ಹುಡುಗರಿಗೆ ಹೊರಗಿನಿಂದ ಬರ್ತಿದೆ ಆ ವಸ್ತು, ಇದು ಮೋಸ: ಬಿಗ್ ಬಾಸ್ ಮನೇಲಿ ಸೋನು ಆರೋಪ
ಬಿಗ್ ಬಾಸ್ ಕನ್ನಡ ಒಟಿಟಿ 1 ನೇ ಸೀಸನ್ ನಾಲ್ಕನೇ ವಾರದಲ್ಲಿ ಇದೆ. ಇನ್ನೇನು ಇನ್ನೆರಡು ವಾರಗಳಲ್ಲಿ ಓಟಿಟಿ ಬಿಗ್ ಬಾಸ್ ಮುಗಿದು, ಟಿವಿ ಯಲ್ಲಿ ಹೊಸ ಸೀಸನ್ ಆರಂಭವಾಗಲಿದ್ದು, ಬಿಗ್ ಬಾಸ್ ಕಾರ್ಯಕ್ರಮದ ಅಭಿಮಾನಿಗಳು ಶೋ ಗಾಗಿ ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರುವ ಸದಸ್ಯರಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಸಿಕ್ಕಾಪಟ್ಟೆ ಸದ್ದು ಸುದ್ದಿಯಾಗುತ್ತಿದ್ದಾರೆ. ಸೋನು ಹೆಚ್ಚು ದಿನ ಬಿಗ್ ಬಾಸ್ ಮನೆಯಲ್ಲಿ ಇರಲ್ಲ ಎಂದವರಿಗೆ ಸೋನು ಅಚ್ಚರಿ ಮೂಡಿಸುವಂತೆ ನಾಲ್ಕನೇ ವಾರವೂ ಮನೆಯಲ್ಲಿ ಇದ್ದಾರೆ. ಎಲಿಮಿನೇಷನ್ ನಿಂದ ಪ್ರೇಕ್ಷಕರು ಅವರನ್ನು ಸೇವ್ ಮಾಡುತ್ತಾ ಬರ್ತಾ ಇದ್ದಾರೆ.
ಈಗ ನಾಲ್ಕನೇ ವಾರದಲ್ಲಿ ಸೋನು ಶ್ರೀನಿವಾಸ್ ಗೌಡ ಒಂದು ಅಚ್ಚರಿಯನ್ನು ಉಂಟು ಮಾಡುವ ವಿಚಾರವನ್ನು ರಿವೀಲ್ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಹೌದು, ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಒಂದು ವಿಚಾರದ ಕಡೆಗೆ ಎಲ್ಲರ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಮನೆಯ ನಿಯಮಗಳ ಪ್ರಕಾರ ಸ್ಪರ್ಧಿಗಳು ಯಾರೂ ಹೊರಗಿನಿಂದ ತರುವ ತಿನಿಸುಗಳನ್ನು ಬಳಸುವಂತಿಲ್ಲ. ಸ್ಪರ್ಧಿಗಳನ್ನು ಮನೆಯೊಳಕ್ಕೆ ಕಳುಹಿಸುವಾಗಲೇ ಎಲ್ಲಾ ಚೆಕ್ ಮಾಡಿ ಸ್ಪರ್ಧಿಗಳಿಗೆ ಮನೆಯೊಳಕ್ಕೆ ಎಂಟ್ರಿ ನೀಡಲಾಗುತ್ತದೆ. ಸ್ಪರ್ಧಿಗಳು ಮನೆಯೊಳಗೆ ಇರುವ ಸೌಲಭ್ಯಗಳನ್ನು ಮಾತ್ರವೇ ಬಳಸಿಕೊಳ್ಳಬೇಕು.
ಆದರೆ ಸೋನು, ತನಗೆ ಹಾರ್ಲಿಕ್ಸ್ ಕಳಿಸುವಂತೆ ತಮ್ಮ ಅಮ್ಮನ ಬಳಿ ಒಂದು ಬೇಡಿಕೆಯನ್ನು ಇಟ್ಟಿದ್ದಾರೆ. ಈ ವೇಳೆ, ಮನೆಯಿಂದ ಯಾವುದೇ ವಸ್ತುಗಳನ್ನು ತರಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ, ಈ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ ಎಂದಿದ್ದಾರೆ. ಮನೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಆಗ ಸೋನು ಹುಡುಗರಿಗೆ ಹೊರಗಿನಿಂದ ಪ್ರೋಟೀನ್ ಪೌಡರ್ ಕಳುಹಿಸುತ್ತಾರೆ. ಆದರೆ ನಮಗೆ ಯಾಕೆ ಹಾರ್ಲಿಕ್ಸ್ ತರಿಸಿಕೊಳ್ಳೋಕೆ ಅವಕಾಶ ಇಲ್ಲ, ಇದು ಮೋಸ ಎಂದು ಹೇಳಿದ್ದು, ಸೋನು ಮಾತಿಗೆ ಇತರರು ಸಹಾ ಮೌನಕ್ಕೆ ಜಾರಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸೋನು ತಮ್ಮ ಬಾಯಿಗೆ ಫಿಲ್ಟರ್ ಇಲ್ಲದ ಹಾಗೆ ಮಾತನಾಡುತ್ತಾ ಈಗಾಗಲೇ ಬಹಳಷ್ಟು ಜನರ ಅಸಮಾಧಾನಕ್ಕೆ ಕಾರಣವಾಗಿದ್ದಾರೆ. ಕಾರ್ಯಕ್ರಮದ ನಿರೂಪಕ, ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಸಹಾ ಸೋನುಗೆ ಬುದ್ಧಿ ಹೇಳಿದ್ದಾಗಿದೆ. ಆದರೂ ಸೋನು ಮಾತು ಮಾತ್ರ ಕಡಿಮೆಯಾಗಿಲ್ಲ. ನಾಲ್ಕು ವಾರ ಮುಗಿಸಿರುವ ಸೋನು ಫೈನಲ್ ಗೂ ಎಂಟ್ರಿ ಕೊಟ್ಟರೂ ಸಹಾ ಅಚ್ಚರಿಯೇನಿಲ್ಲ. ಅನೇಕರು ಸೋನು ಇಲ್ಲದೇ ಹೋದ್ರೆ ಮನರಂಜನೆ ಇರಲ್ಲ ಎಂದು ಸಹಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.