೆಯರನ್ನು ಸ್ವೀಕರಿಸುವ ವಿಚಾರವಾಗಿ ಒಂದು ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕಕ್ಕೆ 7 ಸಿನ್ಸ್ ಆಫ್ ಬೀಯಿಂಗ್ ಎ ಮದರ್ ಎನ್ನುವ ಹೆಸರನ್ನು ಇಟ್ಟಿದ್ದಾರೆ. ಈ ಪುಸ್ತಕದಲ್ಲಿ ತಾಹಿರ ಬರೆದ ಕೆಲವು ವಿಚಾರಗಳು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ತಾಹಿರಾ ತನ್ನ ಅನುಭವಗಳನ್ನು ತಿಳಿಸುತ್ತಾ, ಪತಿ ಆಯುಷ್ಮಾನ್ ಎದೆ ಹಾಲು ಕದ್ದು ಕುಡಿದಿದ್ದರು ಎನ್ನುವ ವಿಚಾರವನ್ನು ಸಹಾ ಬರೆದುಕೊಂಡಿದ್ದಾರೆ.
ಹೌದು, ತಾಹಿರಾ ಪತಿಯ ಜೊತೆ ಎರಡನೇ ಹನಿಮೂನ್ ಗಾಗಿ, ಬ್ಯಾಂಕಾಕ್ ಗೆ ಮೂರು ದಿನಗಳ ಪ್ರವಾಸಕ್ಕೆ ಹೊರಟಿದ್ದ ವೇಳೆಯಲ್ಲಿ ಅವರ ಮೊದಲ ಮಗು ವಿರಾಜ್ ಗೆ ಏಳು ತಿಂಗಳು ವಯಸ್ಸು. ಆಗ ಆಕೆ ಮಗುವನ್ನು ತನ್ನ ತಂದೆ ತಾಯಿಗೆ ನೋಡಿಕೊಳ್ಳಲು ಹೇಳಿ, ಮಗುವಿಗೆ ಹಾಲಿನ ಸಮಸ್ಯೆ ಆಗದಿರಲಿ ಎಂದು ಎದೆ ಹಾಲನ್ನು ಬಾಟಲಿಗಳಲ್ಲಿ ತುಂಬಿಸಿ ಇಟ್ಟು, ಪ್ರವಾಸಕ್ಕೆ ಹೊರಡಲು ಸಜ್ಜಾದರು. ಪತಿಯ ಜೊತೆ ಏರ್ಪೋರ್ಟ್ ತಲುಪಿದ ಆಕೆಗೆ ಏರ್ಪೋರ್ಟ್ ನಲ್ಲಿ ಚೆಕ್ಕಿಂಗ್ ಪ್ರಕ್ರಿಯೆ ನಡೆಯುವಾಗ ಮನೆಯಿಂದ ಫೋನ್ ಕರೆ ಬಂದಿದೆ.
ಮನೆಯಿಂದ ಫೋನ್ ಮಾಡಿದವರು ಮಗುವಿನ ಹಾಲು ಖಾಲಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಕೇಳಿ ತಾಹಿರಾ ಆಶ್ಚರ್ಯ ಪಟ್ಟು, ಪತಿ ಆಯುಷ್ಮಾನ್ ಬಳಿ ಈ ವಿಚಾರವನ್ನು ಹೇಳಿದ್ದಾರೆ. ಆಗ ಆಯುಷ್ಮಾನ್ ಎದೆ ಹಾಲಿನಲ್ಲಿ ಎಲ್ಲಾ ಪ್ರೋಟೀನ್ ಗಳು ಇರುತ್ತವೆ ಎಂದು ಹೇಳಿದ್ದಾರೆ. ಅಂದರೆ ಅಸಲಿಗೆ ಅಲ್ಲಿ ನಡೆದಿದ್ದಾರೂ ಏನು ಎನ್ನುವುದನ್ನು ಸಹಾ ತಾಹಿರಾ ವಿವರಿಸಿದ್ದಾರೆ. ಮಗುವಿಗಾಗಿ ತಾಹಿರಾ ಬಾಟಲ್ ನಲ್ಲಿ ಸಂಗ್ರಹಿಸಿದ್ದ ಎದೆ ಹಾಲನ್ನು ಆಯುಷ್ಮಾನ್ ಪ್ರತಿ ದಿನ ತಮ್ಮ ಪ್ರೊಟೀನ್ ಶೇಕ್ ಜೊತೆ ಕುಡಿದು ಹಾಕಿದ್ದರಂತೆ.
ತಾಹೀರಾ ತನ್ನ ಪತಿ ಎದೆ ಹಾಲನ್ನು ಕದ್ದು ಕುಡಿದಿದ್ದರು ಎನ್ನುತ್ತಾ ನಮ್ಮ ಎರಡನೆಯ ಹನಿಮೂನ್ ಪ್ರವಾಸವನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಲು ಇಂತಹುದೊಂದು ತುಂಟತನವನ್ನು ಮಾಡಿದ್ದರು ಎಂದು ಬರೆದುಕೊಂಡಿದ್ದಾರೆ. ತಾಹಿರಾ ತಿಳಿಸಿರುವ ಈ ವಿಚಾರವಂತೂ ದೊಡ್ಡ ಸುದ್ದಿಯಾಗಿದೆ. ಈ ವಿಚಾರದ ಬಗ್ಗೆ ನೆಟ್ಟಿಗರು ಸಹಾ ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಾಗಿದ್ದಾರೆ.