ಹೂವಿನಿಂದ ಮಾನ ಮುಚ್ಚಿಕೊಂಡ ವಿಜಯ ದೇವರಕೊಂಡ: ಲೈಗರ್ ಗಾಗಿ ಬೆತ್ತಲಾದ ನಟ!!

Entertainment Featured-Articles Movies News

ತೆಲುಗು ಚಿತ್ರರಂಗದಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡು ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿರುವ ಯುವ ಸ್ಟಾರ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದ ಕಡೆಗೆ ಈಗ ಅವರ ಅಭಿಮಾನಿಗಳ ದೃಷ್ಟಿಯಿದೆ. ಸಿನಿಮಾ ಕೂಡಾ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ‌. ಸಿನಿಮಾ ಕುರಿತಾಗಿ ಆಗಾಗ ಬರುತ್ತಿರುವ ಅಪ್ಡೇಟ್ ಗಳನ್ನು ಕಂಡು ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲ ದುಪ್ಪಟ್ಟಾಗಿದೆ. ಇವೆಲ್ಲವುಗಳ ನಡುವೆ ಚಿತ್ರತಂಡ ಹಾಗೂ ನಟ ವಿಜಯ್ ದೇವರಕೊಂಡ ಸಿನಿಮಾದ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.

ಲೈಗರ್ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲೇ ಅದು ಸೋಶಿಯಲ್ ಮೀಡಿಯಾಗಳಲ್ಲಿ ಅಬ್ಬರ ಸೃಷ್ಟಿಸಿದೆ. ವಿಜಯ್ ದೇವರಕೊಂಡ ಪೋಸ್ಟರ್ ನಲ್ಲಿ ಬೆತ್ತಲಾಗಿ ಕಂಡಿದ್ದು, ಅವರು ಖಾಸಗಿ ಭಾಗವನ್ನು ಹೂವು ಬಳಸಿ ಮುಚ್ಚಿಕೊಂಡಿರುವುದನ್ನು ನಾವು ನೋಡಬಹುದಾಗಿದೆ. ವಿಜಯ್ ದೇವರಕೊಂಡ ಹೊಸ ಲುಕ್ ನೋಡಿ ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ ಮಾತ್ರವೇ ಅಲ್ಲದೇ ವೈವಿದ್ಯಮಯ ಪ್ರತಿಕ್ರಿಯೆಗಳನ್ನು ಸಹಾ ನೀಡಿದ್ದಾರೆ.

ನಟ ಬೆತ್ತಲಾಗಿ ಕಂಡಿದ್ದು, ಖಾಸಗಿ ಭಾಗಕ್ಕೆ ಹೂವನ್ನು ಅಡ್ಡ ಹಿಡಿದಿರುವುದನ್ನು ನೋಡಿ ಕೆಲವರು ಹೇಗೋ ಕಡೆ ಪಕ್ಷ ಹೂವನ್ನು ಹಿಡಿದಿರುವುದು ಸಮಾಧಾನದ ವಿಷಯ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಭಿಮಾನಿಗಳು ಮಾತ್ರ ಈ ಪೋಸ್ಟರ್ ನೋಡಿ ಥ್ರಿಲ್ ಆಗಿದ್ದಾರೆ. ಸಿನಿಮಾದಲ್ಲಿ ನಟ ಹೇಗೆ ಕಾಣುತ್ತಾರೆ ಎನ್ನುವ ಉತ್ಸುಕತೆ ಅವರಲ್ಲಿ ಮೂಡಿದೆ. ಲೈಗರ್ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದು, ನಟಿ ಅನನ್ಯಾ ಪಾಂಡೆ ವಿಜಯ ದೇವರಕೊಂಡಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಲೈಗರ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಈ ಸಿನಿಮಾದ ಮೂಲಕ ವಿಜಯ ದೇವರಕೊಂಡ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ಇದರಲ್ಲಿ ನಟ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಸಿನಿಮಾ‌ ಕುತೂಹಲ ಕೆರಳಿಸಿದೆ. ವಿಜಯ ದೇವರಕೊಂಡ ಸಿನಿಮಾ ಎಂದರೆ ಸಹಜವಾಗಿಯೇ ಒಂದು ಕ್ರೇಜ್ ಯುವಜನರಲ್ಲಿ ಇದ್ದು ಈ ಸಿನಿಮಾ ಅವರ ನಿರೀಕ್ಷೆಗಳನ್ನು ಹೇಗೆ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published.