ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿಯಂತೆ! ನಟಿಯ ಶಾಕಿಂಗ್ ಹೇಳಿಕೆಗೆ ರೊಚ್ಚಿಗೆದ್ದ ಪಡ್ಡೆಗಳು, ಟ್ರೋಲ್ ಆದ ನಟಿ

Written by Soma Shekar

Published on:

---Join Our Channel---

ನಟಿ ರೆಜಿನಾ ಕಸಾಂಡ್ರ ದಕ್ಷಿಣ ಸಿನಿಮಾ ರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಈ ನಟಿಯು ಸ್ಟಾರ್ ನಟಿಯ ಪಟ್ಟವನ್ನು ಪಡೆದುಕೊಳ್ಳುವುದು ಮಾತ್ರ ಸಾಧ್ಯವಾಗಿಲ್ಲ. ಇನ್ನು ನಟಿ ರೆಜಿನಾ ಆಗಾಗ ಸಿನಿಮಾಗಳ ವಿಷಯವಲ್ಲದೇ ಕೆಲವೊಂದು ಸೂಕ್ಷ್ಮ ವಿಚಾರಗಳಲ್ಲಿ ತಾನು ನೀಡುವ ಬೋಲ್ಡ್ ಹೇಳಿಕೆಗಳಿಂದಲೂ ಸುದ್ದಿಯಾಗುತ್ತಾರೆ. ಕೆಲವೊಮ್ಮೆ ಈ ವಿಚಾರಗಳು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗುವುದು ಮಾತ್ರವೇ ಅಲ್ಲದೇ ವಿ ವಾ ದ ಗಳನ್ನು ಸಹಾ ಹುಟ್ಟುಹಾಕಿದ ಉದಾಹರಣೆಗಳು ಸಹಾ ಉಂಟು. ಈಗ ನಟಿ ಮತ್ತೊಮ್ಮೆ ತಮ್ಮ ಹೊಸ ಹೇಳಿಕೆಯೊಂದಿಗೆ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದಾರೆ.

ನಟಿ ರೆಜಿನಾ ಈ ಬಾರಿ ಹುಡುಗರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದು, ಹುಡುಗರ ಲೈಂ ಗಿ ಕ ಸಾಮರ್ಥ್ಯವನ್ನು ನಟಿಯು ಮ್ಯಾಗಿ ಗೆ ಹೋಲಿಕೆ ಮಾಡಿದ್ದಾರೆ. ನಟಿ ರೆಜಿನಾ, ನಿವೇತಾ ಥಾಮಸ್ ಜೊತೆ ನಟಿಸಿರುವ ಶಾಕಿನಿ ಡಾಕಿನಿ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದ ವೇಳೆ ನಡೆದ ಸಂದರ್ಶನದಲ್ಲಿ ಮಾತನಾಡುವ ವೇಳೆ ನಟಿ ರೆಜಿನಾ ಹುಡುಗರ ಸೆ ಕ್ಸ್ ಸಾಮರ್ಥ್ಯದ ಕುರಿತಾಗಿ ಮಾತನಾಡಿದ್ದು, ಹುಡುಗರ ಲೈಂ ಗಿ ಕ ಸಾಮರ್ಥ್ಯವನ್ನು ತಮ್ಮದೇ ಆದ ರೀತಿಯಲ್ಲಿ ಅಳೆಯುವ ಕೆಲಸವನ್ನು ಮಾಡುತ್ತಾ, ವ್ಯಂಗ್ಯವಾಡಿದ್ದಾರೆ.

ಸಂದರ್ಶನದಲ್ಲಿ ನಿರೂಪಕರು, ಮ್ಯಾಗಿ ಎರಡೇ ನಿಮಿಷದಲ್ಲಿ ರೆಡಿಯಾದ್ರೂ ಹುಡುಗಿಯರ ಮೇಕಪ್ ಮಾತ್ರ ಬೇಗ ಆಗುವುದಿಲ್ಲ ಎಂದು ಜೋಕ್ ಹೇಳಿದ್ದಾರೆ. ಈ ವೇಳೆ ಅದಕ್ಕೆ ಪ್ರತಿಕ್ರಿಯೆ ನೀಡಿದ ರೆಜಿನಾ ತನಗೂ ಮ್ಯಾಗಿ ಬಗ್ಗೆ ಒಂದು ಜೋಕ್ ಗೊತ್ತು ಎನ್ನುತ್ತಾ, ಮ್ಯಾಗಿ ಎರಡೇ ನಿಮಿಷದಲ್ಲಿ ಮುಗಿದು ಹೋಗುತ್ತೆ, ಹಾಗೆ ಹುಡುಗರದ್ದು ಕೂಡಾ ಎರಡೇ ನಿಮಿಷ ಎಂದಿದ್ದಾರೆ ನಟಿ. ನಿರೂಪಕ ನಿಗೆ ಈ ಜೋಕ್ ಮೊದಲು ಅರ್ಥವಾಗದೇ ಇದ್ದಾಗ ನಟಿಯು ಸುಮ್ಮನಾಗದೇ, ಜೋಕ್ ಅರ್ಥ ಆಗಲಿಲ್ಲವೇ ? ಎಂದು ನಿರೂಪಕನನ್ನು ಕೇಳಿದ್ದಾರೆ. ನಿರೂಪಕ ತಡವಾಗಿ ಅರ್ಥ ಮಾಡಿಕೊಂಡು ಆ ವಿಷಯವೇ ಬೇಡ ಎಂದಿದ್ದಾರೆ.

ಹೀಗೆ ನಟಿ ರೆಜಿನಾ ಕಸಾಂಡ್ರ ಹುಡುಗರ ಲೈಂ ಗಿ ಕ ಶಕ್ತಿ ಎರಡು ನಿಮಿಷಗಳ ಮ್ಯಾಗಿ ಇದ್ದಂತೆ, ಹುಡುಗರು ಮತ್ತು ಮ್ಯಾಗಿ ಎರಡೂ ಒಂದೇ, ಎರಡೇ ನಿಮಿಷಗಳಲ್ಲಿ ಮುಗಿದು ಹೋಗುತ್ತದೆ ಎನ್ನುವಂತೆ ಹೋಲಿಕೆ ಮಾಡಿ ಮಾತನಾಡಿರುವುದು ಅನೇಕರಿಗೆ ಸಿಟ್ಟು ತರಿಸಿದೆ. ಪಡ್ಡೆಗಳು ನಟಿಯನ್ನು ಭರ್ಜರಿಯಾಗಿ ಟ್ರೋಲ್ ಮಾಡುತ್ತಿದ್ದಾರೆ. ಅದು ಮಾತ್ರವೇ ಅಲ್ಲದೇ ನಟಿಯ ಬಗ್ಗೆ ಸಹಾ ಸಾಕಷ್ಟು ಕಾಮೆಂಟ್ ಗಳು ಹರಿದಾಡುತ್ತಿವೆ. ನಟಿಯ ಹೇಳಿಕೆ ಕೇಳಿ ಅನೇಕರು ಈಗ ವ್ಯಂಗ್ಯ ಮಾಡುವಂತಾಗಿದೆ.‌

Leave a Comment