ಹೂಂ ಅಂತೀಯಾ, ಉಹೂಂ ಅಂತೀಯಾ?? ಪುಷ್ಪದಲ್ಲಿ ಸಮಂತಾ ಹಾ ಟ್ ಲುಕ್ ನೋಡಿ ನೀವೇನಂತೀರಾ??

Written by Soma Shekar

Updated on:

---Join Our Channel---

ನಾಗಚೈತನ್ಯ ರಿಂದ ವಿ ಚ್ಛೇ ದನ ಪಡೆದ ನಂತರ ನಟಿ ಸಮಂತ ಸಾಕಷ್ಟು ಬ್ಯಸಿಯಾಗಿದ್ದಾರೆ. ತಮ್ಮ ಮನಸ್ಸಿಗೆ ಹಿಡಿಸಿದ ಹೊಸ ಸಿನಿಮಾ ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡುವತ್ತ ಗಮನ ನೀಡಿದ್ದಾರೆ. ಈಗಾಗಲೇ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಸಿನಿಮಾಗಳಿಗೂ ನಟಿ ಗ್ರೀನ್ ಸಿಗ್ನಲ್ ನೀಡಿದ್ದು, ಇದರ ನಡುವೆಯೇ ಸಮಂತಾ ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪದಲ್ಲಿ ಐ ಟಂ ಹಾಡಿಗೆ ಭರ್ಜರಿ ಹೆಜ್ಜೆಗಳನ್ನು ಹಾಕಿದ್ದಾರೆ. ಪುಷ್ಪ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತರತೆಯಿಂದ ನಿರೀಕ್ಷಿಸುತ್ತಿದ್ದಾರೆ.‌

ಪುಷ್ಪ ಸಿನಿಮಾ ಬಿಡುಗಡೆಯ ದಿನಾಂಕ ಕೂಡಾ ಈಗಾಗಲೇ ಘೋಷಣೆಯಾಗಿದೆ. ಇನ್ನು ಇದೀಗ ಪುಷ್ಪ ಸಿನಿಮಾದ ನಿರೀಕ್ಷೆ ನಟಿ ಸಮಂತಾ ಅಭಿಮಾನಿಗಳನ್ನು ಸಹಾ ಕಾಡುತ್ತಿದೆ. ಏಕೆಂದರೆ ವಿಚ್ಛೇದನದ ನಂತರ ಇದೇ ಮೊದಲ ಬಾರಿಗೆ ಸಮಂತಾ ಸಿನಿಮಾವೊಂದರ ವಿಶೇಷ ಹಾಡಿಗೆ ಹೆಜ್ಜೆಯನ್ನು ಹಾಕುತ್ತಿದ್ದಾರೆ. ಆದ್ದರಿಂದಲೇ ಅಭಿಮಾನಿಗಳಿಗೆ ಸಹಜವಾಗಿಯೇ ಕುತೂಹಲ ಮೂಡಿದೆ. ಈ ಹಾಡಿನಲ್ಲಿ ಸಮಂತಾ ಹೇಗೆ ಕಾಣಲಿದ್ದಾರೆ? ಎಂದು ತಿಳಿದುಕೊಳ್ಳುವ ಆಸಕ್ತಿ ಖಂಡಿತ ಅವರ ಅಭಿಮಾನಿಗಳಲ್ಲಿ ಇದೆ.

ಅಭಿಮಾನಿಗಳ ಕುತೂಹಲವನ್ನು ತಣಿಸುವಂತೆ ಸಮಂತಾ ಹೆಜ್ಜೆ ಹಾಕುತ್ತಿರುವ ಹಾಡಿನ ಒಂದು ಫೋಟೋ ಹೊರಬಂದಿದೆ. ನಟಿ ಸಮಂತಾ ಕೂಡಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಂಡು ಅಭಿಮಾನಿಗಳಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದಾರೆ. ಸಮಂತಾ ತಮ್ಮ ಹಾಟ್ ಹಾಟ್ ಲುಕ್ ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಸಮಂತಾ ಹಂಚಿಕೊಂಡಿರುವ ಫೋಟೋದ ಪ್ರಕಾರ ಈ ಹಾಡಿನ ಸಾಹಿತ್ಯ ಹೂಂ ಅಂತೀಯಾ ಉಹೂಂ ಅಂತೀಯಾ ಎನ್ನುವ ಅರ್ಥವನ್ನು ಹೊಂದಿದೆ. ಫೋಟೋ ನೋಡಿ ಥ್ರಿಲ್ಲಾಗಿರುವ ಅಭಿಮಾನಿಗಳು ಕಾಮೆಂಟ್ ಗಳನ್ನು ಮಾಡುವ ಮೂಲಕ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಸಮಂತಾ ಹಾಟ್ ಲುಕ್ ನೋಡಿ ಮೆಚ್ಚಿಕೊಂಡ ಅವರ ಅಭಿಮಾನಿಗಳು ಫೋಟೋವನ್ನು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

Leave a Comment