ಹುಟ್ಟಿದ್ದು 15 ನಿಮಿಷಗಳ ಅಂತರವೇ ಆದರೂ, ಈ ಅವಳಿ ಮಕ್ಕಳು ಹುಟ್ಟಿದ ವರ್ಷ ಮಾತ್ರ ಬೇರೆ ಬೇರೆ!!

Written by Soma Shekar

Published on:

---Join Our Channel---

ಅವಳಿ ಮಕ್ಕಳು ಅಥವಾ ಅವಳಿ ಜವಳಿ ಮಕ್ಕಳು ಕಡಿಮೆ ಸಮಯದ ಅಂತರದಲ್ಲಿ ಜನಿಸುವುದು ಸಾಮಾನ್ಯವಾದ ವಿಷಯವೇ ಆಗಿದೆ. ಆದರೆ ಈಗ ಇಲ್ಲೊಂದು ಅವಳಿ ಮಕ್ಕಳು ಮಾತ್ರ ಬೇರೆ ಬೇರೆ ವರ್ಷದಲ್ಲಿ ಜನಿಸುವ ಮೂಲಕ ಎಲ್ಲರಿಗೂ ಅಚ್ಚರಿ ಯನ್ನು ಉಂಟು ಮಾಡಿವೆ. ಈಗ ನಿಮಗೆ ಇದು ಹೇಗೆ ಸಾಧ್ಯವಾಯಿತು? ಅವಳಿ ಮಕ್ಕಳು ಬೇರೆ ಬೇರೆ ವರ್ಷದಲ್ಲಿ ಜನಿಸುವುದೇ?? ಎನ್ನುವ ಪ್ರಶ್ನೆ ಮೂಡಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಉತ್ತರ ತಿಳಿದ ಮೇಲೆ ಖಂಡಿತ ಇದೊಂದು ಅಚ್ಚರಿಯ ಘಟನೆ ಎನ್ನುವುದನ್ನು ತಪ್ಪದೇ ಒಪ್ಪುವಿರಿ.

ಹೌದು ಈ ಅವಳಿ ಮಕ್ಕಳು ಕೇವಲ 15 ನಿಮಿಷಗಳ ಅಂತರದಲ್ಲಿ ಜನಿಸುವ ಮೂಲಕ ವಿಭಿನ್ನ ವರ್ಷಗಳಲ್ಲಿ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ಈ ಅವಳಿ ಮಕ್ಕಳು ಇದೀಗ ಇಡೀ ವಿಶ್ವದ ಗಮನವನ್ನು ಸೆಳೆದಿರುವುದು ಮಾತ್ರವೇ ಅಲ್ಲದೇ ಎಲ್ಲೆಡೆ ಸುದ್ದಿಯಾಗಿದ್ದಾರೆ. ಹೌದು ಹದಿನೈದು ನಿಮಿಷಗಳ ಅಂತರ ಇವರ ಜನ್ಮದಿನಕ್ಕೆ ಒಂದು ವಿಶೇಷತೆ ನೀಡಿದೆ.

ಮೊದಲ ಮಗು ಡಿಸೆಂಬರ್ 31 ರ ರಾತ್ರಿ 11:45 ಕ್ಕೆ ಜನಿಸಿದೆ. ಮತ್ತೊಂದು ಮಗುವು ಅದೇ ರಾತ್ರಿ 12 ಕ್ಕೆ ಜನಿಸಿದ್ದು ಆ ಸಮಯದ ಪ್ರಕಾರ ಅದು ಜನವರಿ 1, 2022 ಆಗಿದೆ. ಈ ಮೂಲಕ ಈ ಅವಳಿ ಮಕ್ಕಳು ಎರಡು ವಿಭಿನ್ನ ವರ್ಷಗಳಲ್ಲಿ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳಲಿದ್ದಾರೆ. ಗ್ರೀನ್ ಫೀಲ್ಡ್ ನಗರದ ಫಾತಿಮಾ ಮ್ಯಾಡ್ರಿಗಲ್ ಹಾಗೂ ರಾಬರ್ಟ್ ಟ್ರುಜಿಲ್ಲೊಗೆ ಆಲ್ಪ್ರೆಡೋ ಹೆಸರಿನ ದಂಪತಿಗೆ ಜನಿಸಿದ ಮಕ್ಕಳೇ ವಿಶೇಷವಾಗಿ ಜನ್ಮಿಸಿರುವ ಮಕ್ಕಳಿದ್ದಾರೆ.

ತಮ್ಮ ಮಕ್ಕಳು ಹೀಗೆ ಜನಿಸಿರುವುದಕ್ಕೆ ಅವರ ತಂದೆ ತಾಯಿ ಇಬ್ಬರೂ ಸಹಾ ವರ್ಷವನ್ನು ವ್ಯಕ್ತಪಡಿಸಿದ್ದಾರೆ ಅಲ್ಲದೇ ಈ ಮಕ್ಕಳ ಹೆರಿಗೆ ಮಾಡಿಸಿದ ವೈದ್ಯರು ಸಹಾ ಇಂತಹುದೊಂದು ಅಪರೂಪದ ಘಟನೆಯ ಬಗ್ಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ ಹಾಗೂ ಬಹಳ ಖುಷಿಯನ್ನು ಪಟ್ಟಿದ್ದಾರೆ. ಇನ್ಮುಂದೆ ಹೊಸ ವರ್ಷವನ್ನು ಆಚರಣೆ ಮಾಡಲು ಇದಕ್ಕಿಂತ ವಿಶೇಷ ಏನಿದೆ ಎಂದು ಮಕ್ಕಳ ತಂದೆ ತಾಯಿ ಖುಷಿ ಪಟ್ಟಿದ್ದಾರೆ.

Leave a Comment