ಹೂಸು ಬಿಟ್ಟು ಲಕ್ಷ ಲಕ್ಷ ಗಳಿಸುತ್ತಿದ್ದ ಸುಂದರಿ ಈಗ ಆಸ್ಪತ್ರೆಗೆ ದಾಖಲು: ವಿಚಿತ್ರವಾದರೂ ವಾಸ್ತವ!!
ಕೆಲವೊಂದು ವಿಷಯಗಳನ್ನು ಕೇಳಿದಾಗ ಅಚ್ಚರಿ ಮೂಡುವುದು ಮಾತ್ರವೇ ಅಲ್ಲದೆ ಇಂತಹ ಜನರು ಇದ್ದಾರೆಯೇ ಎಂದು ಅನುಮಾನ ಪಡುವುದು ಸಹಜ. ಆದರೆ ಇದು ವಾಸ್ತವ ಅಥವಾ ಸತ್ಯ ಎನ್ನುವುದನ್ನು ಅನೇಕರು ಒಪ್ಪುವುದಕ್ಕೆ ಸಿದ್ಧವಿರುವುದಿಲ್ಲ. ಅಂತಹದೇ ಒಂದು ಕೆಲಸವನ್ನು ಮಾಡುವ ಮಹಿಳೆಯ ಸ್ಟೆಫನಿ ಮ್ಯಾಟೋ ಹೆಸರಿನ ಈ ಮಹಿಳೆ ಹೂಸು ಬಿಡುವುದರ ಮೂಲಕ ಲಕ್ಷ ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದರು. ಈಕೆಯ ಬಗ್ಗೆ ಈಗಾಗಲೇ ಸುದ್ದಿಯಾಗಿತ್ತು. ಅಲ್ಲದೆ ಆಕೆಯ ಬಗ್ಗೆ ಜನರರು ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ಸಹಾ ನೀಡಿದ್ದರು.
ಅಮೆರಿಕಾದ ಕಿರುತೆರೆಯ 31 ವರ್ಷದಲ್ಲಿ ಸೆಲೆಬ್ರಿಟಿ ಸ್ಟೆಫನಿ ಅಮೆರಿಕದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಈಕೆ ಹೂಸು ಬಿಡುವ ಮೂಲಕ ವಾರಕ್ಕೆ 37 ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡುತ್ತಿದ್ದರು ಎನ್ನಲಾಗಿದೆ. ಆಕೆ ತಾನು ಬಿಡುವ ಗ್ಯಾಸನ್ನು ಜಾರ್ ಗಳಲ್ಲಿ ಸಂಗ್ರಹಿಸಿ, ತಮ್ಮ ಅಭಿಮಾನಿಗಳಿಗೆ ಮಾರಾಟ ಮಾಡುತ್ತಿದ್ದರು. ಆಕೆ ಕಳೆದ ವರ್ಷ ಸುಮಾರು 1.4 ಕೋಟಿ ರೂಪಾಯಿಗಳನ್ನು ಗಳಿಸಿದ್ದರು.
ಆದರೆ ಈಗ ಆಕೆಯ ಈ ವೃತ್ತಿಯೇ ಆಕೆಗೆ ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಸ್ಟೆಫನಿ ಈಗ ಆಸ್ಪತ್ರೆ ಪಾಲಾಗಿದ್ದಾರೆ. ಕೆಲವು ದಿನಗಳ ಹಿಂದೆ ಆಕೆಗೆ ಎದೆ ನೋವು ಕಾಣಿಸಿಕೊಂಡಿತ್ತು, ಆಕೆ ಆಸ್ಪತ್ರೆಗೆ ಹೋದಾಗ ವೈದ್ಯರು ಆಕೆಯನ್ನು ಪರೀಕ್ಷಿಸಿ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಆಸ್ಪತ್ರೆಗೆ ದಾಖಲಾದ ಮೇಲೆ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಸ್ವತಃ ತಾನೇ ಸ್ಟೆಫನಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿದಿನ ಹೆಚ್ಚು ಗ್ಯಾಸ್ ಬಿಡುತ್ತಿದ್ದ ಕಾರಣ ನಾನು ಈಗಆಸ್ಪತ್ರೆ ಸೇರುವಂತಾಗಿದೆ. ನಾನು ಮಾಡುತ್ತಿದ್ದ ಕೆಲಸದಿಂದ ಈಗ ಅದು ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡಿದೆ. ಅಲ್ಲದೇ ವೈದ್ಯರು ನನಗೆ ಇದರಿಂದ ಹೃದಯಾಘಾತವಾಗುವ ಸಂಭವ ಇದೆ ಎಂದು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ನಾನು ಈ ಕೆಲಸಕ್ಕೆ ನಿವೃತ್ತಿಯನ್ನು ಘೋಷಣೆ ಮಾಡುತ್ತಿದ್ದೇನೆ ಎನ್ನುವ ಮಾತುಗಳನ್ನು ಆಕೆ ಹೇಳಿಕೊಂಡಿದ್ದಾರೆ. ಸ್ಟೆಫನಿ ಆಸ್ಪತ್ರೆಗೆ ದಾಖಲಾದ ಮೇಲೆ ಅದು ಅವರ ಆದಾಯದ ಮೇಲೂ ಪರಿಣಾಮ ಬೀರಿದೆ.