ಹುಡುಗನ್ನ ಬಿಟ್ಟು ಅಂಕಲ್ ಜೊತೆ ಡೇಟ್: ಹಿಗ್ಗಾಮುಗ್ಗಾ ಟ್ರೋಲ್ ಆದ ನಟಿ ಸುಷ್ಮಿತಾ ಸೇನ್!!

Entertainment Featured-Articles Movies News

ಬಾಲಿವುಡ್ ನಟಿ, ಮಾಜಿ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ಮತ್ತೊಮ್ಮೆ ಮಾಧ್ಯಮಗಳ ಪ್ರಮುಖ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ, ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ತಾವು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಬಹಿರಂಗಪಡಿಸುತ್ತಾ, ರೋಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರು ಶೇರ್ ಮಾಡಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ದೊಡ್ಡ ಸದ್ದು ಹಾಗೂ ಸುದ್ದಿಯನ್ನು ಮಾಡುತ್ತಿದೆ.

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರಿಗೆ ಪ್ರಸ್ತುತ 46 ವರ್ಷ ವಯಸ್ಸು. ನಟಿ ಇನ್ನು ವಿವಾಹ ಮಾಡಿಕೊಂಡಿಲ್ಲ. ಇಬ್ಬರು ಮಕ್ಕಳನ್ನು ದತ್ತು ಪಡೆದಿರುವ, ಈ ನಟಿ ಕಳೆದ ಡಿಸೆಂಬರ್ ವರೆಗೆ ತನಗಿಂತ ಕಿರಿಯ ವಯಸ್ಸಿನವರಾದ ರೋಹ್ಮನ್ ಶಾಲ್ ಜೊತೆಗೆ ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿದ್ದವರು. ಇವರಿಬ್ಬರು ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸುಷ್ಮಿತಾ ಸೇನ್ ಮತ್ತೂರು ರೋಹ್ಮನ್ ಫೋಟೋಗಳು ಮತ್ತು ವೀಡಿಯೊಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದ್ದವು.

ಆದರೆ ಡಿಸೆಂಬರ್ 3 ರಂದು ಇವರಿಬ್ಬರೂ ತಾವು ದೂರವಾಗುತ್ತಿರುವ ವಿಚಾರವನ್ನು ತಿಳಿಸಿದರು. ಅದಕ್ಕೆ ಮೊದಲು ಇಬ್ಬರು ವಿದೇಶ ಪ್ರವಾಸ, ಪಾರ್ಟಿಗಳು ಮತ್ತು ಜಿಮ್ಮಿನಲ್ಲಿ ಜೊತೆ ಜೊತೆಗೆ ಕಾಣಿಸಿಕೊಳ್ಳುತ್ತಿದ್ದರು. ತಮ್ಮ ನಡುವೆ ಮೂಡಿದ ಭಿನ್ನಾಭಿಪ್ರಾಯಗಳ ಕಾರಣದಿಂದ ತಾವು ಬೇರೆ ಆಗುತ್ತಿರುವುದಾಗಿ ಇಬ್ಬರು ಹೇಳಿಕೊಂಡಿರು. ಬಾಲಿವುಡ್ ನಲ್ಲಿ ಇಂತಹ ಬ್ರೇಕಪ್ ಕಳುವು ಸಾಮಾನ್ಯವಾದ ವಿಷಯವಾಗಿದೆ. ರೋಹ್ಮನ್ ಜೊತೆ ಬ್ರೇಕ್ ಅಪ್ ನಂತರ ಸುಶ್ಮಿತಾ ಈಗ ಲಲಿತ್ ಮೋದಿ ಜೊತೆ ಕಾಣಿಸಿಕೊಂಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಬಾಲಿವುಡ್ ತಾರೆ ಸುಶ್ಮಿತಾ ಸೇನ್ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್‌ನ ಮೊದಲ ಅಧ್ಯಕ್ಷ ಮತ್ತು ಕಮಿಷನರ್ ಆಗಿರುವ ಮೋದಿ ಅವರು ನಟಿಯೊಂದಿಗೆ ಡೇಟಿಂಗ್ ನಡೆಸುತ್ತಿರುವುದಾಗಿ ಟ್ವೀಟ್‌ನಲ್ಲಿ ತಿಳಿಸಿದ್ದು, ನನ್ನ ಉತ್ತಮ ಅರ್ಧದಿಂದ ಹೊಸ ಜೀವನ ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

ಸುಷ್ಮಿತಾ ಸೇನ್ ಜೊತೆ ಹೊಸ ಜೀವನ ಆರಂಭ ಎಂದಿರುವ ಅವರು ಮದುವೆಯಾಗುವ ಇರಾದೆ ಇಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ ಮುಂದೆ ಆಗಬಹುದು ಎನ್ನುವ ಆಶಯವನ್ನು ಸಹಾ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ರೋಹ್ಮನ್ ಜೊತೆ ಬ್ರೇಕಪ್ ಆದ ಆರು ತಿಂಗಳಲ್ಲೇ ನಟಿ ಲಲಿತ್ ಮೋದಿ ಜೊತೆ ಕಾಣಿಸಿಕೊಂಡಿರುವುದನ್ನು ನೋಡಿ ನೆಟ್ಟಿಗರು ಟೀಕೆ ಟಿಪ್ಪಣಿಗಳನ್ನು ಮಾಡಿದ್ದಾರೆ. ಅನೇಕರು ನಟಿಯನ್ನು ಹಣಕ್ಕಾಗಿ ಇದೆಲ್ಲಾ ಎಂದು ಹೀಗಳೆದಿದ್ದಾರೆ.

Leave a Reply

Your email address will not be published.